ಕೆಪಿಎಸ್‌ಸಿ: ಇಲಾಖಾ ಪರೀಕ್ಷೆ ಮೌಖಿಕ ಸಂದರ್ಶನ

Posted By:

ಕರ್ನಾಟಕ ಲೋಕಸೇವಾ ಆಯೋಗ, 2017ನೇ ಸಾಲಿನ ಪ್ರಥಮ ಅಧಿವೇಶನ ಇಲಾಖಾ ಪರೀಕ್ಷೆಗಳ, ಕನ್ನಡ ಭಾಷಾ ವಿಷಯದ ಮೌಖಿಕ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗದ ವೆಬ್‍ಸೈಟ್ ನಲ್ಲಿ ಸೋಮವಾರ ಪ್ರಕಟಿಸಿದೆ.

ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನಕ್ಕೆ ಸಂಬಂಧಿಸಿದಂತೆ ಆಯೋಗದ ಕೇಂದ್ರ ಕಚೇರಿ ಮತ್ತು ವಿಭಾಗೀಯ/ಜಿಲ್ಲಾ ಕೇಂದ್ರಗಳಲ್ಲಿ ಸಂದರ್ಶನವನ್ನು ನಡೆಸಲಾಗುವುದು.

ಇಲಾಖಾ ಪರೀಕ್ಷೆ ಮೌಖಿಕ ಸಂದರ್ಶನ

ಸಂದರ್ಶನದ ದಿನಾಂಕ ಮತ್ತು ಕಚೇರಿ ವಿಳಾಸ

ಜುಲೈ 27 : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯ, ಜ್ಞಾನ ಸಂಗ, ಬೆಳಗಾವಿ - 590 018
ಜುಲೈ 27 : ಉಪ ನಿರ್ದೇಶಕರವರ ಕಚೇರಿ, ಡಿ.ಯು.ಡಿ.ಸಿ. ಸಭಾಂಗಣ, ಮಿನಿ ವಿಧಾನಸೌಧ, ಕಲಬರಗಿ - 585 102
ಜುಲೈ 27 : ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಸಾಗರ ರಸ್ತೆ, ಶಿವಮೊಗ್ಗ- 577 201
ಜುಲೈ 27 : ಡಯಟ್, ವಸಂತ ಮಹಲ್ ನಜರ್‍ಬಾದ್, ಮೈಸೂರು - 570 010
ಆಗಸ್ಟ್ 03 : ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು - 560 001

ಮೌಖಿಕ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳ ಸಂದರ್ಶನ ಸೂಚನಾಪತ್ರಗಳನ್ನು ಆಯೋಗದ ವೆಬ್‍ಸೈಟ್‍ನಲ್ಲಿ ಅಳವಡಿಸಲಾಗಿದ್ದು, ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಸಂದರ್ಶನ ಸೂಚನಾ ಪತ್ರಗಳನ್ನು ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ತ್ವರಿತ ಅಂಚೆ ಮೂಲಕವೂ ಸಹ ರವಾನಿಸಲಾಗಿದೆ.

ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಅರ್ಹ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ನೋಂದಣಿ ಸಂಖ್ಯೆಯನ್ನು ನಮೂದಿಸಿ ಸಂದರ್ಶನ ಸೂಚನಾಪತ್ರಗಳನ್ನು ಸಂದರ್ಶನದ ವೇಳೆ ಕಡ್ಡಾಯವಾಗಿ ಹಾಜರುಪಡಿಸಬೇಕು. ಸೂಚನಾ ಪತ್ರಗಳನ್ನು ಹಾಜರುಪಡಿಸದೇ ಇರುವ ಅಭ್ಯರ್ಥಿಗಳೀಗೆ ಮೌಖಿಕ ಸಂದರ್ಶನಕ್ಕೆ ಅವಕಾಶ ನೀಡುವುದಿಲ್ಲ.

ಸೂಚನಾ ಪತ್ರಗಳು ಲಭ್ಯವಾಗದ ಅರ್ಹ ಅಭ್ಯರ್ಥಿಗಳೂ ಜುಲೈ 25ರ ಒಳಗಾಗಿ ಆಯೋಗದ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ 080 - 30574944/30574945 ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

English summary
Karnataka Public Service Commission (KPSC) has released the list of eligible candidates for viva voce. List of selected candidates and interview notices are published on the official website

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia