KCET 2022 Final Answer Key : ಸಿಇಟಿ ಪರೀಕ್ಷೆಯ ಅಂತಿಮ ಕೀ ಉತ್ತರ ಪ್ರಕಟ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022ರ ಅಂತಿಮ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಕೀ ಉತ್ತರಗಳನ್ನು ವೀಕ್ಷಿಸಬಹುದು ಜೊತೆಗೆ ತಮ್ಮ ಫಲಿತಾಂಶವನ್ನು ಕೂಡ ವೀಕ್ಷಿಸಬಹುದು.

ಕೆಸಿಇಟಿ ಪರೀಕ್ಷೆಯ ಅಂತಿಮ ಕೀ ಉತ್ತರ ಪ್ರಕಟ

ಅಭ್ಯರ್ಥಿಗಳು ಸಿಇಟಿ ಪರೀಕ್ಷೆಯನ್ನು ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಕೃತ ವೆಬ್‌ಸೈಟ್ kea.kar.nic.in ಗೆ ಭೇಟಿ ನೀಡುವ ಮೂಲಕ ಕೀ ಉತ್ತರಗಳನ್ನು ನೋಡಬಹುದು. KCET 2022ಗೆ ಹಾಜರಾದ ಅರ್ಜಿದಾರರು ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದ ಅಂತಿಮ ಉತ್ತರ ಕೀಗಳನ್ನು ಡೌನ್‌ಲೋಡ್ ಮಾಡಬಹುದು.

ಭೌತಶಾಸ್ತ್ರ ವಿಷಯದ ಅಂತಿಮ ಕೀ ಉತ್ತರಗಳ ಲಿಂಕ್ ಇಲ್ಲಿದೆ

ಗಣಿತ ವಿಷಯದ ಅಂತಿಮ ಕೀ ಉತ್ತರಗಳ ಲಿಂಕ್ ಇಲ್ಲಿದೆ

ರಸಾಯನಶಾಸ್ತ್ರ ವಿಷಯದ ಅಂತಿಮ ಕೀ ಉತ್ತರಗಳ ಲಿಂಕ್ ಇಲ್ಲಿದೆ

ಜೀವಶಾಸ್ತ್ರ ವಿಷಯದ ಅಂತಿಮ ಕೀ ಉತ್ತರಗಳ ಲಿಂಕ್ ಇಲ್ಲಿದೆ

ಕರ್ನಾಟಕದಲ್ಲಿ ಎಂಜಿನಿಯರಿಂಗ್, ಕೃಷಿ, ವೈದ್ಯಕೀಯ, ಫಾರ್ಮಸಿಯಂತಹ ಪದವಿಪೂರ್ವ ಕಾರ್ಯಕ್ರಮಗಳಿಗೆ ನಡೆಸಲಾಗುವ ಪ್ರವೇಶ ಪರೀಕ್ಷೆಯಿದಾಗಿದೆ. ಕೆಸಿಇಟಿ 2022 ಪರೀಕ್ಷೆಗಳು ಜೂನ್ 16, 17 ಮತ್ತು 18ರಂದು ನಡೆಸಲಾಗಿತ್ತು. ಜೂನ್ 16ರಂದು ಬೆಳಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ ಪರೀಕ್ಷೆ ನಡೆಯಲಿದ್ದರೆ, ಜೂ.17ರಂದು ಬೆಳಗ್ಗೆ ಭೌತಶಾಸ್ತ್ರ, ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆಗಳು ನಡೆದಿವೆ. ಇನ್ನು ಜೂ.18ರಂದು ಹೊರನಾಡು ಗಡಿನಾಡು ಕನ್ನಡಿಗರಿಗೆ ಪರೀಕ್ಷೆಗಳು ನಡೆಸಲಾಯಿತು.

ಕೆಸಿಇಟಿ ಪೆನ್ ಮತ್ತು ಪೇಪರ್ ಆಧಾರಿತ ಪರೀಕ್ಷೆಯಾಗಿದೆ. ಈ ಪ್ರವೇಶ ಪರೀಕ್ಷೆಯನ್ನು ಪೆನ್ ಮತ್ತು ಪೇಪರ್ ಮೋಡ್‌ನಲ್ಲಿ ನಡೆಸಲಾಯಿತು. KCET ತಾತ್ಕಾಲಿಕ ಕೀ ಉತ್ತರಗಳನ್ನು ಜೂನ್ 22ರಂದು ಪ್ರಕಟಿಸಲಾಗಿತ್ತು. ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಜೂನ್ 25ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಂತಿಮ ಉತ್ತರ ಕೀಲಿಯನ್ನು ಇಂದು ಬಿಡುಗಡೆ ಮಾಡಿದೆ ಜೊತೆಗೆ ಅದರ ಫಲಿತಾಂಶಗಳನ್ನು ಘೋಷಿಸಿದೆ.

KCET ಅಂತಿಮ ಕೀ ಉತ್ತರ ವೀಕ್ಷಿಸುವುದು ಹೇಗೆ ?:

ಸ್ಟೆಪ್ 1 : ಅಧಿಕೃತ ವೆಬ್‌ಸೈಟ್‌ kea.kar.nic.in ಗೆ ಭೇಟಿ ನೀಡಿ

ಸ್ಟೆಪ್ 2 : ಹೋಂ ಪೇಜ್ ನಲ್ಲಿ ಲಭ್ಯವಿರುವ ಕೀ ಉತ್ತರ 2022 ಲಿಂಕ್ ಅನ್ನು ಕ್ಲಿಕ್ ಮಾಡಿ

ಸ್ಟೆಪ್ 3 : KCET ವಿಷಯವಾರು ಉತ್ತರ ಕೀ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿ

ಸ್ಟೆಪ್ 4 :ಸಂಭವನೀಯ ಸ್ಕೋರ್ ಅನ್ನು ಲೆಕ್ಕಾಚಾರ ಮಾಡಲು ಪ್ರತಿಕ್ರಿಯೆಗಳೊಂದಿಗೆ ಹೊಂದಾಣಿಕೆ ಮಾಡಿ

For Quick Alerts
ALLOW NOTIFICATIONS  
For Daily Alerts

English summary
KEA has released kcet 2022 final answer key. Candidates can check answer keys now.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X