ಕೆಎಸ್ಒಯು ಸೆಪ್ಟೆಂಬರ್-ಅಕ್ಟೋಬರ್ ಪರೀಕ್ಷೆ ಫಲಿತಾಂಶ ಪ್ರಕಟ

ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆದ ಅಂತಿಮ ವರ್ಷದ ವಿವಿಧ ಸ್ನಾತಕೋತ್ತರ ಪದವಿ ವಿಷಯಗಳ ಫಲಿತಾಂಶವನ್ನು ಕೆಎಸ್ಒಯು ಪ್ರಕಟಿಸಿದೆ.

KSOU ಮುಕ್ತ ವಿಶ್ವವಿದ್ಯಾಲಯದ ವಿವಿಧ ಪದವಿ ಕೋರ್ಸ್ ಗಳ ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರ್ಥಿಗಳು ಕೆಎಸ್ಒಯು ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ.

ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆದ ಅಂತಿಮ ವರ್ಷದ ವಿವಿಧ ಸ್ನಾತಕೋತ್ತರ ಪದವಿ ವಿಷಯಗಳ ಫಲಿತಾಂಶವನ್ನು ವೆಬ್ಟೈಟ್ ನಲ್ಲಿ ಪ್ರಕಟಿಸಲಾಗಿದೆ.

ವಿಷಯಗಳು

ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇಂಗ್ಲೀಷ್, ಹಿಂದಿ, ಪ್ರಾಚೀನ ಇತಿಹಾಸ, ಸಂವಹನ ಮತ್ತು ಪತ್ರಿಕೋದ್ಯಮ, ಉರ್ದು ಮತ್ತು ಇನ್ನಿತರ ವಿಷಯಗಳ ಕಳೆದ ಸಾಲಿನ ಹಾಗೂ ಅಂತಿಮ ವರ್ಷದ ಫಲಿತಾಂಶ ಪ್ರಕಟಗೊಂಡಿದೆ.

ಪರೀಕ್ಷೆ ಫಲಿತಾಂಶ ಪ್ರಕಟ

ಫಲಿತಾಂಶ ಪಡೆಯುವ ಬಗೆ

  • ಮುಕ್ತ ವಿಶ್ವವಿದ್ಯಾಲಯದ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
  • ವೆಬ್ಸೈಟ್ ನ ಮೇಲ್ಭಾಗದಲ್ಲಿ ಕಾಣುವ ರೆಸಲ್ಟ್ ಬಟನ್ ಕ್ಲಿಕ್ ಮಾಡಿ
  • ನೋಂದಣಿ ಸಂಖ್ಯೆ ನಮೂದಿಸಿ
  • ರಿಸಲ್ಟ್ ಪೇಜ್ ಅನ್ನು ಸೇವ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಕೆಎಸ್ಒಯು ವೆಬ್-ಸೈಟ್ ವಿಳಾಸ: www.ksoumysore.org

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್ಒಯು)

ಮೈಸೂರು ನಗರದ ಮಾನಸಗಂಗೋತ್ರಿ ಆವರಣದಲ್ಲಿರುವ ಒಂದು ದೂರಶಿಕ್ಷಣ ವಿಶ್ವವಿದ್ಯಾಲಯ. ಮೈಸೂರು ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾಗಿದ್ದ ಹಿಂದಿನ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯನ್ನು (1969-96) ಉನ್ನತೀಕರಿಸಿ ಸ್ಥಾಪಿಸಲಾಗಿದೆ. ಆರಂಭದಲ್ಲಿ ಅಂಚೆ ಬೋಧನೆ ಮೂಲಕ ಬಿ.ಎ., ಬಿ.ಕಾಂ., ಎಂ.ಎ., ಎಂ.ಕಾಂ., ಮತ್ತು ಇತರ ಶಿಕ್ಷಣಗಳನ್ನು ನೀಡುತ್ತಿತ್ತು. ನವದೆಹಲಿಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಸ್ಥಾಪಿತವಾದ (1985) ಮೇಲೆ ದೂರಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾದುವು. ಇದರ ಫಲವಾಗಿ ಅಂಚೆ ಬೋಧನೆ ವಿಧಾನದಿಂದ ದೂರ ಶಿಕ್ಷಣ ವಿಧಾನಕ್ಕೆ ಬೋಧನೆಯನ್ನು ಬದಲಾಯಿಸಿಕೊಳ್ಳಲಾಯಿತು. ಕರ್ನಾಟಕದ ಶೈಕ್ಷಣಿಕ ಅಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು 1996 ಜೂನ್ ನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು.

ಮುಕ್ತ ವಿಶ್ವವಿದ್ಯಾನಿಲಯದ ಪ್ರಮುಖ ಧ್ಯೇಯಗಳು

ವಿದ್ಯಾರ್ಥಿಗಳಿಗೆ ಅವರ ಕಲಿಕಾ ವೇಗಕ್ಕೆ ಅನುಗುಣವಾಗಿ ಮನೆ ಬಾಗಿಲಿಗೆ ಉನ್ನತ ಶಿಕ್ಷಣವನ್ನು ನೀಡುವುದು, ವಯೋಮಾನದ ಆಧಾರದ ಮೇಲೆ ಪ್ರತಿಯೊಬ್ಬರಿಗೂ ಶಿಕ್ಷಣವನ್ನು ನೀಡುವುದು, ವೃತ್ತಿಪರತೆ ಮತ್ತು ವೃತ್ತಿ ನೈಪುಣ್ಯ ತಂದುಕೊಡುವ ರೀತಿಯಲ್ಲಿ ಅಗತ್ಯವಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವುದು, ಸರಳ ಪ್ರವೇಶ ನಿಬಂಧನೆಗಳು, ವಿದ್ಯಾರ್ಥಿ ಆಸಕ್ತಿ ಹಾಗೂ ಅನುಕೂಲಕ್ಕೆ ಅನುಗುಣವಾಗಿ ಅಧ್ಯಯನ ಮಾಡುವ ಅವಕಾಶ ಒದಗಿಸುವುದು, ಪೂರ್ಣಕಾಲಿಕ ವಿದ್ಯಾರ್ಥಿಗಳಂತೆ ಅಧ್ಯಯನ ಮುಂದುವರಿಸಲು ಸಾಧ್ಯವಾಗದ ಉದ್ಯೋಗಸ್ಥರಿಗೆ, ಗ್ರಾಮಾಂತರ ಪ್ರದೇಶದ ಜನರಿಗೆ ಶಿಕ್ಷಣನೀಡುವುದು, ಪುರುಷರಿಗೆ ಹಾಗೂ ಮಹಿಳೆಯರಿಗೆ ಶಿಕ್ಷಣ ನೀಡುವುದು, ಆಧುನಿಕ ಮಾಹಿತಿ ತಂತ್ರಜ್ಞಾನದ ಬೆಳೆವಣಿಗೆಗಳನ್ನು ಅನುಸರಿಸಿ ಹೊಸ ಶಿಕ್ಷಣಗಳನ್ನು ತೆರೆಯುವುದು.

ಈಗಾಗಲೇ ಕರ್ನಾಟಕದ ಹಲವು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ 50 ಕ್ಕೂ ಹೆಚ್ಚು ಅಧ್ಯಯನ ಕೇಂದ್ರಗಳು ಸ್ಥಾಪಿತವಾಗಿದ್ದು ಕಾರ್ಯನಿರತವಾಗಿವೆ. ಹೊರ ರಾಜ್ಯಗಳಲ್ಲಿ 4 ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಶಿಕ್ಷಣ ವಿಭಾಗಕ್ಕೆ ಸಂಬಂಧಿಸಿದಂತೆ ಬಿ.ಎಡ್.ಶಿಕ್ಷಣಕ್ರಮಕ್ಕೆ 5 ಅಧ್ಯಯನ ಕೇಂದ್ರಗಳನ್ನೂ ಎಂ.ಎಡ್.ಶಿಕ್ಷಣ ಕ್ರಮಕ್ಕೆ 8 ಅಧ್ಯಯನ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ವಿವಿಧ ಶಿಕ್ಷಣಗಳಿಗೆ ಅಧ್ಯಾಪಕ ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

ಕೆಎಸ್‌ಒಯು ಪದವೀಧರರಿಗೂ ಉದ್ಯೋಗಾವಕಾಶ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಾಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು)ಪದವೀಧರರನ್ನೂ ಪರಿಗಣಿಸಲಾಗುವುದು ಎಂದು ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ www.ksoumysore.org ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
karnataka state open university results announced. students can visit and download the result sheet.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X