ಕರ್ನಾಟಕ ಲೋಕಸೇವಾ ಆಯೋಗವು 2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ವಿವಿಧ ವಿಷಯಗಳಿಗೆ ವೇಳಾಪಟ್ಟಿಯಲ್ಲಿ ನಿಗದಿಪಡಿಸಲಾಗಿದ್ದ ಪರೀಕ್ಷಾ ದಿನಾಂಕಗಳನ್ನು, ಕೊರೊನಾ ಹರಡುವಿಕೆ ಕಾರಣದಿಂದಾಗಿ ಮುಂದೂಡಲಾಗಿದ್ದ ಪರೀಕ್ಷಾ ದಿನಾಂಕಗಳನ್ನು ಪರಿಷ್ಕರಿಸಿ ಪ್ರಸ್ತುತ ಹೊಸ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ.
ಪರೀಕ್ಷಾ ವೇಳಾಪಟ್ಟಿ:
ಪ್ರಥಮ ಹಂತದ ಪರೀಕ್ಷೆಗಳು ಜುಲೈ 17, ಜುಲೈ 18 ಮತ್ತು ಜುಲೈ 20,2020ರ ವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.
ಕೆಪಿಎಸ್‌ಸಿ ಯು ದ್ವಿತೀಯ ಹಂತದ ಪರೀಕ್ಷೆಗಳನ್ನು ದಿನಾಂಕ 21-07-2020 ರಿಂದ 29-07-2020 (ಜುಲೈ 26 ಅನ್ನು ಹೊರತುಪಡಿಸಿ) ರವರೆಗೆ ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು, ಶಿವಮೊಗ್ಗ ಕೇಂದ್ರಗಳಲ್ಲಿ ನಡೆಸಲಿದೆ.
ತೃತೀಯ ಹಂತದ ಪರೀಕ್ಷೆಗಳನ್ನು ದಿನಾಂಕ 03-08-2020 ರಿಂದ 08-08-2020 ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಸಲಿದೆ.
ದ್ವಿತೀಯ ಮತ್ತು ತೃತೀಯ ಹಂತದ ಪರೀಕ್ಷೆಗಳ ವೇಳಾಪಟ್ಟಿಯನ್ನು ಸವಿವರವಾಗಿ ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
For Quick Alerts
For Daily Alerts