Online Education Guidelines: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ಶಿಕ್ಷಣ ಕುರಿತು ಮಾರ್ಗ ಸೂಚಿ ರಿಲೀಸ್

ದೇಶದೆಲ್ಲೆಡೆ ಕೊರೋನಾ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ ಇನ್ನೂ ಶಾಲಾ ಕಾಲೇಜುಗಳು ತೆರೆದಿಲ್ಲ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಆನ್‌ಲೈನ್ ಶಿಕ್ಷಣದ ಕುರಿತು ಮಾರ್ಗಸೂಚಿಯನ್ನು ಪ್ರಕಟ ಮಾಡಿದೆ.

ಈ ಮಾರ್ಗಸೂಚಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983 (1995)ರ ಸೆಕ್ಷನ್ 124(5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಆನ್‌ಲೈನ್ ಶಿಕ್ಷಣ ಕುರಿತು ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ರಿಲೀಸ್

ಆನ್‌ಲೈನ್ ಶಿಕ್ಷಣ ಕುರಿತು ಹೊರಡಿಸಲಾದ ಹೊಸ ಮಾರ್ಗಸೂಚಿ ಇಲ್ಲಿದೆ:

* ಪ್ರತಿ ತರಗತಿಗೆ ಗರಿಷ್ಠ ಸಮಯ 30 ನಿಮಿಷಗಳು.
* ವಯೋಮಾನಕ್ಕೆ ಅನುಗುಣವಾಗಿ ದಿನಕ್ಕೆ 1 ರಿಂದ 4 ಗಂಟೆಗಳ ತರಗತಿ ಮಾಡಬಹುದು.
* 2ನೇ ತರಗತಿಯವರೆಗೆ ದಿನ ಬಿಟ್ಟು ದಿನ ಹಾಗೂ 3ನೇ ತರಗತಿಯ ನಂತರದ ಮಕ್ಕಳಿಗೆ ವಾರಕ್ಕೆ ಗರಿಷ್ಠ 5 ದಿನಗಳವರೆಗೆ ತರಗತಿ ನಡೆಸಬಹದು. ಎರಡು ದಿನ ಕಡ್ಡಾಯವಾಗಿ ರಜೆ ನೀಡಬೇಕು.

* 2ನೇ ತರಗತಿಯವರೆಗೆ ಪೋಷಕರ ಉಪಸ್ಥಿತಿ ಕಡ್ಡಾಯ ಅಥವಾ ಪೋಷಕರ ಅನುಮತಿಯ ಮೇರೆಗೆ ವಯಸ್ಕರ ಉಪಸ್ಥಿತಿಗೆ ಅವಕಾಶ ಇರಬೇಕು.

* 3 ರಿಂದ 6 ವರ್ಷದ ಮಕ್ಕಳಿಗೆ ಒಂದು ದಿನ ಬಿಟ್ಟು ಒಂದು ದಿನದಂತೆ ವಾರಕ್ಕೆ 3 ದಿನ ತರಗತಿ ನಡೆಸಬೇಕು. ಇದಕ್ಕೆ ಪೋಷಕರ ಹಾಜರಾತಿ ಕಡ್ಡಾಯವಾಗಿದೆ. ಪ್ರತಿ ದಿನ ಕೇವಲ ಗರಿಷ್ಠ 30 ನಿಮಿಷ ಮಾತ್ರ ನಡೆಸಬೇಕು.

* 1 ರಿಂದ 2ನೇ ತರಗತಿ ಮಕ್ಕಳಿಗೆ ಒಂದು ದಿನ ಬಿಟ್ಟು ಒಂದು ದಿನದಂತೆ ವಾರಕ್ಕೆ 3 ದಿನ ತರಗತಿ ನಡೆಸಬೇಕು. ಇದಕ್ಕೆ ಪೋಷಕರ ಹಾಜರಾತಿ ಕಡ್ಡಾಯವಾಗಿದೆ. ಆದರೆ ದಿನಕ್ಕೆ 2 ಸೆಷನ್ ಮಾಡಬಹುದಾಗಿದೆ. ಇವರಿಗೂ ತರಗತಿ ಅವಧಿ ಗರಿಷ್ಠ 30 ನಿಮಿಷ ಮಾತ್ರ.

* 3 ರಿಂದ 5ನೇ ತರಗತಿ ಮಕ್ಕಳಿಗೆ ದಿನಕ್ಕೆ 2 ಸೆಷನ್ ನಂತೆ ವಾರಕ್ಕೆ 5 ದಿನ ಕ್ಲಾಸ್ ನಡೆಸಬಹುದು. ಇದಕ್ಕೆ ಪೋಷಕರ ಹಾಜರಿ ಕಡ್ಡಾಯವಲ್ಲ. ಇವರಿಗೆ ತರಗತಿ ಅವಧಿ ಗರಿಷ್ಠ 30 ನಿಮಿಷ.

* 6 ರಿಂದ 10ನೇ ತರಗತಿಯವರಿಗೆ ದಿನಕ್ಕೆ 3 ಸೆಷನ್‍ನಂತೆ ವಾರಕ್ಕೆ 5 ದಿನ ತರಗತಿ ನಡೆಸಬಹುದು. ಇವರಿಗೂ ಪೋಷಕರ ಹಾಜರಿ ಕಡ್ಡಾಯವಲ್ಲ. ಒಂದು ಸೆಷನ್ ಅವಧಿ ಗರಿಷ್ಠ 30-45 ನಿಮಿಷವಾಗಿದೆ.

* 9 ಹಾಗೂ 10ನೇ ತರಗತಿಯ ಮಕ್ಕಳಿಗೆ ಗರಿಷ್ಠ 45 ನಿಮಿಷಗಳ 4 ತಗರತಿಗಳನ್ನು ವಾರಕ್ಕೆ 5 ದಿನಗಳ ಕಾಲ ತೆಗೆದುಕೊಳ್ಳಬಹುದು.
*ಸಿಂಕ್ರೊನಸ್ (ನೇರ ಪ್ರಸಾರದ ಅಧಿವೇಶನಗಳು) ಮತ್ತು ಅಸಿಂಕ್ರೊನಸ್ (ಪೂರ್ವ-ಮುದ್ರಿತ ಅಧಿವೇಶನಗಳು) ವಿಧಾನಗಳಿಗೆ ಆದ್ಯತೆ ನೀಡಬೇಕು.

For Quick Alerts
ALLOW NOTIFICATIONS  
For Daily Alerts

English summary
karnataka state released new guidelines for online education which helpful for students health.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X