ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟ.. ಹುಡುಗಿಯರದ್ದೇ ಮೇಲುಗೈ! ಹಾಸನ ಪ್ರಥಮ ಸ್ಥಾನ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶೇ 73.70 ಫಲಿತಾಂಶ ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.1.8ಹೆಚ್ಚಿನ ಫಲಿತಾಂಶ ಬಂದಿದೆ. . ಹಾಸನ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆಯ ಕಡೆಯ ಸ್ಥಾನದಲ್ಲಿದೆ. ಈ ವರ್ಷವೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ.

 ಎಸ್‌ಎಸ್‌ಎಲ್‌ಸಿ ಫಲಿತಾಂಶ ಹಾಸನ ಪ್ರಥಮ ಸ್ಥಾನ

 

ಆಶ್ಚರ್ಯಕರ ವಿಷಯವೆಂದರೆ ಇದೇ ಮೊದಲ ಭಾರಿ ಹಾಸನ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದ್ದು, ರಾಮನಗರ ಎರಡನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಕಾಯ್ದುಕೊಂಡಿದೆ.ಆನೇಕಲ್ ವಿದ್ಯಾರ್ಥಿನಿ ಸೃಜನಾ ಮತ್ತು ಕುಮಟಾದ ನಾಗಾಂಜಲಿ 625 ಕ್ಕೆ625 ಅಂಕಗಳನ್ನು ಪಡೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ತಿಳಿಸಿದ್ದಾರೆ.

2018-19ನೇ ಸಾಲಿನಲ್ಲಿ 8,25,468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 608336 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಶೇ 79.59ರಷ್ಟು ಬಾಲಕಿಯರು, ಶೇ 68.46ರಷ್ಟು ಬಾಲಕರು ಉತ್ತೀರ್ಣಗೊಂಡಿದ್ದಾರೆ. ಇನ್ನೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದು, ಗ್ರಾಮೀಣ ಶೇ. 76.67 ವಿದ್ಯಾರ್ಥಿಗಳು ಮತ್ತು ನಗರದಲ್ಲಿ ಶೇ. 70.07 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು

* 5202 ಸರ್ಕಾರಿ ಶಾಲೆಗಳಲ್ಲಿ 21,68,44 ವಿದ್ಯಾರ್ಥಿಗಳು ಉತ್ತೀರ್ಣ, ಶೇ 77.84ರಷ್ಟು ಫಲಿತಾಂಶ

* 3243 ಅನುದಾನಿತ ಶಾಲೆಗಳಲ್ಲಿ 155111 ವಿದ್ಯಾರ್ಥಿಗಳು ಉತ್ತೀರ್ಣ, ಶೇ 77.21ರಷ್ಟು ಫಲಿತಾಂಶ

* 6002 ಅನುದಾನ ರಹಿತ ಶಾಲೆಗಳಲ್ಲಿ 214360 ವಿದ್ಯಾರ್ಥಿಗಳು ಉತ್ತೀರ್ಣ ಶೇ 82.72ರಷ್ಟು ಫಲಿತಾಂಶ

ಮಾಧ್ಯಮವಾರು ಫಲಿತಾಂಶ

* ಕನ್ನಡ ಮಾಧ್ಯಮದ 346103 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು 70.1ರಷ್ಟು ಫಲಿತಾಂಶ

* ಆಂಗ್ಲ ಮಾಧ್ಯಮದ 238471 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು 80.88ರಷ್ಟು ಫಲಿತಾಂಶ

* ಹಿಂದಿ ಮಾಧ್ಯಮದ 168 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, 48.81 ರಷ್ಟು ಫಲಿತಾಂಶ

ಜಿಲ್ಲಾವಾರು ಶೇಕಡ ಫಲಿತಾಂಶ:

1 ಹಾಸನ 89.33

2 ರಾಮನಗರ 88.49

3 ಬೆಂಗಳೂರು ಗ್ರಾಮಾಂತರ 88.34

 

