ಕೆಪಿಸಿಎಲ್ ನೇಮಕಾತಿ: ತಾತ್ಕಾಲಿಕ ಅಯ್ಕೆ ಪಟ್ಟಿ ಪ್ರಕಟ

Posted By:

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವೆಲ್ಫೇರ್ ಆಫೀಸರ್/ ಫ್ಯಾಕ್ಟರಿ ಮೆಡಿಕಲ್ ಆಫೀಸರ್/ಮೆಡಿಕಲ್ ಆಫೀಸರ್/ ಅಕೌಂಟ್ಸ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ವಿವಿಧ ವಿದ್ಯುತ್ ಯೋಜನಾ/ ಕೇಂದ್ರಗಳಿಗೆ ವೆಲ್ಫೇರ್ ಆಫೀಸರ್/ ಫ್ಯಾಕ್ಟರಿ ಮೆಡಿಕಲ್ ಆಫೀಸರ್/ಮೆಡಿಕಲ್ ಆಫೀಸರ್/ ಅಕೌಂಟ್ಸ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆನ್ಲೈನ್ ಮೂಲಕ ಆಹ್ಚಾನಿಸಿತ್ತು.

ಕೆಪಿಸಿಎಲ್ ನ ಹುದ್ದೆಗಳನ್ನು ಬಯಸಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆಯನ್ನು ದಿನಾಂಕ 16-01-2017 ಮತ್ತು 17-01-2017 ರಂದು ನಡೆಸಲಾಗಿತ್ತು. ಆಯ್ಕೆ ಪ್ರಕ್ರಿಯೆ ಅಂಗವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು (ವೆಲ್ಫೇರ್ ಆಫೀಸರ್ ಹೊರತು ಪಡಿಸಿ) ನಿಗಮದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ತಾತ್ಕಾಲಿಕ ಅಯ್ಕೆ ಪಟ್ಟಿ ಪ್ರಕಟ

ಆಯ್ಕೆ ಪಟ್ಟಿ ನೋಡುವ ವಿಧಾನ

  • ಕರ್ನಾಟಕ ವಿದ್ಯುತ್ ನಿಗಮದ ವೆಬ್ಸೈಟ್ ವಿಳಾಸಕ್ಕೆ ಬೇಟಿ ನೀಡಿ
  • ಎಡಭಾಗದಲ್ಲಿ ಕಾಣುವ "CAREERS AND RECRUITMENT " ಬಟನ್ ಕ್ಲಿಕ್ ಮಾಡಿ
  • Recruitment - 2016 ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಕೆಪಿಸಿಎಲ್ ಅಧಿಸೂಚನೆ ತೆರೆದುಕೊಳ್ಳುತ್ತದೆ
  • ತಾತ್ಕಾಲಿಕ ಪಟ್ಟಿಯ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸಂಬಂಧಪಟ್ಟ ಹುದ್ದೆಗಳ ಪ್ರತ್ಯೇಕ ಲಿಂಕ್ ಪಟ್ಟಿ ಗೋಚರಿಸುತ್ತದೆ
  • ಹುದ್ದೆಯ ಮೇಲೆ ಕ್ಲಿಕ್ ಮಾಡಿ ಆಯ್ಕೆ ಮಾಹಿತಿ ಪಡೆಯಿರಿ

ಕೆಪಿಸಿಎಲ್

ಕೆಪಿಸಿಎಲ್ ಕರ್ನಾಟಕ ಸರ್ಕಾರದ ವಿದ್ಯುತ್ ಉತ್ಪಾದನೆ ನಿಗಮವಾಗಿದೆ. ಕೆಪಿಸಿಎಲ್ ಸುಮಾರು ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು 1970ರಲ್ಲಿ ಸ್ಥಾಪನೆಗೊಂಡಿತು. ಜಲವಿದ್ಯುತ್, ಶಾಖೋತ್ಪನ್ನ ವಿದ್ಯುತ್, ಪವನಶಕ್ತಿ, ಸೌರಶಕ್ತಿ ಮತ್ತು ಇನ್ನಿತರ ಸಂಪನ್ಮೂಲಗಳಿಂದ ವಿದ್ಯುತ್ ಉತ್ಪಾದಿಸುತ್ತಿದೆ. ವಿದ್ಯುತ್ ಸ್ಥಾವರಗಳ ವಿನ್ಯಾಸ, ನಿರ್ಮಾಣ, ಚಾಲನೆ ಮತ್ತು ನಿರ್ವಹಣೆ ಈ ನಿಗಮದ ಕೆಲಸವಾಗಿದೆ. ಉನ್ನತ ಮಟ್ಟದ ಕಾರ್ಯನಿರ್ವಹಣೆಗಾಗಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದು, ಸ್ಥಾವರಗಳಿಂದ ಅತ್ಯಧಿಕ ಉತ್ಪಾದನೆ ಮತ್ತು ನೂತನ ಸ್ಥಾವರಗಳ ತ್ವರಿತ ಕಾರ್ಯಾರಾಂಭದ ಮೂಲಕ ಹೆಸರು ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ ಗಮನಿಸಿ karnatakapower.com

English summary
The Provisional Select Lists for the post of Factory Medical Officer, Medical Officer & Account Officer are published.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia