ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಯು ಜಲಸಂಪನ್ಮೂಲ ಇಲಾಖೆಯಲ್ಲಿನ ಜ್ಯೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ನಡೆಸಿದ್ದ ಲಿಖಿತ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಿದೆ.
ಸೆಪ್ಟೆಂಬರ್ 9 ಮತ್ತು 10ರಂದು 889 ಅಸಿಸ್ಟೆಂಟ್ ಇಂಜಿನಿಯರ್ ಮತ್ತು ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು.
ಕೀ ಉತ್ತರಗಳನ್ನು ಕೆಪಿಎಸ್ಸಿ ಯ ಅಧಿಕೃತ ವೆಬ್ಸೈಟ್ ವಿಳಾಸದಲ್ಲಿ ಪ್ರಕಟಿಸಿದ್ದು, ಕೀ ಉತ್ತರಗಳ ಬಗ್ಗೆ ಯಾವುದಾದರು ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸೆ.20 ರವರೆಗೂ ಕಾಲಾವಕಾಶ ನೀಡಲಾಗಿದೆ.

ಕೀ ಉತ್ತರಗಳನ್ನು ಪಡೆಯುವ ವಿಧಾನ
- ಕೆಪಿಎಸ್ಸಿ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
- ವೆಬ್ ಪುಟದ ಮೇಲ್ಭಾಗದಲ್ಲಿ ಕಾಣುವ ಕೀ ಆನ್ಸರ್ಸ್ ಬಟನ್ ಕ್ಲಿಕ್ ಮಾಡಿ
- ಅಸಿಸ್ಟೆಂಟ್ ಇಂಜಿನಿಯರ್ ಮತ್ತು ಜೂನಿಯರ್ ಇಂಜಿನಿಯರ್ ಪರೀಕ್ಷೆಗಳಿಗೆ ಸಂಬಂಧಿಸಿದ ಕೀ ಉತ್ತರಗಳು ಪ್ರತ್ಯೇಕ ಲಿಂಕ್ ಗಳು ಕಾಣುತ್ತವೆ
- ಅಸಿಸ್ಟೆಂಟ್ ಇಂಜಿನಿಯರ್ ಲಿಂಕ್ ನಲ್ಲಿ ಪರೀಕ್ಷೆಯ ಪೇಪರ್ 1-268, ಪೇಪರ್ 2-269, ಪೇಪರ್ 2-270 ಕೀ ಉತ್ತರಗಳು ಸಿಗುತ್ತವೆ.
- ಜೂನಿಯರ್ ಇಂಜಿನಿಯರ್ ಲಿಂಕ್ ನಲ್ಲಿ ಪರೀಕ್ಷೆಯ ಪೇಪರ್ 1-265, ಪೇಪರ್ 2-266, ಪೇಪರ್ 2-267 ಕೀ ಉತ್ತರಗಳು ಸಿಗುತ್ತವೆ.
ಆಕ್ಷೇಪಣೆ ಸಲ್ಲಿಸಲು ಅವಕಾಶ
ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಯಾರಾದರು ಆಕ್ಷೇಪಣೆ ಸಲ್ಲಿಸಲಿಚ್ಚಿಸಿದಲ್ಲಿ ವೆಬ್ಸೈಟ್ ನಲ್ಲಿ ನೀಡಿರುವ ನಮೂನೆಯನ್ನು ಭರ್ತಿ ಮಾಡಿ ಆಕ್ಷೇಪಣೆಗಳನ್ನು ಸಲ್ಲಿಸುವುದು.
ಆಕ್ಷೇಪಣೆ ಸಲ್ಲಿಸುವ ವಿಧಾನ
ನಿಗದಿಪಡಿಸಿದ ನಮೂನೆಯಲ್ಲಿಯೇ ಆಕ್ಷೇಪಣೆಗಳನ್ನು ದ್ವಿಪ್ರತಿಯಲ್ಲಿ ಪ್ರತಿ ಪತ್ರಿಕೆಗೆ ಪ್ರತ್ಯೇಕವಾಗಿ ಸಲ್ಲಿಸಬೇಕು. ವಿಶ್ವಾಸರ್ಹ ಪೂರಕ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸುವುದು ಹಾಗೂ ಇದರೊಂದಿಗೆ ಪ್ರತಿ ಪ್ರಶ್ನೆಗೆ ರೂ.50/- ರಂತೆ ಶುಲ್ಕವನ್ನು ಐಪಿಒ ಅಥವಾ ಡಿ.ಡಿ ಮೂಲಕ ಕಾರ್ಯದರ್ಶಿಗಳು, ಕರ್ನಾಟಕ ಲೋಕ ಸೇವಾ ಆಯೋಗ. ಇವರ ಹೆಸರಿಗೆ ಸಂದಾಯ ಮಾಡಬೇಕು.
ಅಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ: 20-09-2017
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