4 ಉತ್ತರ ಕನ್ನಡ 88.12

5 ಉಡುಪಿ 87.97

6 ಚಿತ್ರದುರ್ಗ 87.46

7 ಮಂಗಳೂರು 86.73

8 ಕೋಲಾರ 86.71

9 ದಾವಣಗೆರೆ 85.94

10 ಮಂಡ್ಯ 85.65

11 ಮಧುಗಿರಿ 84.81

12 ಶಿರಸಿ 84.67

13 ಚಿಕ್ಕೋಡಿ 84.09

14 ಚಿಕ್ಕಮಗಳೂರು 82.76

15 ಚಾಮರಾಜನಗರ 80.58

16 ಕೊಪ್ಪಳ 80.45

17 ಮೈಸೂರು 80.32

18 ತುಮಕೂರು 79.92

19 ಹಾವೇರಿ 79.75

20 ಚಿಕ್ಕಬಳ್ಳಾಪುರ 79.69

21 ಶಿವಮೊಗ್ಗ 79.13

22 ಕೊಡಗು 78.81

23 ಬಳ್ಳಾರಿ 77.98

24 ಬೆಳಗಾವಿ 77.43

25 ವಿಜಯಪುರ 77.36

26 ಬೆಂಗಳೂರು ಉತ್ತರ 76.21

27 ಬಾಗಲಕೋಟೆ 75.28

28 ಧಾರವಾಡ 75.05

29 ಬೀದರ್ 74.96

30 ಕಲಬುರಗಿ 74.65

31 ಗದಗ 74.05

32 ಬೆಂಗಳೂರು ದಕ್ಷಿಣ 68.83

33 ರಾಯಚೂರು 60.33

34 ಯಾದಗಿರಿ 53.95

 ಎಸ್‌ಎಸ್‌ಎಲ್‌ಸಿ ಫಲಿತಾಂಶ ಹಾಸನ ಪ್ರಥಮ ಸ್ಥಾನ

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ www.karresults.nic.in ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಅಲ್ಲದೆ, ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಮೂಲಕ ಫಲಿತಾಂಶ ಕಳುಹಿಸುವ ವ್ಯವಸ್ಥೆಯನ್ನೂ ಮಂಡಳಿ ಮಾಡಿಕೊಂಡಿದೆ.

ಫಲಿತಾಂಶ ಈ ಕೆಳಗೆ ನೀಡಿರುವ ಸ್ಟೆಪ್ ಮೂಲಕ ಚೆಕ್ ಮಾಡಿಕೊಳ್ಳಿ:

ಸ್ಟೆಪ್ 1: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆಫೀಶಿಯಲ್ ವೆಬ್‌ಸೈಟ್ www.karresults.nic.in ಗೆ ಲಾಗಿನ್ ಆಗಿ

ಸ್ಟೆಪ್ 2: ಹೋಂ ಪೇಜ್‌ನಲ್ಲಿ ಮೂಡುವ ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ

ಸ್ಟೆಪ್ 3: ಆ ನೋಟಿಫಿಕೇಶನನ್ನಲ್ಲಿ ಕರ್ನಾಟಕ ಎಸ್ಎಸ್ಎಲ್ ಸಿ 2019 ರ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4: ಅಲ್ಲಿ ಕೇಳಿರುವ ಜಾಗದಲ್ಲಿ ನಿಮ್ಮ ರೋಲ್ ನಂಬರ್ ನಮೂದಿಸಿ

ಸ್ಟೆಪ್ 5: ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 6: ರಿಸಲ್ಟ್ ಪ್ರತಿಯ ಪ್ರಿಂಟೌಟ್ ತೆಗೆದುಕೊಳ್ಳಿ

ಎಸ್‌ಎಮ್ಎಸ್ ಮೂಲಕವೂ ತಮ್ಮ ರಿಸಲ್ಟ್ ಚೆಕ್ ಮಾಡಿಕೊಳ್ಳಬಹುದಾಗಿದೆ. ಎಸ್ಎಮ್ಎಸ್ -ಕೆಎಆರ್ <ಸ್ಪೇಸ್> ರೋಲ್ ನಂಬರ್ ನಮೂದಿಸಿ 56263 ಗೆ ಸೆಂಡ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
SSLC results declared today and here we are giving details in percentage
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X