ಕೆಪಿಎಸ್ಸಿ: ಅರ್ಜಿ ತಿದ್ದುವ ಅವಕಾಶಕ್ಕೆ ಬ್ರೇಕ್

Posted By:

ಇನ್ನು ಮುಂದೆ ಕೆಪಿಎಸ್ಸಿ ಅರ್ಜಿಗಳನ್ನು ತುಂಬ ಬೇಕಾದರೆ ಸಾಕಷ್ಟು ಎಚ್ಚರವಹಿಸಬೇಕಾಗುತ್ತದೆ. ಏಕೆಂದರೆ ಒಮ್ಮೆ ಅರ್ಜಿ ಸಲ್ಲಿಸಿದ ನಂತರ ದಾಖಲೆ ತಿದ್ದುಪಡಿ ಅವಕಾಶವನ್ನು ಸಂಪೂರ್ಣವಾಗಿ ರದ್ದುಪಡಿಸಲು ಕರ್ನಾಟಕ ಲೋಕಸೇವಾ ಆಯೋಗ ನಿರ್ಧರಿಸಿದೆ.

ಕೆಪಿಎಸ್ಸಿ: ಮುಖ್ಯ ಪರೀಕ್ಷೆ ಅರ್ಜಿ ಸಲ್ಲಿಕೆ ಪ್ರಾರಂಭ

ನೇಮಕ ಹಾಗೂ ಮೀಸಲು ಪ್ರಕ್ರಿಯೆಯಲ್ಲಿ ಅಕ್ರಮ ನಿಯಂತ್ರಿಸುವ ಉದ್ದೇಶದಿಂದ ಆಯೋಗವು ಈ ನಿರ್ಧಾರ ಕೈಗೊಂಡಿದ್ದು, ದಾಖಲೆ ಪರಿಶೀಲನೆ ಅಥವಾ ಅರ್ಜಿ ಸಲ್ಲಿಕೆ ನಂತರದ ಯಾವುದೇ ಕ್ಷಣದಲ್ಲಿ ಬದಲಾಯಿಸಲು ಅವಕಾಶ ಕೊಡದಿರಲು ನಿಯಮ ರೂಪಿಸಲಾಗಿದೆ.

ಅರ್ಜಿ ತಿದ್ದುವ ಅವಕಾಶಕ್ಕೆ ಬ್ರೇಕ್

ಮುಂದಿನ ಅಧಿಸೂಚನೆಗಳಲ್ಲಿ ಈ ಅಂಶಗಳನ್ನು ಅಳವಡಿಸಲು ಕೆಪಿಎಸ್​ಸಿ ನಿರ್ಧರಿಸಿದೆ. ಆದರೆ ಹೆಸರಿನಲ್ಲಾದ ದೋಷಗಳನ್ನು ದಾಖಲೆ ಪರಿಶೀಲನೆ ಅಥವಾ ಇತರ ಸಂದರ್ಭ ಸೂಕ್ತ ದಾಖಲೆ ನೀಡಿ ಸರಿಪಡಿಸಿಕೊಳ್ಳಬಹುದಾಗಿದೆ.

ಕೆಪಿಎಸ್ಸಿ: ಎಸ್ ಡಿ ಎ ಪರೀಕ್ಸೆ ಪ್ರಶ್ನೆ ಪ್ರತ್ರಿಕೆ ಮತ್ತು ಪಠ್ಯಕ್ರಮ

ಅರ್ಜಿ ಸಲ್ಲಿಸುವಾಗಲೇ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಸಮರ್ಪಕವಾದ ಜಾತಿ, ಆದಾಯ ಹಾಗೂ ಇತರೆ ಅಂಶಗಳನ್ನು ನಮೂದಿಸಬೇಕು.

'ಅಭ್ಯರ್ಥಿಗಳು ಎಲ್ಲ ಅಂಶಗಳನ್ನು ಖಾತ್ರಿ ಪಡಿಸಿ ಅರ್ಜಿ ಭರ್ತಿ ಮಾಡಬೇಕು. ಕಣ್ತಪ್ಪಿನ ದೋಷಗಳೆಂದು ಭವಿಷ್ಯದಲ್ಲಿ ಬದಲಾವಣೆಗೆ ಅವಕಾಶ ಕೊಡಲು ಸಾಧ್ಯವಿಲ್ಲ.

ಆಯೋಗದ ನಿರ್ಧಾರಕ್ಕೆ ಕಾರಣ

ಅರ್ಜಿ ಸಲ್ಲಿಸುವಾಗ ಸಾಕಷ್ಟು ಕಾಲಾವಕಾಶವಿದ್ದರೂ ಅಸಡ್ಡೆಯಿಂದ ಅರ್ಜಿ ಭರ್ತಿ ಮಾಡಲಾಗುತ್ತಿತ್ತು. ಅರ್ಹತಾ ಪಟ್ಟಿ ಪ್ರಕಟವಾದ ಬಳಿಕ ಮೀಸಲಾತಿ, ಲಿಂಗ, ಮಾಧ್ಯಮ, ಆದಾಯ ಸೇರಿ ಇತರ ವರ್ಗಗಳನ್ನು ಬದಲಾಯಿಸಲು ಆಯೋಗಕ್ಕೆ ಅಭ್ಯರ್ಥಿಗಳು ದುಂಬಾಲು ಬೀಳುತ್ತಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಅಕ್ರಮವಾಗುವ ಸಾಧ್ಯತೆಯಿತ್ತು. ಅಂತಿಮ ಕ್ಷಣದಲ್ಲಿ ತಮಗೆ ಲಾಭವಾಗುವ ಮೀಸಲು ಪಡೆಯಲು ಜಾತಿ ಬದಲಿಸುವ ಹುನ್ನಾರವೂ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ದಾಖಲಿಸಿರುವ ಅಂಶವೇ ಅಂತಿಮ ಎಂದು ನಿಯಮ ರೂಪಿಸಲಾಗಿದೆ.

ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿಯೂ ಅರ್ಜಿಯಲ್ಲಿ ದಾಖಲಿಸಿದ ಅಂಶ ತಿದ್ದಲು ಅವಕಾಶ ನೀಡುವುದನ್ನು ನಿರ್ಬಂಧಿಸಲಾಗಿತ್ತು.

English summary
The Karnataka Public Service Commission (KPSC) has decided to completely abolish the document corrections once it has been applied.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia