ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ -2022ರ ಪರಿಷ್ಕೃತ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ವೀಕ್ಷಿಸಬಹುದು.

ಕರ್ನಾಟಕ ಉಚ್ಛನ್ಯಾಯಾಲದ ಆದೇಶದ ಮೇರೆಗೆ ಯುಜಿಸಿಇಟಿ - 2022ರ ಪರಿಷ್ಕೃತ ಫಲಿತಾಂಶವನ್ನು ಅಕ್ಟೋಬರ್ 1,2022 ರಂದು ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿತ್ತು, ಅದರಂತೆ ಇಂದು ಬಿಡುಗಡೆ ಮಾಡಲಾಗಿದೆ. KEA UGCET ಪರಿಷ್ಕೃತ ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಲು ಮತ್ತು ವೀಕ್ಷಿಸಲು ಅಭ್ಯರ್ಥಿಗಳು KCET ನೋಂದಣಿ ಸಂಖ್ಯೆ ಮತ್ತು ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ಬಳಸಬೇಕಾಗುತ್ತದೆ.
ಹೊಸ ನೀತಿಯ ಪ್ರಕಾರ 2021ರ ಪಿಯು ಬ್ಯಾಚ್ ವಿದ್ಯಾರ್ಥಿಗಳ ಅರ್ಹತಾ ಅಂಕಗಳನ್ನು ಭೌತಶಾಸ್ತ್ರದಲ್ಲಿ ಸರಾಸರಿ 6 ಅಂಕಗಳು, ರಸಾಯನಶಾಸ್ತ್ರದಲ್ಲಿ 5 ಅಂಕಗಳು ಮತ್ತು ಗಣಿತದಲ್ಲಿ 7 ಅಂಕಗಳನ್ನು ಕಡಿತಗೊಳಿಸಲಾಗಿದೆ. ಇದು ಒಟ್ಟು 100 ಅರ್ಹತಾ ಅಂಕಗಳಿಗೆ 6 ಅಂಕಗಳನ್ನು ಕಡಿತಗೊಳಿಸುತ್ತದೆ. KCET 2022 ಪರಿಷ್ಕೃತ ಫಲಿತಾಂಶಗಳನ್ನು ವೀಕ್ಷಿಸುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
KCET ಪರಿಷ್ಕೃತ ಫಲಿತಾಂಶ 2022 ಪರಿಶೀಲಿಸುವುದು ಹೇಗೆ ? :
ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ kea.kar.nic.in ಗೆ ಹೋಗಿ
ಸ್ಟೆಪ್ 2 : ಹೋಂ ಪೇಜ್ ನಲ್ಲಿ KCET ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ
ಸ್ಟೆಪ್ 3 : ಅಭ್ಯರ್ಥಿಗಳು ನಿಮ್ಮ ರಿಜಿಸ್ಟರ್ ಸಂಖ್ಯೆ ಮತ್ತು ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಿ.
ಸ್ಟೆಪ್ 4 : ನಂತರ ಅಭ್ಯರ್ಥಿಗಳು ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 5 : ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.
ಈ ಹಿಂದೆ ಜುಲೈ 30 ರಂದು, ಕೆಇಎ ಈ ವರ್ಷ 2020-21ನೇ ಬ್ಯಾಚ್‌ನ ಎರಡನೇ ವರ್ಷದ ಪಿಯು ಅಂಕಗಳನ್ನು ಸಿಇಟಿ ರ‍್ಯಾಂಕಿಂಗ್‌ಗೆ ಪರಿಗಣಿಸಲಾಗುವುದಿಲ್ಲ ಎಂದು ಸೂಚನೆ ನೀಡಿತ್ತು. ಆಗ ಕೆಇಎ ಯುಜಿಸಿಇಟಿ ಫಲಿತಾಂಶವನ್ನು ಸಿದ್ಧಪಡಿಸುವಾಗ ಕೆಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಆದಾಗ್ಯೂ 2021-22 ವಿದ್ಯಾರ್ಥಿಗಳು ದ್ವಿತೀಯ ಪಿಯು ಅಂಕಗಳು ಮತ್ತು ಪ್ರವೇಶ ಪರೀಕ್ಷೆಯ ಅಂಕಗಳ ನಿಯಮಿತ 50:50 ಅನುಪಾತದಲ್ಲಿ ಸ್ಥಾನ ಪಡೆದಿದ್ದಾರೆ.
ಅಭ್ಯರ್ಥಿಗಳು ನೇರವಾಗಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.