KCET Exam 2022 : ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಸಮಯ ಮತ್ತು ಮಾರ್ಗಸೂಚಿಗಳು ಇಲ್ಲಿವೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜೂನ್ 16 ರಿಂದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022 ಅನ್ನು ನಡೆಸುತ್ತಿದೆ. ಪರೀಕ್ಷೆಯನ್ನು ಎರಡು ಅವಧಿಗಳಲ್ಲಿ ಅಂದರೆ ಬೆಳಿಗ್ಗೆ 10:30 ರಿಂದ 11:50 ರವರೆಗೆ ಮತ್ತು ಮಧ್ಯಾಹ್ನ 2:30 ರಿಂದ 3:50 ರವರೆಗೆ ನಡೆಸುತ್ತದೆ. ಕೆಸಿಇಟಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಡ್ರೆಸ್ ಕೋಡ್, ಪರೀಕ್ಷೆಯ ಸಮಯ, ಪರೀಕ್ಷೆಯ ದಿನದ ಮಾರ್ಗಸೂಚಿಗಳು, ಪ್ರವೇಶ ಪತ್ರ ಮತ್ತು ಇತರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕೆಸಿಇಟಿ ಪರೀಕ್ಷೆಯ ಸಮಯ, ಪ್ರವೇಶ ಪತ್ರ ಮತ್ತು ಮಾರ್ಗಸೂಚಿಗಳು ಇಲ್ಲಿವೆ

KCET 2022 ಪ್ರವೇಶ ಪತ್ರ :

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ?
ಸ್ಟೆಪ್ 1: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ cetonline.karnataka.gov.in ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಕರ್ನಾಟಕ CET 2022 ಪ್ರವೇಶ ಪತ್ರದ ಲಿಂಕ್ ಅನ್ನು ಕ್ಲಿಕ್ ಮಾಡಿ.
ಸ್ಟೆಪ್ 3: ಅಭ್ಯರ್ಥಿಗಳು ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
ಸ್ಟೆಪ್ 4: ಕೆಸಿಇಟಿ ಪ್ರವೇಶ ಪತ್ರವು ಪರದೆಯ ಮೇಲೆ ಮೂಡುತ್ತದೆ
ಸ್ಟೆಪ್ 5: ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ ಮತ್ತು ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಕೆಸಿಇಟಿ ಪರೀಕ್ಷೆಯ ಸಮಯ, ಪ್ರವೇಶ ಪತ್ರ ಮತ್ತು ಮಾರ್ಗಸೂಚಿಗಳು ಇಲ್ಲಿವೆ

KCET 2022 ಪರೀಕ್ಷೆಯ ಸಮಯ :

ಅವಧಿ 1 : ಬೆಳಿಗ್ಗೆ 10:30 ರಿಂದ 11:50 AM
ಅವಧಿ 2: ಸಂಜೆ 2:30 ರಿಂದ 3:50 ರವರೆಗೆ

ಕೆಸಿಇಟಿ ಪರೀಕ್ಷೆಯ ಸಮಯ, ಪ್ರವೇಶ ಪತ್ರ ಮತ್ತು ಮಾರ್ಗಸೂಚಿಗಳು ಇಲ್ಲಿವೆ

KCET 2022 ಪರೀಕ್ಷಾ ದಿನದ ಮಾರ್ಗಸೂಚಿಗಳು :

* ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಯಾವುದೇ ನಿರ್ಬಂಧಿತ ವಸ್ತುಗಳನ್ನು ಕೊಂಡೊಯ್ಯದಂತೆ ಸೂಚಿಸಲಾಗಿದೆ. ಯಾವುದೇ ಅಭ್ಯರ್ಥಿಯೊಂದಿಗೆ ಯಾವುದೇ ನಿರ್ಬಂಧಿತ ವಸ್ತುಗಳನ್ನು ಕಂಡುಬಂದಲ್ಲಿ, ಅವನ/ಅವಳ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗುತ್ತದೆ.

* KCET ಪ್ರವೇಶ ಪತ್ರ 2022 ಜೊತೆಗೆ ಅರ್ಜಿದಾರರು ಒಂದು ಮಾನ್ಯವಾದ ಫೋಟೋ ID ಪುರಾವೆಯನ್ನು ಹೊಂದಿರಬೇಕು.

* KCET 2022 ಪರೀಕ್ಷೆಯ ಉದ್ದಕ್ಕೂ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

* ಕೆಸಿಇಟಿ 2022ರ ಪರೀಕ್ಷಾ ಕೇಂದ್ರದಿಂದ ಪರೀಕ್ಷೆ ಪೂರ್ಣಗೊಳ್ಳುವವರೆಗೆ ಅಭ್ಯರ್ಥಿಗಳನ್ನು ಹೊರಗಡೆ ಬಿಡಲಾಗುವುದಿಲ್ಲ.

* ಇನ್ವಿಜಿಲೇಟರ್ ನೀಡಿದ ಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಒಎಂಆರ್ ಶೀಟ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕು.

KCET ಪರೀಕ್ಷೆಗೆ ಅಗತ್ಯ ದಾಖಲೆಗಳು :

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೊಂಡೊಯ್ಯಬೇಕಾದ ಅಗತ್ಯ ದಾಖಲೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

* ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರ
* ಮಾನ್ಯವಾದ ಫೋಟೋ ID ಪುರಾವೆ
* ವರ್ಗ ಪ್ರಮಾಣಪತ್ರ

For Quick Alerts
ALLOW NOTIFICATIONS  
For Daily Alerts

English summary
KCET 2022 is scheduled from june 16 to 18. Here is exam timings, documents to carry, exam admit card and exam guidelines.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X