ಕೊರೋನಾ ಸಂಕಷ್ಟದ ನಡುವೆಯೂ ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭಗೊಂಡಿದೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಒಟ್ಟು 2,12,652 ವಿದ್ಯಾರ್ಥಿಗಳು ಬರೆಯುತ್ತಿದ್ದು, ಅದರಲ್ಲಿ 1,29,975ವಿದ್ಯಾರ್ಥಿಗಳು ಮತ್ತು 82,677 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ.
ರಾಜ್ಯಾದ್ಯಂತ 305 ಪರೀಕ್ಷಾ ಕೇಂದ್ರಗಳಲ್ಲಿ ಇಂದಿನಿಂದ ಪೂರಕ ಪರೀಕ್ಷೆ ಆರಂಭಗೊಂಡಿದ್ದು, ಪರೀಕ್ಷೆಗಳು ಸೆ. 19ರವರೆಗೆ ನಡೆಯಲಿವೆ. ಕೋವಿಡ್ ಹಿನ್ನೆಲೆಯಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆಯನ್ನು ನಡೆಸಲಾಗುತ್ತಿದೆ.
2nd puc supplementary time table 2020 : ದ್ವಿತೀಯ ಪಿಯುಸಿ ಪೂರಕ ಸೆ.7 ರಿಂದ ಆರಂಭ
ಪರೀಕ್ಷಾ ವೇಳಾ ಪಟ್ಟಿ:
ಇಂದು ಉರ್ದು, ಸಂಸ್ಕೃತ ಪರೀಕ್ಷೆ
ಸೆ. 8 ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
ಸೆ. 9 ತೃತೀಯ ಭಾಷೆ ಹಿಂದಿ, ಸೆ. 10 ಇಂಗ್ಲೀಷ್
ಸೆ. 11 ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಸೆ. 12 ಅರ್ಥಶಾಸ್ತ್ರ, ಭೌತಶಾಸ್ತ್ರ
ಸೆ. 14 ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ
ಸೆ. 15 ಕನ್ನಡ
ಸೆ. 16 ರಾಜ್ಯ ಶಾಸ್ತ್ರ ಮತ್ತು ಬೇಸಿಕ್ ಗಣಿತಶಾಸ್ತ್ರ
ಸೆ. 18 ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ
ಸೆ. 19 ಭೂಗೋಳ ಶಾಸ್ತ್ರ ಮತ್ತು ಮನಶಾಸ್ತ್ರ