ಕೆ ಪಿ ಎಸ್ ಸಿ ಅಬಕಾರಿ ಹುದ್ದೆಗಳ ಪ್ರವೇಶ ಪತ್ರ ಪ್ರಕಟ

Posted By:

ಕರ್ನಾಟಕ ಲೋಕ ಸೇವಾ ಆಯೋಗದ ಅಬಕಾರಿ ಇಲಾಖೆಯಲ್ಲಿನ ಅಬಕಾರಿ ಉಪ ನಿರೀಕ್ಷಕರ ಮತ್ತು ಅಬಕಾರಿ ರಕ್ಷಕರು (ಪುರುಷ ಮತ್ತು ಮಹಿಳೆ) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಸಂಬಂಧ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಹುದ್ದೆ ವಿವರ

 • ಅಬಕಾರಿ ಉಪನಿರೀಕ್ಷಕರು- 177
 • ಅಬಕಾರಿ ರಕ್ಷಕರು(ಪುರುಷ)- 952
 • ಅಬಕಾರಿ ರಕ್ಷಕರು(ಮಹಿಳೆ)- 51

ವೇತನ

 • ಅಬಕಾರಿ ಉಪನಿರೀಕ್ಷಕರು: ₹16,000-29,600
 • ಅಬಕಾರಿ ರಕ್ಷಕರು: ₹11,600-21,000

ಕೆ ಪಿ ಎಸ್ ಸಿ ಪ್ರವೇಶ ಪತ್ರ ಪ್ರಕಟ

ಪ್ರವೇಶ ಪತ್ರ ಪಡೆಯುವ ವಿಧಾನ

 • ಆಯೋಗದ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ kpsc.kar.nic.in
 • Apply Online-Admission Ticket Download ಅಂಕಣದ ಮೇಲೆ ಕ್ಲಿಕ್ ಮಾಡಿ
 • ಅಬಕಾರಿ ಇಲಾಖೆಯಲ್ಲಿನ ಅಬಕಾರಿ ಉಪ ನಿರೀಕ್ಷಕರ ಮತ್ತು ಅಬಕಾರಿ ರಕ್ಷಕರು (ಪುರುಷ) ಮತ್ತು (ಮಹಿಳೆ) ಹುದ್ದೆಗಳ ಮೇಲೆ ಕ್ಲಿಕ್ ಮಾಡಿ
 • ಅರ್ಜಿಯ ನೋಂದಾವಣಿ ಸಂಖ್ಯೆ ನಮೂದಿಸಿ
 • ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ

ನೇಮಕಾತಿ ಪ್ರಕ್ರಿಯೆ

ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅರ್ಹತೆ, ಲಿಖಿತ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಹಾಗೂ ಮೀಸಲಾತಿ ನಿಯಮಗಳ ಅನ್ವಯ ಅರ್ಹರ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷೆ ನಡೆಯುವ ದಿನಾಂಕ

 • ಅಬಕಾರಿ ಉಪನಿರೀಕ್ಷಕರು: ಏಪ್ರಿಲ್‌ 30, 2017
 • ಅಬಕಾರಿ ರಕ್ಷಕರು: ಮೇ 7, 2017
 • ಸಾಮಾನ್ಯ ಅಧ್ಯಯನ, ಸಾಮಾನ್ಯ ಕನ್ನಡ ಅಥವಾ ಇಂಗ್ಲಿಷ್‌ ವಿಷಯಗಳ ಪರೀಕ್ಷೆ ನಡೆಸಲಾಗುತ್ತದೆ.
 • ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಸೂಚನೆ

 • ಅಭ್ಯರ್ಥಿಯು ಐಡಿ ನಂಬರ್ ಪಡೆದು ನಂತರ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಅದರ ಪ್ರಿಂಟ್ ತೆಗೆದುಕೊಳ್ಳತಕ್ಕದ್ದು.
 • ಪ್ರವೇಶ ಪತ್ರದಲ್ಲಿ ನೀಡಿರುವ ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು.
 • ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಹಾಜರುಪಡಿಸದಿದ್ದಲ್ಲಿ ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ.
 •  ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಅಂಚೆ ಮೂಲಕ ಕಳುಹಿಸಿಕೊಡಲಾಗುವುದಿಲ್ಲ.

ಸಹಾಯವಾಣಿ

ಒಂದು ವೇಳೆ ಪ್ರವೇಶ ಪತ್ರ ಡೌನ್ಲೋಡ್ ಆಗದಿದ್ದಲ್ಲಿ ಅಂತಹ ಅಭ್ಯರ್ಥಿಗಳು 
ದೂರವಾಣಿ ಸಂಖ್ಯೆ : 7815930292, 7815930293 , 7815930294 ಸಹಾಯವಾಣಿಯನ್ನು ಸಂಪರ್ಕಿಸಿ ವಿವರಗಳನ್ನು ನೀಡತಕ್ಕದ್ದು ಹಾಗೂ ನಂತರ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು.

ಸೂಚನೆ: ಯಾವುದೇ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಲಾಗುವುದಿಲ್ಲ ಮತ್ತು ಮನವಿಗಳನ್ನು ಪರಿಗಣಿಸುವುದಿಲ್ಲ.

English summary
KPSC RELEASED ADMISSION TICKET FOR THE POSTS OF EXCISE SUB INSPECTOR AND EXCISE GUARDS

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia