ಆಯುಷ್ ಅಭ್ಯರ್ಥಿಗಳಿಗೆ ಇಂದು ಕೌನ್ಸಿಲಿಂಗ್

Posted By:

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2017-18 ನೇ ಸಾಲಿನ ಆಯುರ್ವೇದ , ಯೋಗ ಮತ್ತು ನ್ಯಾಚುರೋಪತಿ, ಯುನಾನಿ ಮತ್ತು ಹೋಮಿಯೋಪತಿ (ಆಯುಷ್) ಸ್ನಾತಕೋತ್ತರ ಕೋರ್ಸುಗಳು ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಎಐಎ-ಪಿಜಿಇಇ-2017 ರಲ್ಲಿ ಅರ್ಹತೆ ಪಡೆದವರು ವೆಬ್ಸೈಟ್ ನಲ್ಲಿ ಲಿಂಕ್ ಆಯ್ಕೆ ಮಾಡಿಕೊಂಡು ಅಕ್ಟೋಬರ್ 7 ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5:30 ರೊಳಗೆ ಅರ್ಜಿ ಸಲ್ಲಿಸಬಹುದು.

ಇಂದು ಆಯುಷ್ ಕೌನ್ಸಿಲಿಂಗ್

ನೋಂದಣಿ ಶುಲ್ಕ, ವೇಳಾಪಟ್ಟಿ, ದಾಖಲಾತಿ ಪರಿಶೀಲನೆಗೆ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕಾದ ವಿವರಗಳು ಮತ್ತು ಇನ್ನಿತರ ವಿವರಗಳನ್ನು ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಎಐಎ ಪಿಜಿಇಟಿ-2017ರ ಮಾಹಿತಿ ಪುಸ್ತಕದಲ್ಲಿ ನೀಡಿರುವ ಅರ್ಹತಾ ಷರತ್ತುಗಳು ಮತ್ತು ಇತರೆ ಮಾಹಿತಿಗಳನ್ನೂ ಸಹ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಅಭ್ಯರ್ಥಿಯ ಅರ್ಹತೆಯು ತಾತ್ಕಾಲಿಕವಾಗಿರುತ್ತದೆ ಮತ್ತು ಎಐಎ ಪಿಜಿಇಟಿ-2017 ರ ಮಾಹಿತಿ ಪುಸ್ತಕದಲ್ಲಿ ನೀಡಿರುವ ಅರ್ಹತಾ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಹಾಗೆಯೇ ಪ್ರವೇಶವು ಸಂಬಂಧಿಸಿದ ಸಿಸಿಐಎಂ/ಸಿಸಿಎಚ್/ಸರ್ಕಾರ/ಅರ್ಹತಾ ಪ್ರಾಧಿಕಾರ/ವಿಶ್ವವಿದ್ಯಾಲಯ ಅನುಮೋದನೆಗೆ ಒಳಪಟ್ಟಿರುತ್ತದೆ.

ನೋಂದಣಿ ಮಾಡುವುದರಿಂದಾಗಲಿ ಅಥವಾ ದಾಖಲಾತಿಗಳನ್ನು ಪರಿಶೀಲನೆ ಮಾಡಿಕೊಳ್ಳುವುದರಿಂದಾಗಲಿ ಕರ್ನಾಟಕದ ಆಯುಷ್ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕ್ಕೆ ಅಭ್ಯರ್ಥಿಗಳು ಯಾವುದೇ ಹಕ್ಕನ್ನು ಪಡೆಯುವುದಿಲ್ಲ.

ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ ವಿಳಾಸ kea.kar.nic.in ಗೆ ಭೇಟಿ ನೀಡಲು ಕೋರಿದೆ.

English summary
Karnataka examination authority conducting counseling for post graduate ayush courses today.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia