ಕೆ-ಸಿಇಟಿ: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

Posted By:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) 2017ನೇ ಸಾಲಿನ ಸಿಇಟಿ ಅಭ್ಯರ್ಥಿಗಳ ಮೊದಲ ಸುತ್ತಿನ ಸೀಟು ಹಂಚಿಕೆ ಫ‌ಲಿತಾಂಶವನ್ನು ಪ್ರಕಟಿಸಿದೆ.

ವಿದ್ಯಾರ್ಥಿಗಳು ತಮಗೆ ಹಂಚಿಕೆಯಾಗಿರುವ ಸೀಟು ಕುರಿತಂತೆ ಇಚ್ಛೆ ಚಲಾಯಿಸುವ ಮುನ್ನ ಪ್ರತಿ ಇಚ್ಛೆಯ (ಒಟ್ಟು ನಾಲ್ಕು ಚಾಯ್ಸಗಳಿರುತ್ತವೆ. 1, 2, 3,4) ಅರ್ಥ ಮತ್ತು ಪರಿಣಾಮವೇನು ಎಂಬುದನ್ನು ಕೂಲಂಕಷವಾಗಿ ಅರ್ಥಮಾಡಿಕೊಂಡ ನಂತರವೇ ಇಚ್ಛೆಯನ್ನು ದಾಖಲಿಸಬೇಕೆಂದು ಕೆಇಎ ಸೂಚನೆ ನೀಡಿದೆ.

ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ kea.kar.nic.in ವೀಕ್ಷಿಸಬಹುದು.

2017ನೇ ಸಾಲಿನಲ್ಲಿ ವಿವಿಧ ಕೋರ್ಸುಗಳಿಗೆ ಸರ್ಕಾರವು ನಿಗದಿ ಪಡಿಸಿರುವ ಸೀಟ್ ಮ್ಯಾಟ್ರಿಕ್ಸ್ ಅನ್ನು ಅಳವಡಿಸಿಕೊಂಡು, ಅಭ್ಯರ್ಥಿಗಳ ಮೆರಿಟ್ ಮತ್ತು ಅಭ್ಯರ್ಥಿಗಳು ದಾಖಲಿಸಿರುವ ಆಪ್ಷನ್ ಅನ್ನು ಆಧರಿಸಿ ಸೀಟು ಹಂಚಿಕೆ ಮಾಡಲಾಗಿದೆ.

ಕೆ-ಸಿಇಟಿ ಸೀಟು ಹಂಚಿಕೆ ಫಲಿತಾಂಶ

ಸೀಟು ಹಂಚಿಕೆಯ ಫಲಿತಾಂಶವನ್ನು ಅಭ್ಯರ್ಥಿಗಳು ಸಿಇಟಿ ವೆಬ್ಸೈಟ್ ನಲ್ಲಿ ಪರಿಶೀಲಿಸಿದ ನಂತರ ನಿಗದಿಪಡಿಸಿರುವ ನಾಲ್ಕು CHOICE ಗಳಲ್ಲಿ ಯಾವುದಾದರು ಒಂದು CHOICE ಅನ್ನು ಆಯ್ಕೆ ಮಾಡುವ ಮೊದಲು ಈ ಕೆಳಗಿನ ಅಂಶಗಳನ್ನು ಗಮನಿಸಲು ಸೂಚೊಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮುಂದಿನ ದಿನಗಳಲ್ಲಿ ವೈದ್ಯಕೀಯ / ದಂತ ವೈದ್ಯಕೀಯ ಕೋರ್ಸಗಳ ಪ್ರವೇಶಕ್ಕೆ ಸೀಟು ಹಂಚಿಕೆಯನ್ನು ಕೈಗೊಳ್ಳಲಿದೆ. ವೈದ್ಯಕೀಯ / ದಂತವೈದ್ಯಕೀಯ ಕೋರ್ಸಗಳ ಪ್ರವೇಶಕ್ಕೆ ಅರ್ಹತೆಯನ್ನು ಹೊಂದಿದ್ದು ಆಸಕ್ತಿಯಿರುವ ಅಭ್ಯರ್ಥಿಗಳು ಸೂಕ್ತವಾದ ಆಯ್ಕೆಯ ತೀರ್ಮಾನವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ.

ಅಭ್ಯರ್ಥಿಗಳು Engineering / Architecture / Agriculture / Veterinary ಸೀಟನ್ನು CHOICE -2 ನೀಡಿ ತಮ್ಮೊಡನೆ ಇಟ್ಟುಕೊಂಡು ವೈದ್ಯಕೀಯ / ದಂತ ವೈದ್ಯಕೀಯ ಕೋರ್ಸಗಳ ಪ್ರವೇಶಕ್ಕೆ ಸೀಟು ಹಂಚಿಕೆಗೆ ಭಗವಹಿ ಸಬಹುದಾಗಿದೆ. ಅಂತಹ ಅಭ್ಯರ್ಥಿಗಳು ವೈದ್ಯಕೀಯ / ದಂತವೈದ್ಯಕೀಯ ಸೀಟನ್ನು ಹಂಚಿಕೆ ಮಾಡಿಕೊಂಡಲ್ಲಿ Engineering / Architecture / Agriculture / Veterinary ಸೀಟು ತಂತಾನೆ ರದ್ದಾಗುತ್ತದೆ.

ಇಂತಹ ಸೀಟುಗಳನ್ನು ಮುಂದಿನ ಸುತ್ತಿನಲ್ಲಿ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಆದ್ದರಿಂದ ಮೊದಲನೇ ಸುತ್ತಿನಲ್ಲಿ ಹಂಚಿಕೆಯಾಗಿರುವ ಸೀಟುಗಳಿಗೆ ಯಾವುದೇ CHOICE ಅನ್ನು ಆಯ್ಕೆ ಮಾಡುವ ಮೊದಲು ಪ್ರತಿ CHOICE ನ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಬ್ರೋಚರ್ ನಲ್ಲಿ ನೀಡಿರುವ ಮಾಹಿತಿಯನ್ನು ಓದಿ ಅರ್ಥ ಮಾಡಿಕೊಂಡು ಮುಂದಿನ ಸುತ್ತುಗಳಲ್ಲಿ ಭಾಗವಹಿಸಲು ನಿಗದಿಪಡಿಸಿರುವ ಅರ್ಹತೆ ಮತ್ತು ಮುಂದಿನ ಸುತ್ತುಗಳಲ್ಲಿ ಬರಬಹುದಾದ ಸೀಟುಗಳನ್ನು ಗಮನದಲ್ಲಿಟ್ಟುಕೊಂಡು ಪೋಷಕರ ಜೊತೆ ಚರ್ಚಿಸಿ ಸೂಕ್ತವಾದ CHOICE ಅನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದೆ.

English summary
As per the seat matrix issued by the Government, Seat Allotment ismade by following the Roster System based on the Merit / Rank of thecandidate and based on priority of options entered by the candidates.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia