ಕರ್ನಾಟಕದಲ್ಲಿ ತಲೆಯೆತ್ತಲಿದೆ ಮೊದಲ ಫೋರೆನ್ಸಿಕ್ ವಿಶ್ವವಿದ್ಯಾಲಯ

ಪೊಲೀಸ್ ಇಲಾಖೆಗಾಗಿ ಪ್ರತ್ಯೇಕವಾದ ವಿಶ್ವವಿದ್ಯಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ಪೊಲೀಸರು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಪರಾಧಗಳ ತನಿಖೆಮಾಡಲು ಇದು ಸಹಾಯಕವಾಗಲಿದೆ .

ಪೊಲೀಸ್ ಇಲಾಖೆಗಾಗಿ ಪ್ರತ್ಯೇಕವಾದ ವಿಶ್ವ ವಿದ್ಯಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಅಪರಾಧ, ಸೈಬರ್ ಕ್ರೈಂ ಗಳನ್ನೂ ತಡೆಯುವ ಉದ್ದೇಶದಿಂದ ಫೋರೆನ್ಸಿಕ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ.

ಪೊಲೀಸರು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಪರಾಧಗಳ ತನಿಖೆಮಾಡಲು ಇದು ಸಹಾಯಕವಾಗಲಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಪೊಲೀಸರಿಗಾಗಿ ಪ್ರತ್ಯೇಕ ಫೋರೆನ್ಸಿಕ್ ವಿವಿ

ಇಂದಿನ ಡಿಜಿಟಲ್ ಲೋಕದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ಬಹುತೇಕ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಮೊಬೈಲ್‌ ಜಾಡು ಪತ್ತೆ ಪ್ರಮುಖವಾಗಿದೆ. ತಂತ್ರಜ್ಞಾನ ಬೆಳದಂತೆ ತನಿಖೆಯ ಕಾರ್ಯವೈಖರಿ ಬದಲಾಗಬೇಕಿದೆ. ಆದುನಿಕ ತಂತ್ರಜ್ಞಾನ ಬಳಸಿ ತನಿಖೆ ನಡೆಸುವುದನ್ನು ಈ ವಿವಿಯಲ್ಲಿ ಹೇಳಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ವಿಶ್ವ ವಿದ್ಯಾಲಯವನ್ನು ರಾಜಧಾನಿ ಬೆಂಗಳೂರು ಅಥವಾ ಮೈಸೂರು ಇಲ್ಲವೇ ಹಿಬ್ಬಳ್ಳಿಯಲ್ಲಿ ಸ್ಥಾಪಿಸಲು ಚಿಂತನೆ ನಡೆದಿದ್ದು, ಈಗಾಗಲೇ ಇಲಾಖೆಯ ಅಧಿಕಾರಿಗಳು ಪುಣೆಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ಹಾಲಿ ಸಿಬ್ಬಂದಿ ಜತೆಗೆ ಹೊಸದಾಗಿ ಸೇರುವ ಸಿಬ್ಬಂದಿಗೂ ವಿಶ್ವವಿದ್ಯಾಲಯದಲ್ಲಿ ತರಬೇತಿ ನೀಡುವ ಉದ್ದೇಶವಿದೆ. ಇದಕ್ಕಾಗಿ 2018-19ರ ರಾಜ್ಯ ಬಜೆಟ್ ನಲ್ಲಿ ಅನುದಾನಕ್ಕೆ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಪೂರ್ಣ ಪ್ರಮಾಣದ ಫೋರೆನ್ಸಿಕ್ ಯುನಿವೆರ್ಸಿಟಿಯ ಅಗತ್ಯವಿದೆ ಎಂದು ಹಲವು ಪರಿಣತರು ಹಾಗೂ ಹಿರಿಯ ಪೊಲೀಓಸ್ ಅಧಿಕಾರಿಗಳ ಸೂಚನೆಯಾಗಿದೆ ಎಂದು ಹೇಳಿದರು.

ಅಪರಾಧಿಗಳು ತಮ್ಮ ಕೃತ್ಯವೆಸಗುವ ರೀತಿಯನ್ನೂ ಬದಲಿಸಿಕೊಂಡಿದ್ದರಎ. ಅಲ್ಲದೇ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ತಂತ್ರಜ್ನಾದ ಮೊರೆ ಹೋಗಿದ್ದಾರೆ. ಇಂತಹ ಅಪರಾಧಗಳನ್ನ್ನು ಕೂಡ ಪತ್ತೆಹಚ್ಚುವ ನಿಟ್ಟಿನಲ್ಲಿ ನಾವು ನಮ್ಮ ಪೊಲೀಸ್ ಸಿಬ್ಬಂದಿಗಳನ್ನು ಸಜ್ಜುಗೊಳಿಸಲು ತರಬೇತಿ ನೀಡುವ ಅಗತ್ಯವಿದೆ. ಅಲ್ಲದೇ ಫೋರನ್ಸಿಕ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಬಗ್ಗೆ ಈಗಾಗಲೇ ಡಿಜಿ ಮತ್ತು ಐಜಿ ಜೊತೆ ಸಭೆ ನಡೆಸಿ ಯೋಜನಾ ವೆಚ್ಚ ಮತ್ತು ಅವಶ್ಯಕ ಮೂಲಭೂತ ಸೌಕರ್ಯಗಳ ಕುರಿತು ಚರ್ಚೆ ನಡೆಸಲಾಗಿದೆ. 2018-19ರ ಬಜೆಟ್ ನಲ್ಲಿ ಅನುಧಾನ ಘೋಷಣೆಯಾಗಲಿದೆ ಎಂದು ವಿವರಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
The state government to set up a separate university for police department. Forensic University is being set up to prevent crime and cyber crimes.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X