KCET 2022 Counselling Dates : ಕೆಸಿಇಟಿ 2022ರ ಕೌನ್ಸೆಲಿಂಗ್ ದಿನಾಂಕಗಳು ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022ರ ಕೌನ್ಸೆಲಿಂಗ್ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಕೌನ್ಸೆಲಿಂಗ್ ಪ್ರಕ್ರಿಯೆಗೆ ಹಾಜರಾಗುವ ಅಭ್ಯರ್ಥಿಗಳು ಸಂಪೂರ್ಣ ವೇಳಾಪಟ್ಟಿಯನ್ನು ಇಲ್ಲಿ ವೀಕ್ಷಿಸಬಹುದು.

ಕೆಸಿಇಟಿ 2022ರ ಕೌನ್ಸೆಲಿಂಗ್ ದಿನಾಕಗಳು ಔಟ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಕ್ಟೋಬರ್ 7 ರಿಂದ ಅಕ್ಟೋಬರ್ 8 ರವರೆಗೆ ದಾಖಲೆಗಳ ಪರಿಶೀಲನೆಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಇದಕ್ಕೂ ಮೊದಲು ಕೆಸಿಇಟಿ 2022 ಕೌನ್ಸೆಲಿಂಗ್ ಪ್ರಕ್ರಿಯೆಯು ಆಗಸ್ಟ್ 5 ರಂದು ಪ್ರಾರಂಭವಾಗಬೇಕಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಆದೇಶದಂತೆ ಕೆಇಎ ಫಲಿತಾಂಶವನ್ನು ಪರಿಷ್ಕರಿಸಬೇಕಾಗಿತ್ತು. KCET 2022 12 ನೇ ತರಗತಿಯ ಅಂಕಗಳನ್ನು ಪರಿಗಣಿಸಿ ಪರಿಷ್ಕೃತ KCET ಫಲಿತಾಂಶ 2022 ಅನ್ನು ಅಕ್ಟೋಬರ್ 1 ರಂದು ಘೋಷಿಸಲಾಯಿತು.

ದಾಖಲೆ ಪರಿಶೀಲನೆ ವಿವರ :

KCET 2022 ಅರ್ಹ ಅಭ್ಯರ್ಥಿಗಳು ಪ್ರವೇಶ ಪ್ರಕ್ರಿಯೆಯ ಭಾಗವಾಗಿ ಪರಿಶೀಲನೆಗಾಗಿ ತಮ್ಮ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳನ್ನು ಪರಿಶೀಲನೆಗೆ ಅಭ್ಯರ್ಥಿಗಳು ನಿಗದಿತ ಕೇಂದ್ರಗಳಿಗೆ ಭೇಟಿ ನೀಡಬೇಕು. ಕೆಸಿಇಟಿ 2022 ಅರ್ಜಿ ನಮೂನೆ, ಅರ್ಜಿ ಶುಲ್ಕ ಪಾವತಿಯ ಪುರಾವೆ, ಕೆಸಿಇಟಿ 2022 ಹಾಲ್ ಟಿಕೆಟ್, ಎಸ್‌ಎಸ್‌ಎಲ್‌ಸಿ ಸ್ಕೋರ್ ಕಾರ್ಡ್ ಅಥವಾ 10 ನೇ ತರಗತಿಯ ಅಂಕಪಟ್ಟಿ, ದ್ವಿತೀಯ ಪಿಯುಸಿ ಸ್ಕೋರ್‌ಕಾರ್ಡ್ ಮತ್ತು ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಸೇರಿದಂತೆ ದಾಖಲೆಗಳನ್ನು ಪರಿಶೀಲನೆಗೆ ತೆಗೆದುಕೊಂಡು ಹೋಗಬೇಕಿರುತ್ತದೆ.

KEA ಕೆಸಿಇಟಿ 2022 ಕೌನ್ಸೆಲಿಂಗ್ ಪರಿಶೀಲನೆ ಸ್ಲಿಪ್ ಅಕ್ಟೋಬರ್ 7 ಮತ್ತು ಅಕ್ಟೋಬರ್ 10 ರ ನಡುವೆ ಲಭ್ಯವಿರುತ್ತದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ kea.kar.nic.in ನಲ್ಲಿ ಅಕ್ಟೋಬರ್ 7 ರಂದು ಮಧ್ಯಾಹ್ನ 2 ಗಂಟೆಗೆ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ರಚನೆಯನ್ನು ವೀಕ್ಷಿಸಬಹುದು. KCET ಕೌನ್ಸೆಲಿಂಗ್ 2022ರ ಪ್ರಕಾರ ದಿನಾಂಕಗಳು, ಆದ್ಯತೆಯ ಕ್ರಮದಲ್ಲಿ ಆಯ್ಕೆಯ ನಮೂದನ್ನು ಅಕ್ಟೋಬರ್ 7 (ಸಂಜೆ 6) ರಿಂದ ಅಕ್ಟೋಬರ್ 11 (ಸಂಜೆ 4) ವರೆಗೆ ಮಾಡಬಹುದು.

ಅಕ್ಟೋಬರ್ 13ರಂದು ಮಧ್ಯಾಹ್ನ 2 ಗಂಟೆಯ ನಮತರ ಅಣಕು ಸೀಟು ಹಮಚಿಕೆಯ ಫಲಿತಾಂಶವನ್ನು ವೀಕ್ಷಿಸಬಹುದು. ಅಕ್ಟೋಬರ್ 13ರ ಸಂಜೆ 6 ಗಂಟೆಯಿಂದ ಅಕ್ಟೋಬರ್ 15ರ ಸಂಜೆ 4 ಗಂಟೆಯೊಳಗೆ ಅಭ್ಯರ್ಥಿಗಳು ಆಯ್ಕೆಗಳನ್ನು ಸೇರಿಸಲು ಅಥವಾ ಅಳಿಸಲು ಮತ್ತು ಮಾರ್ಪಡಿಸಲು ಅಭ್ಯರ್ಥಿಗಳಿಗೆ KEA ಅವಕಾಶ ನೀಡುತ್ತದೆ. KEA ಪ್ರಕಾರ KCET 2022ರ ನೈಜ ಸೀಟು ಹಂಚಿಕೆ ಫಲಿತಾಂಶವನ್ನು ಅಕ್ಟೋಬರ್ 17 ರಂದು (ಮಧ್ಯಾಹ್ನ 2 ಗಂಟೆಗೆ) ಪ್ರಕಟಿಸಲಾಗುತ್ತದೆ. ಆಯ್ಕೆ ಮತ್ತು ಶುಲ್ಕವನ್ನು ಪಾವತಿಸಿದ ನಂತರ ಆಯ್ಕೆ 1ರ ಅಭ್ಯರ್ಥಿಗಳು ಅಕ್ಟೋಬರ್ 22 ರಂದು ಸಂಜೆ 5:30ರ ಮೊದಲು ಕಾಲೇಜುಗಳಿಗೆ ವರದಿ ಮಾಡಬೇಕು ಎಂದು ಪ್ರಕಟಣೆಯಲ್ಲಿ KEA ಹೇಳಿಕೆ ತಿಳಿಸಿದೆ.

For Quick Alerts
ALLOW NOTIFICATIONS  
For Daily Alerts

English summary
KEA announced KCET 2022 counselling dates. Here is the complete date sheet.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X