ಸಿಇಟಿ 2018: ಅರ್ಜಿ ಸಲ್ಲಿಕೆಗೆ ಆನ್-ಲೈನ್ ತರಬೇತಿ

ಆನ್ಲೈನ್ ಅರ್ಜಿ ಭರ್ತಿ ಮಾಡುವ ವೇಳೆ ಆಗುವ ತಪ್ಪುಗಳನ್ನು ಸರಿಪಡಿಸಲು, ಹಾಗು ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಇಎ ಈ ವರ್ಷ ಆನ್-ಲೈನ್ ನಲ್ಲಿ ಅಣುಕು ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ವೃತ್ತಿಪರ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆಯ ಅರ್ಜಿ ಸಲ್ಲಿಕೆಗೆ ಆನ್ಲೈನ್ ತರಬೇತಿ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮುಂದಾಗಿದೆ.

ನೀಟ್ 2018: ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ, ಮೇ 6 ರಂದು ಪರೀಕ್ಷೆ ಸಾಧ್ಯತೆನೀಟ್ 2018: ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ, ಮೇ 6 ರಂದು ಪರೀಕ್ಷೆ ಸಾಧ್ಯತೆ

ಆನ್ಲೈನ್ ಅರ್ಜಿ ಭರ್ತಿ ಮಾಡುವ ವೇಳೆ ಆಗುವ ತಪ್ಪುಗಳನ್ನು ಸರಿಪಡಿಸಲು, ಹಾಗು ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಈ ವರ್ಷ ಆನ್-ಲೈನ್ ನಲ್ಲಿ ಅಣುಕು ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ಕಾಮೆಡ್ ಕೆ 2018: ಅರ್ಜಿ ಸಲ್ಲಿಕೆ ಪ್ರಾರಂಭಕಾಮೆಡ್ ಕೆ 2018: ಅರ್ಜಿ ಸಲ್ಲಿಕೆ ಪ್ರಾರಂಭ

ಸಿಇಟಿ ಆನ್-ಲೈನ್ ತರಬೇತಿ

ಇಂಜಿನಿಯರಿಂಗ್ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ವಿದ್ಯಾರ್ಥಿಗಳು ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಪ್ರಮುಖವಾಗಿ 371 (ಜೆ) ಹಾಗೂ ಇತರೆ ಮೀಸಲಾತಿ ಕಲಂಗಳಲ್ಲಿ ವರ್ಗ ನಮೂದಿಸುವಾಗ ವಿಪರೀತ ತಪ್ಪುಗಳು ಮರುಕಳಿಸುತ್ತಿವೆ.

ಇನ್ನು ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ವೈದ್ಯ ಹಾಗೂ ದಂತ ವೈದ್ಯ ಸೀಟುಗಳ ಪ್ರವೇಶಕ್ಕೆ ನೀಟ್ ಪರೀಕ್ಷೆಗೆ ಒಮ್ಮೆ ಆನ್‌-ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಮಾರ್ಪಾಟಿಕೆ ಅವಕಾಶವೇ ಇರುವುದಿಲ್ಲ.

ಈ ಹಿನ್ನೆಲೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ ಪ್ರಥಮ ಬಾರಿಗೆ ಆನ್-ಲೈನ್ ನಲ್ಲಿ ಅಣುಕು ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುತ್ತಿದೆ.

ಸಿಇಟಿ ಆನ್-ಲೈನ್ ತರಬೇತಿ

ವಿದ್ಯಾರ್ಥಿಗಳು ಪ್ರಯೋಗಿಕವಾಗಿ ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ತಿಳಿದ ನಂತರ ಮತ್ತೆ ಸಿಇಟಿಗೆ ಸುಲಭವಾಗಿ ಅರ್ಜಿ ಸಲ್ಲಿಸಲು ಅನುಕೂಲವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿ ಗಂಗಾಧರಯ್ಯ ತಿಳಿಸಿಸಿದ್ದಾರೆ.

ಫೆಬ್ರವರಿ ಮೊದಲ ವಾರದಲ್ಲಿ ಅಣುಕು ಆನ್-ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಪ್ರಾಧಿಕಾರ ಸಿದ್ಧತೆಗಳನ್ನು ಆರಂಭಿಸಿದೆ ಎಂದು ಅವರು ಮಾಹಿತಿ ನೀಡಿದರು.

ಈ ಬಾರಿಯ ಸಿಇಟಿ ಪರೀಕ್ಷೆಗಳು ಏ. 18 ಮತ್ತು 19ರಂದು ನಡೆಯಲಿದ್ದು, ಹೊರನಾಡು ಹಾಗೂ ಗಡಿನಾಡ ಕನ್ನಡಿಗ ಅಭ್ಯರ್ಥಿಗಳಿಗೆ ಏ. 20ರಂದು ಬೆಂಗಳೂರಿನಲ್ಲಿ ಮಾತ್ರ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.

ಸಿಇಟಿ

ಎಂಜಿನಿಯರಿಂಗ್‌, ತಂತ್ರಜ್ಞಾನ, ಕೃಷಿ ವಿಜ್ಞಾನ ಕೋರ್ಸ್‌ಗಳಾದ ಅಂದರೆ, ಬಿವಿಎಸ್‌ಸಿ ಅಂಡ್‌ ಎಎಚ್‌ ಬಿಎಸ್ಸಿ- ಕೃಷಿ, ರೇಷ್ಮೆ ಕೃಷಿ, ತೋಟಗಾರಿಕೆ, ಅರಣ್ಯ ವಿಜ್ಞಾನ, ಕೃಷಿ ಜೈವಿಕ ತಂತ್ರಜ್ಞಾನ, ಬಿಎಚ್‌ಎಸ್‌ಸಿ , ಬಿ.ಟೆಕ್‌- ಕೃಷಿ ಎಂಜಿನಿಯರಿಂಗ್‌, ಆಹಾರ ತಂತ್ರಜ್ಞಾನ, ಹೈನುಗಾರಿಕೆ ತಂತ್ರಜ್ಞಾನ, ಬಿಎಫ್‌ಎಸ್‌ಸಿ (ಮೀನುಗಾರಿಕೆ), ಬಿ.ಟೆಕ್‌ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ), ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ), ಬಿ-ಫಾರ್ಮ, ಫಾರ್ಮ-ಡಿ ಮತ್ತು ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಬರೆಯುವುದು ಕಡ್ಡಾಯವಾಗಿದೆ.

ಸಿಇಟಿ ರ‍್ಯಾಂಕಿಂಗ್‌ ಅನ್ವಯ ಪ್ರಾಧಿಕಾರ ಈ ಕೋರ್ಸ್‌ಗಳಿಗೆ ಸೀಟುಗಳನ್ನು ಹಂಚಿಕೆ ಮಾಡಲಿದೆ.

For Quick Alerts
ALLOW NOTIFICATIONS  
For Daily Alerts

English summary
The Karnataka Examination Authority (KEA) has to provide mock applications to CET aspirants. This decision has been taken to fix errors when filling up an online application.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X