ಸಿಬಿಎಸ್ಇ ಪರಿಣಾಮ ಮುಂದಕ್ಕೆ ಹೋದ ಸಿಇಟಿ ಫಲಿತಾಂಶ

Posted By:

ಮೇ 24 ಕ್ಕೆ ಪ್ರಕಟವಾಗಬೇಕಿದ್ದ ಸಿಬಿಎಸ್ಇ ಹನ್ನೆರಡನೇ ತರಗತಿಯ ಫಲಿತಾಂಶವು ವಿಳಂಬವಾದ ಕಾರಣ ಕರ್ನಾಟಕ ಸಿಇಟಿ ಫಲಿತಾಂಶ ಕೂಡ ಮುಂದಕ್ಕೆ ಹೋಗಿದೆ.

2017ರ ಸಿಇಟಿ ಫಲಿತಾಂಶವು ಮೇ 30 ರಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ಮೊದಲು ಮೇ 27ರಂದು ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಳಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿತ್ತು.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್​ಇ) ಹಾಗೂ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ (ಐಸಿಎಸ್​ಇ)ಮಾನ್ಯತೆ ಹೊಂದಿರುವ ಕಾಲೇಜುಗಳಲ್ಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ತಡವಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವೂ ವಿಳಂಬವಾಗಲಿದೆ.

ಮೇ 30ಕ್ಕೆ ಸಿಇಟಿ ಫಲಿತಾಂಶ?

2017ರ ಸಿಇಟಿ ಫಲಿತಾಂಶ ವಿಳಂಬವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸಿಬಿಎಸ್​ಇ ಹಾಗೂ ಐಸಿಎಸ್​ಇ ದ್ವಿತೀಯ ಪಿಯುಸಿ ಫಲಿತಾಂಶ ವಿಳಂಬವಾಗಿರುವ ಕಾರಣ, ಸಿಇಟಿ ಫಲಿತಾಂಶವನ್ನೂ ಮುಂದೂಡುವ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಸಿಬಿಎಸ್​ಇ ಹಾಗೂ ಐಸಿಎಸ್​ಇ ಫಲಿತಾಂಶದ ಮೊದಲೇ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದರೆ, ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧಿಕಾರಕ್ಕೆ ಗೊಂದಲ ಉಂಟಾಗಲಿದೆ. ಹೀಗಾಗಿ 3 ದಿನ ಕಾಯಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಿಇಟಿ ಪರೀಕ್ಷಾ ಫಲಿತಾಂಶ ದಿನವನ್ನು ಮೊದಲೇ ಸಿಬಿಎಸ್​ಇ ಹಾಗೂ ಐಸಿಎಸ್​ಇಗೆ ಪ್ರಾಧಿಕಾರ ತಿಳಿಸುತ್ತಿದೆ. ಆದರೆ, ನಮ್ಮ ಮಾತನ್ನು ಪದೇಪದೆ ಅವರು ನಿರ್ಲಕ್ಷಿಸುತ್ತಿದ್ದಾರೆ. ಕೆಲ ವರ್ಷಗಳಿಂದಲೂ ಇದೇ ರೀತಿ ಸಿಇಟಿ ಫಲಿತಾಂಶವನ್ನು ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾರೆ.

ಮೇ 30ರಂದು ಸಿಇಟಿ ಫಲಿತಾಂಶ ಪ್ರಕಟವಾದರೆ, ದಾಖಲೆಗಳ ಪರಿಶೀಲನೆಗೆ ಕೇವಲ ಒಂದು ದಿನ ಉಳಿಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೇಳಾಪಟ್ಟಿಯಂತೆ ಜೂ.1ರಿಂದ ದಾಖಲೆಗಳ ಪರಿಶೀಲನೆ ಆರಂಭವಾಗಲಿದೆ. ಇತ್ತ ಸಿಬಿಎಸ್​ಇ ಹಾಗೂ ಐಸಿಎಸ್​ಇಯೂ ತನ್ನ ಫಲಿತಾಂಶ ಪ್ರಕಟಣೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

English summary
The Karnataka Examination authority has decided to postpone the announcement of results for Common Entrance Test (CET) 2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia