ನಾಳೆ ಮಧ್ಯಾಹ್ನ 3 ಗಂಟೆಗೆ ಪಿಯುಸಿ ಫಲಿತಾಂಶ

Posted By:

2016- 2017ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಮೇ 11ರಂದು ಪ್ರಕಟವಾಗಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ ಶಿಖಾ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಇಂದು (ಮಂಗಳವಾರ) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಖಾ ಅವರು, ಮೇ 11ರಂದು ಮಧ್ಯಾಹ್ನ 3ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಇಲಾಖೆಯ ಅಧಿಕೃತ ವೆಬ್‍ಸೈಟ್ www.pue.kar.nic.in  ನಲ್ಲಿ ಪ್ರಕಟಿಸಲಾಗುವುದು ಮತ್ತು ಮೇ 12 ರಂದು ಆಯಾ ಕಾಲೇಜುಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ ತಿಳಿಸಿದ್ದಾರೆ.[ಮೇ 12 ಕ್ಕೆ ಎಸ್ ಎಸ್ ಎಲ್ ಸಿ ರಿಸಲ್ಟ್]

ಮೇ 11ಕ್ಕೆ ಪಿಯುಸಿ ಫಲಿತಾಂಶ

ಕಳೆದ ಮಾರ್ಚ್ 9ರಿಂದ 27 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ 6,84,490 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಈ ಪೈಕಿ 3,48,562 ವಿದ್ಯಾರ್ಥಿಗಳು ಹಾಗೂ 3,35,909 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 19 ಜನ ತೃತೀಯ ಲಿಂಗಿಗಳು ಪರೀಕ್ಷೆ ಬರೆದಿರೋದು ವಿಶೇಷ.

ಏಪ್ರಿಲ್ 5 ರಿಂದ ರಾಜ್ಯಾದ್ಯಂತ 48 ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ಆರಂಭವಾಗಿತ್ತು. ಸುಮಾರು 37 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆದಿದ್ದು 21 ಸಾವಿರ ಉಪನ್ಯಾಸಕರು ಮೌಲ್ಯಮಾಪನದಲ್ಲಿ ಭಾಗಿಯಾಗಿದ್ದರು

ಈ ವರ್ಷ ಭಾರೀ ಭದ್ರತೆಯೊಂದಿಗೆ ಪರೀಕ್ಷೆ ನಡೆಸಿತ್ತು. ಕರ್ನಾಟಕ ಸೆಕ್ಯೂರ್ ಎಕ್ಸಾಂಮೀನೇಷನ್ ಸಿಸ್ಟಮ್ ಪ್ರೋಗ್ರಾಂ ಅಳವಡಿಸಿಕೊಂಡಿದ್ದು, ಜಿಲ್ಲಾ ಖಜಾನೆಗಳಿಗೆ ಸಿಸಿಟಿವಿ, ಮ್ಯಾಗ್ನೆಟಿಕ್ ಡೋರ್ಗಳು, ಬಯೋ ಮೆಟ್ರಿಕ್ ಪದ್ಧತಿ ಸೇರಿದಂತೆ ಇನ್ನಿತರ ಹೈ ಸೆಕ್ಯುರಿಟಿ ಸಿಸ್ಟಮ್ ಅಳವಡಿಕೆ ಮಾಡಲಾಗಿತ್ತು.

English summary
Karnataka PU board will going to announce PUC results on May 11, PU board director C Shikha said .
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia