Kiccha Sudeep Charitable Society : ವಿದ್ಯಾರ್ಥಿಗಳ ಆನ್‌ಲೈನ್ ಕ್ಲಾಸ್ ಕಿರಿ ಕಿರಿ ಬ್ರೇಕ್ ಗೆ ಹೊಸ ಆಪ್

ಕೊರೋನಾ ಬಂದ ನಂತರ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಅನೇಕ ನಟರು ಹೆಚ್ಚು ಪ್ರಸಿದ್ದಿ ಹೊಂದುತ್ತಿದ್ದಾರೆ. ಅದರಲ್ಲೂ ಕನ್ನಡ ಸಿನೆಮಾಗಳಲ್ಲಿ ಕಿಚ್ಚ ಎಂದೇ ಪ್ರಸಿದ್ಧಿ ಹೊಂದಿರುವ ಕಿಚ್ಚ ಸುದೀಪ್ ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಮಹತ್ತರವಾದ ಹೆಜ್ಜೆಯನ್ನು ಇಡುತ್ತಿದ್ದಾರೆ.

ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಕಡೆಯಿಂದ ವಿದ್ಯಾರ್ಥಿಗಳ ಅನ್‌ಲೈನ್ ಕ್ಲಾಸ್ ಕಿರಿ ಕಿರಿ  ತಪ್ಪಿಸಲು ಹೊಸ ಆಪ್

ಕೊರೋನಾ ಸಂಕಷ್ಟದಿಂದಾಗಿ ಅನೇಕ ಕ್ಷೇತ್ರಗಳಿಗೆ ಪೆಟ್ಟು ಬಿದ್ದಿದ್ದು, ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚು ಹಾನಿ ಮಾಡಿದೆ. ಹೀಗಿರುವಾಗ ವಿದ್ಯಾರ್ಥಿಗಳ ಭವಿಷ್ಯದ ಕತೆ ಏನು? ಈ ಆನ್‌ಲೈನ್ ಕಲಿಕೆ ಎಲ್ಲಿವರೆಗೆ ಎನ್ನುವ ಗೊಂದಲಗಳೇ ಮನೆ ಮಾಡಿವೆ. ಇದೀಗ ಬಹುತೇಕ ಕಡೆಗಳಲ್ಲಿ ಆನ್‌ಲೈನ್ ತರಗತಿಗಳ ಮೊರೆ ಹೋಗಿದ್ದು, ಈ ನಡುವೆ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ಕೆಲವು ಮಾಧ್ಯಮಗಳು ವರದಿ ಕೂಡ ಮಾಡಿದ್ದವು. ಆನ್‌ಲೈನ್ ತರಗತಿಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಹೊಸ ಆಪ್ ಒಂದನ್ನು ಪರಿಚಯಿಸುತ್ತಿದೆ.

ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮೂಲಕ ಶಾಲೆಗಳನ್ನು ದತ್ತು ಪಡೆಯುವ ಕಾರ್ಯ ಈಗಾಗಲೇ ಯಶಸ್ವಿಯಾಗಿದೆ. ಅಂತಹ ಶಾಲೆಗಳಲ್ಲಿ ನಡೆಸಲಾಗುವ ಆನ್​ಲೈನ್​ ತರಗತಿಗಳಲ್ಲಿ (Online Class) ಎದುರಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಈ ಹೊಸ ಆ್ಯಪ್​ ಸಹಕಾರಿ ಆಗಲಿದೆ ಎಂದು ಕಿಚ್ಚ ಸುದೀಪ್​ ಚಾರಿಟೇಬಲ್​ ಸೊಸೈಟಿಯ ಅಧ್ಯಕ್ಷ ರಮೇಶ್ ಕಿಟ್ಟಿ ಹೇಳಿದ್ದಾರೆ.

ಆ ಆಪ್ ಯಾವುದು ಮತ್ತು ಏನಿದರ ವಿಶೇಷತೆ ? :

ನಟ ಸುದೀಪ್ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಲು ಅನೇಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ತಂಡದವರು ಮಾಡಿರುವ ಹೊಸ ಆ್ಯಪ್​ನಿಂದಾಗಿ ಮಕ್ಕಳ ಆನ್​ಲೈನ್​ ತರಗತಿಗಳು​ ಸುಗಮವಾಗಿ ನಡೆಯಲಿವೆ.

ಈ ಆನ್‌ಲೈನ್ ಕ್ಲಾಸ್​ನಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಬೆನ್ನು ನೋಡಿಕೊಂಡು ಪಾಠ ಕೇಳುತ್ತಾರೆ. ಇದರಿಂದ ಅವರಿಗೆ ಪಾಠ ಅರ್ಥ ಆಗದೇ‌ ಇರಬಹುದು ಅಥವಾ ಪಾಠ ಕೇಳುವ ಆಸಕ್ತಿ ಕಳೆದುಕೊಳ್ಳಬಹುದು. ಹೀಗಾಗಿ ವಿದ್ಯಾರ್ಥಿಗಳ ಗಮನವನ್ನು ಹೆಚ್ಚು ಕೇಂದ್ರೀಸುವ ನಿಟ್ಟಿನಲ್ಲಿ ಈ ಹೊಸ ಆಪ್ ಅನ್ನು ಪರಿಚಯಿಸಲಾಗುತ್ತಿದೆ. ಅಲ್ಲದೇ ಈ ಆ್ಯಪ್​ ಬಳಸಿದರೆ ಅಂತಹ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂಬ ಭರವಸೆಯನ್ನು ಕಿಚ್ಚ ಸದೀಪ್​ ಚಾರಿಟೇಬಲ್​ ಸೊಸೈಟಿ ನೀಡುತ್ತಿದೆ.

ಡಾರ್ಕ್ ಬೋರ್ಡ್ ಆ್ಯನಿಮೇಷನ್ ಎಜುಕೇಷನ್ ಆಪ್ ನ ವೆಶೇಷತೆ ಏನೆಂದರೆ ಈ ಆಪ್ ಬಳಸಿ ಆನ್​ಲೈನ್ ತರಗತಿಗಳನ್ನು ಮಾಡಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಚೆನ್ನಾಗಿ ಅರ್ಥ ಆಗುತ್ತದೆ. ಏಕೆಂದರೆ ವಿದ್ಯಾರ್ಥಿಗಳು ಶಿಕ್ಷಕರ ಮುಂದೆ ಕೂತು ಪಾಠ ಕೇಳಿದಂತೆ ಭಾಸವಾಗುತ್ತದೆ. ಅಕ್ಷರ ಕಾಣಿಸದೇ ಮಕ್ಕಳು ಪರದಾಡುವ ಸಮಸ್ಯೆಯೂ ಎದುರಾಗುವುದಿಲ್ಲ. ಏಕೆಂದರೆ ಮಕ್ಕಳು ಹಾಗೂ ಶಿಕ್ಷಕರ ಮಧ್ಯೆಯೇ ಬೋರ್ಡ್ ಇರುತ್ತದೆ. ಗ್ಲಾಸ್‍ನಂತಹ ಬೋರ್ಡ್ ಮೇಲೆ ಸ್ಕೆಚ್ ಪೆನ್‍ನಲ್ಲಿ ಬರೆಯುತ್ತಾ, ಮಕ್ಕಳನ್ನು ನೋಡುತ್ತಾ ಶಿಕ್ಷಕರು ಪಾಠ ಮಾಡಬಹುದು.ಅಲ್ಲದೇ ಯಾವುದೇ ವಿಷಯದ ಪಾಠವನ್ನು ರೆಕಾರ್ಡ್ ಮಾಡಿ ಕೂಡ ವಿದ್ಯಾರ್ಥಿಗಳಿಗೆ ಕಳಿಸಬಹುದು ಎಂದು ರಮೇಶ್ ಕಿಟ್ಟಿ ಹೇಳಿದ್ದಾರೆ.

ಈಗಾಗಲೇ ಕಿಚ್ಚ ಸುದೀಪ ಚಾರಿಟೆಬಲ್ ಸೊಸೈಟಿ ವತಿಯಿಂದ ದತ್ತು ಪಡೆದಿರುವ ಸರ್ಕಾರಿ ಶಾಲೆಗಳನ್ನು ಡಿಜಿಟಲೈಸ್ ಮಾಡುವ ಕೆಲಸಗಳೂ ಭರದಿಂದ ಸಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಶಾಲೆಗಳ ಅಭಿವೃದ್ದಿ ಕೆಲಸ ಪೂರ್ಣಗೊಳ್ಳಲಿದೆ. ಈ ಶಾಲೆಗಳಲ್ಲಿ ಡಾರ್ಕ್ ಬೋರ್ಡ್ ಅನಿಮೇಷನಲ್ ಎಜುಕೇಷನ್ ಆ್ಯಪ್ ಮೂಲಕ ಆನ್‍ಲೈನ್ ತರಗತಿಗಳು ಕೂಡ ಪ್ರಾರಂಭವಾಗಲಿವೆ.

ಈ ಆ್ಯಪ್​ ಅನ್ನು ಎಲ್ಲಾ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಯವರು ಕೂಡ ಬಳಸಿಕೊಳ್ಳಬಹುದು. ರಾಜ್ಯ ಸರ್ಕಾರಕ್ಕೂ ಈ ಆ್ಯಪ್ ಬಗ್ಗೆ ಮನವರಿಕೆ ಮಾಡಿಕೊಡಲು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮುಂದಾಗುತ್ತಿದೆ. ಶಿಕ್ಷಣ ಸಚಿವರನ್ನ ಭೇಟಿ ಮಾಡಿ ಈ ಆ್ಯಪ್​ ಬಗ್ಗೆ ತಿಳಿಸಿ ಆನ್​ಲೈನ್​ ಕ್ಲಾಸ್​ಗಳಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಲಿದೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ. ತದನಂತರ ಎಲ್ಲಾ ಶಾಲಾ ಶಿಕ್ಷಕರಿಗೂ ಇದನ್ನು ಬಳಸಿಕೊಳ್ಳಲು ಉತ್ತೇಜಿಸುವ ಕೆಲಸ ಮಾಡುತ್ತೇವೆ ಎಂದು ಕಿಚ್ಚ ಸುದೀಪ್ ಚಾರಿಟೇಬಲ್​ ಸೊಸೈಟಿ ಅಧ್ಯಕ್ಷ ರಮೇಶ್ ಕಿಟ್ಟಿ ಹೇಳಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Kicch sudeep charitable society introducing new app to avoid the annoyance of online class.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X