KCET 2020 : ದಾಖಲೆಗಳ ಪರಿಶೀಲನೆಯ ತಾತ್ಕಾಲಿಕ ಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಸಿಇಟಿ-2020ರ ಅಭ್ಯರ್ಥಿಗಳು ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಪರಿಶೀಲನೆ ಮಾಡಿ ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಪಟ್ಟಿ ಮತ್ತು ತಿರಸ್ಕರಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಲಾಗಿದೆ.

 

ಸಿಇಟಿ ದಾಖಲೆಗಳ ಪರಿಶೀಲನೆಯ ತಾತ್ಕಾಲಿಕ ಪಟ್ಟಿ ರಿಲೀಸ್

ಅಭ್ಯರ್ಥಿಗಳು ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಪ್ರಕಟ ಮಾಡಲಾಗಿರುವ ಮಾಹಿತಿಯನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಲು ಸೂಚಿಸಿದೆ. ವಿವರಗಳಲ್ಲಿ ಯಾವುದಾದರೂ ವ್ಯತ್ಯಾಸ ಕಂಡು ಬಂದಲ್ಲಿ ಅಕ್ಟೋಬರ್ 27,2020ರ ಸಂಜೆ 4 ಗಂಟೆಯೊಳಗೆ ಅಂತಹ ದಾಖಲೆಗಳನ್ನು ಪೋರ್ಟಲ್ ಮೂಲಕವೇ ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗಿದೆ.

ಅರ್ಜಿಯನ್ನು ಕ್ಲೇಮ್ ಮಾಡದೇ ಇರುವ ಅಥವಾ ತಪ್ಪಾಗಿ ಕ್ಲೇಮ್ ಮಾಡಿ ದಾಖಲೆಗಳನ್ನು ಅಪ್‌ಲೋಡ್ ಮಾಡಿದ್ದರೂ ಅಂತಹ ದಾಖಲೆಗಳನ್ನು ಪುರಸ್ಕರಿಸಿರುವುದಿಲ್ಲ. ಆದ್ದರಿಂದ ಅಂತಹ ಅಭ್ಯರ್ಥಿಗಳು ಮತ್ತೊಮ್ಮೆ ಪುನಹ ಅದೇ ದಾಖಲೆಗಳನ್ನು ಅಪ್‌ಲೋಡ್ ಮಾಡಬಾರದು.

ಸಿಇಟಿ-2020 ಪ್ರವೇಶಾತಿಗೆ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ಅನುಸಾರ ಯಾವ ಅರ್ಹತಾ ದಾಖಲೆಗಳನ್ನು ಅಪ್‌ಲೋಡ್ ಮಾಡದಿರುವ ಕಾರಣಕ್ಕೆ ತಿರಸ್ಕರಿಸಲಾಗಿದೆಯೋ ಅಂತಹ ದಾಖಲೆಗಳನ್ನು ಅಕ್ಟೋಬರ್ 27,2020 ರ ಸಂಜೆ 4 ಗಂಟೆಯೊಳಗೆ ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿಯಲ್ಲಿ ಮೀಸಲಾತಿಗಳನ್ನು ಕ್ಲೇಮ್ ಮಾಡಿ ದಾಖಲೆಗಳನ್ನು ಅಪ್‌ಲೋಡ್ ಮಾಡದಿರುವ ಅಭ್ಯರ್ಥಿಗಳೂ ಸಹ ದಾಖಲೆಗಳನ್ನುಅಕ್ಟೋಬರ್ 27,2020 ರ ಸಂಜೆ 4 ಗಂಟೆಯೊಳಗಾಗಿ ಪೋರ್ಟಲ್ ಮುಖಾಂತರವೇ ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಅಂತಿಮ ಪರಿಶೀಲನಾ ಪಟ್ಟಿಯನ್ನು ಅಕ್ಟೋಬರ್ 31, 2020 ರಂದು ಸಂಜೆ 4 ಗಂಟೆ ನಂತರ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗುವುದು ಹಾಗೂ ಅಭ್ಯರ್ಥಿಗಳು ವೆರಿಫಿಕೇಶನ್ ಸ್ಲಿಪ್ ಅಕ್ನಾಲೆಡ್ಜ್ ಮೆಂಟ್ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು.

For Quick Alerts
ALLOW NOTIFICATIONS  
For Daily Alerts

English summary
KEA released CET 2020 provisional list of verified candidates and rejection list of candidates.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X