ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯನ್ನು ಬರೆದು ಅನುತ್ತೀರ್ಣರಾದ ಅಭ್ಯರ್ಥಿಗಳಿಗಾಗಿ ಜೂನ್‌ನಲ್ಲಿ ಪೂರಕ ಪರೀಕ್ಷೆಗಳು ನಡೆಯಲಿವೆ. 2019 ರ ಮಾರ್ಚ್‌ / ಏಪ್ರಿಲ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಹಿಂದಿನ ಸಾಲಿನಲ್ಲಿ ಅನುತ್ತೀರ್ಣರಾದ ಎಲ್ಲಾ ಅರ್ಹ ಪುನರಾವರ್ತಿತ ಅಭ್ಯರ್ಥಿಗಳಿಗೆ ಜೂನ್ 2019 ರಲ್ಲಿ ನಡೆಯುವ ಎಸ್.ಎಸ್‌.ಎಲ್‌.ಸಿ ಪೂರಕ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಪೂರಕ ಪರೀಕ್ಷೆಯ ವೇಳಾಪಟ್ಟಿ , ಪೂರಕ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಶುಲ್ಕದ ವಿವರವನ್ನು ಇಲ್ಲಿ ನೀಡಲಾಗಿದೆ.

 ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷೆಯ ಸಂಪೂರ್ಣ ಮಾಹಿತಿ

 

ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷೆಗಳು ಜೂನ್ 21,2019 ರಿಂದ ಜೂನ್ 28,2019 ರ ವರೆಗೆ ನಡೆಲಿದ್ದು, ಪರೀಕ್ಷಾ ವೇಳಾ ಪಟ್ಟಿಯನ್ನು ಇಲ್ಲಿ ನೀಡಲಾಗಿರುತ್ತದೆ.

ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷಾ ವೇಳಾಪಟ್ಟಿ 2019:

ದಿನಾಂಕವಿಷಯವಿಷಯದ ಕೋಡ್ಸಮಯ
21-06-2019ಗಣಿತ81ಬೆ. 9:30 ರಿಂದ ಮಧ್ಯಾಹ್ನ 12:30
ಸಮಾಜಶಾಸ್ತ್ರ95ಬೆ. 9:30 ರಿಂದ ಮಧ್ಯಾಹ್ನ12:30
22-06-2019ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್

ಇಂಜಿನಿಯರಿಂಗ್ -2

71ಬೆ. 9:30 ರಿಂದ ಮಧ್ಯಾಹ್ನ12:45

ಇಂಜಿನಿಯರಿಂಗ್ ಗ್ರಾಫಿಕ್ಸ್ -2

72ಮ. 2:00 ರಿಂದ ಸಂಜೆ 5:15
ಎಲಿಮೆಂಟ್ಸ್ ಆಫ್ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್73ಬೆ. 9:30 ರಿಂದ ಮಧ್ಯಾಹ್ನ 12:45
ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್74ಬೆ. 9:30 ರಿಂದ ಮಧ್ಯಾಹ್ನ 12:45
ಅರ್ಥಶಾಸ್ತ್ರ96ಬೆ. 9:30 ರಿಂದ ಮಧ್ಯಾಹ್ನ12:30
24-06-2019ವಿಜ್ಞಾನ83ಬೆ. 9:30 ರಿಂದ ಮಧ್ಯಾಹ್ನ 12:30
ರಾಜ್ಯಶಾಸ್ತ್ರ97ಬೆ. 9:30 ರಿಂದ ಮಧ್ಯಾಹ್ನ12:30
ಕರ್ನಾಟಕ ಸಂಗೀತ / ಹಿಂದೂಸ್ಥಾನಿ ಸಂಗೀತ98ಮ. 2:00 ರಿಂದ ಸಂಜೆ 5:15
25-06-2019ಕನ್ನಡ01 ಬೆ. 9:30 ರಿಂದ ಮಧ್ಯಾಹ್ನ 12:30
ತೆಲುಗು04
ಹಿಂದಿ06
ಮರಾಠಿ08
ತಮಿಳು10
ಉರ್ದು12
ಇಂಗ್ಲೀಷ್14
ಸಂಸ್ಕೃತ16
26-06-2019ಸಮಾಜ ವಿಜ್ಞಾನ85ಬೆ. 9:30 ರಿಂದ ಮಧ್ಯಾಹ್ನ12:30
27-06-2019ಇಂಗ್ಲೀಷ್31ಬೆ. 9:30 ರಿಂದ ಮಧ್ಯಾಹ್ನ 12:30
ಕನ್ನಡ33
28-06-2019ಹಿಂದಿ61ಬೆ. 9:30 ರಿಂದ ಮಧ್ಯಾಹ್ನ12:00
ಕನ್ನಡ62

ಆಂಗ್ಲ63
ಅರೇಬಿಕ್64
ಪರ್ಷಿಯನ್65
ಉರ್ದು66
ಸಂಸ್ಕೃತ67
ಕೊಂಕಣಿ68
ತುಳು69

ಎಸ್‌ಎಸ್‌ಕ್ಯೂಎಫ್‌ ಪರೀಕ್ಷಾ ವಿಷಯಗಳು

ಮಾಹಿತಿ ತಂತ್ರಜ್ಞಾನ

86

ಬೆ. 9:30 ರಿಂದ ಮಧ್ಯಾಹ್ನ 11:45
ರೀಟೇಲ್87
ಆಟೋಮೊಬೈಲ್88
ಹೆಲ್ತ್ ಕೇರ್89
ಬ್ಯೂಟಿ ಮತ್ತು ವೆಲ್‌ನೆಸ್90

 

ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಪೂರಕ ಪರೀಕ್ಷೆಗೆ ಹೆಸರನ್ನು ನೊಂದಾಯಿಸಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ವಿದ್ಯಾರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ http://www.kseeb.kar.nic.in/ ಗೆ ಭೇಟಿ ಕೊಡಿ

ಸ್ಟೆಪ್ 2: ನಂತರ ಹೋಂ ಪೇಜ್‌ನಲ್ಲಿರುವ School Login ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ಹೊಸ ಪುಟ ತೆರೆಯುತ್ತದೆ ಇಲ್ಲಿ ನಿಮ್ಮ ಹೆಸರು ಮತ್ತು ಪಾಸ್‌ವರ್ಡ್ ನೀಡಿ Submit ಮಾಡಿ

ಸ್ಟೆಪ್ 4: ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡ ನಂತರ ಶುಲ್ಕವನ್ನು ಪಾವತಿಸಿ

ಸ್ಟೆಪ್ 5: ಹೆಸರನ್ನು ನೊಂದಾಯಿಸಿದ ನಂತರ ಅರ್ಜಿಯ ಪ್ರಿಂಟೌಟ್‌ ಅನ್ನು ತೆಗೆದಿಟ್ಟುಕೊಳ್ಳಿ

ಅನುತ್ತೀರ್ಣ ವಿದ್ಯಾರ್ಥಿಗಳು ಪಾವತಿಸಬೇಕಾಗಿರುವ ಪರೀಕ್ಷಾ ಶುಲ್ಕದ ವಿವರಗಳು:

ಕ್ರಮ ಸಂಖ್ಯೆ ಪರೀಕ್ಷಾ ಶುಲ್ಕದ ವಿವರ
1 ಒಂದು ವಿಷಯಕ್ಕೆ ರೂ.290/-
2ಎರಡು ವಿಷಯಕ್ಕೆ ರೂ.350/-
3ಮೂರು ಅಥವಾ ಮೂರಕ್ಕಿಂತ ಮೇಲ್ಪಟ್ಟು ರೂ.470/-

ಆನ್‌ಲೈನ್‌ನಲ್ಲಿ ಪರೀಕ್ಷಾ ಅರ್ಜಿಯನ್ನು ನೊಂದಾಯಿಸಲು ಹಾಗೂ NEFT ಚಲನ್ ಮೂಲಕ ಬ್ಯಾಂಕ್‌ಗೆ ಪರೀಕ್ಷಾ ಶುಲ್ಕ ಪಾವತಿಸಲು ನಿಗಧಿಪಡಿಸಿರುವ ದಿನಾಂಕ:

ಕ್ರಮ ಸಂಖ್ಯೆವಿವರನಿಗಧಿಪಡಿಸಿದ ದಿನಾಂಕ
1 ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸಲು ಹಾಗೂ ಆನ್‌ಲೈನ್ ನಲ್ಲಿ ವಿದ್ಯಾರ್ಥಿಗಳ ವಿವರಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭ ದಿನಾಂಕ2-05-2019
2 ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಮತ್ತು ಆನ್‌ಲೈನ್‌ನಲ್ಲಿ ವಿವರವನ್ನು ಅಪ್‌ಲೋಡ್ ಮಾಡಲು ಕೊನೆಯ ದಿನಾಂಕ10-05-2019
3 ವಿದ್ಯಾರ್ಥಿಗಳು ದಂಡ ಶುಲ್ಕ 200/-ರೂ ರೊಂದಿಗೆ ಪರೀಕ್ಷಾ ಶುಲ್ಕ ಪಾವತಿಸಲು ಮತ್ತು ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ವಿವರಗಳನ್ನು ಅಪ್‌ಲೋಡ್ ಮಾಡಲು ಕೊನೆಯ ದಿನಾಂಕ15-05-2019
4ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ವಿವರಗಳನ್ನು ಮಾಡಲು ನಿಗಧಿಪಡಿಸಿದ ದಿನಾಂಕದ ನಂತರ (ಅಂದರೆ 16.5.2019 ರಿಂದ) NEFT ಚಲನ್ ಜನರೇಟ್ ಮಾಡಿಕೊಂಡು ಬ್ಯಾಂಕಿಗೆ ಪಾವತಿಸಲು ಕೊನೆಯ ದಿನಾಂಕ18-05-2019
5NEFT ಚಲನ್ ಮೂಲಕ ಪರೀಕ್ಷಾ ಶುಲ್ಕವನ್ನು ಬ್ಯಾಂಕ್‌ಗೆ ಪಾವತಿಸಿದ ಬ್ಯಾಂಕ್‌ನ ಮೂಲ ಚಲನ್ ಪ್ರತಿ ಮತ್ತು ಇತರೆ ದಾಖಲೆಗಳನ್ನು ಮಂಡಳಿಗೆ ತಲುಪಿಸಲು ಕೊನೆಯ ದಿನಾಂಕ21-05-2019

ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸಲು ಮತ್ತು ಆನ್‌ಲೈನ್‌ನಲ್ಲಿ ಅಭ್ಯರ್ಥಿಗಳ ವಿವರಗಳನ್ನು ನೊಂದಾಯಿಸಲು ಮೇಲೆ ನಿಗಧಿಪಡಿಸಿರುವ ದಿನಾಂಕದ ನಂತರ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲು ಅವಕಾಶವಿರುವುದಿಲ್ಲ.

ಅನುತ್ತೀರ್ಣರಾದ ವಿದ್ಯಾರ್ಥಿಗಳು ಛಾಯಾಪ್ರತಿ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಫಲಿತಾಂಶಕ್ಕೆ ಕಾಯದೆ ಜೂನ್ 2019ರ ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷೆಗಾಗಿ ನಿಗಧಿತ ದಿನಾಂಕದೊಳಗೆ ಶುಲ್ಕ ಪಾವತಿಸಿ ನೊಂದಾಯಿಸಿಕೊಳ್ಳವುದು ಕಡ್ಡಾಯವಾಗಿರುತ್ತದೆ.

ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಪರೀಕ್ಷಾ ವೇಳಾಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
The Karnataka Secondary Education Examination Board (KSEEB) has released the dates of Karnataka SSLC (Class 10) Supplementary Exam
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X