ಕೆಪಿಎಸ್ಸಿ ಫಲಿತಾಂಶ: 8560 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ

Posted By:

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) 2015ನೇ ಸಾಲಿನ 428 ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿಗೆ ನಡೆಸಿದ ಪೂರ್ವಭಾವಿ ಪರೀಕ್ಷೆ ಫಲಿತಾಂಶವನ್ನು ಗುರುವಾರ ಪ್ರಕಟಿಸಿದೆ.

ಆ. 20ರಂದು ನಡೆದಿದ್ದ ಪರೀಕ್ಷೆಗೆ ಅರ್ಜಿ ಸಲ್ಲಿಸಿದ 2.31 ಲಕ್ಷ ಅಭ್ಯರ್ಥಿಗಳ ಪೈಕಿ 1.31 ಲಕ್ಷ ಮಂದಿ ಹಾಜರಾಗಿದ್ದರು. 1:20 ಅನುಪಾತದಲ್ಲಿ 8,560 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ಕೆಪಿಎಸ್ಸಿ ಪ್ರಿಲಿಮ್ಸ್ ಫಲಿತಾಂಶ

ಶೀಘ್ರದಲ್ಲೇ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲಿರುವ ಆಯೋಗ ನವೆಂಬರ್​ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆಯಿದೆ.

ಕೆಎಎಸ್ ಮುಖ್ಯ ಪರೀಕ್ಷೆಯ ವಿವರಗಳು

ವಿಶೇಷ ಓಎಂಆರ್ ಪ್ರತಿ ಬಳಸಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆದ ಒಂದು ತಿಂಗಳಲ್ಲಿಯೇ ಇದೇ ಮೊದಲ ಬಾರಿಗೆ ಫಲಿತಾಂಶ ಪ್ರಕಟಿಸಲಾಗಿದೆ.

ವರ್ಗವಾರು ಅಂಕ ವಿವರ

ವರ್ಗಕಟ್ ಆಫ್ ಅಂಕಗಳು
ಸಾಮಾನ್ಯ183
ಸಿ1166
2ಎ149
2ಬಿ137.5
3ಎ173
3ಬಿ170.5
ಎಸ್.ಸಿ153
ಎಸ್.ಟಿ161

ಹೈದ್ರಾಬಾದ್ ಕರ್ನಾಟಕ

ವರ್ಗಕಟ್ ಆಫ್ ಅಂಕಗಳು
ಸಾಮಾನ್ಯ145
ಸಿ1128
2ಎ133
2ಬಿ121
3ಎ129
3ಬಿ139
ಎಸ್.ಸಿ123.50
ಎಸ್.ಟಿ127.50

ಫಲಿತಾಂಶದ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
The Karnataka Public Service Commission (KPSC) has published a preliminary examination results for the appointment of 428 Gazetted Probationaries on Thursday

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia