KPTCL: ಸಹನಾ ಶಕ್ತಿ ಪರೀಕ್ಷೆ ಪ್ರವೇಶ ಪತ್ರ ರಿಲೀಸ್

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಎಸ್ಕಾಂಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಹಾಗೂ ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಿವಿಧ ಕೇಂದ್ರಗಳಲ್ಲಿ ಅಕ್ಟೋಬರ್ 21 ರಿಂದ ಅಕ್ಟೋಬರ್ 25,2019ರ ವರೆಗೆ ಸಹನಾ ಶಕ್ತಿ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಪರೀಕ್ಷಾ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೇಮಕಾತಿಯ ಸಹನಾ ಶಕ್ತಿ  ಪ್ರವೇಶ ಪತ್ರ ರಿಲೀಸ್

 

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಒಟ್ಟು 1813 ಹುದ್ದೆಗಳನ್ನು ಭರ್ತಿ ಮಾಡಲು ಏಪ್ರಿಲ್ 4,2019ರೊಳಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಎಸ್‌ಎಸ್‌ಎಲ್‌ಸಿ/10ನೇ ತರಗತಿಯಲ್ಲಿ ಗಳಿಸಿರುವ ಅಂಕಗಳ ಅರ್ಹತೆ ಆಧಾರದ ಮೇಲೆ ಪ್ರಕಟಿಸಿದ ಹುದ್ದೆಗಳ ಅನುಗುಣವಾಗಿ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಹನಾ ಶಕ್ತಿ ಪರೀಕ್ಷೆಗೆ ಪರಿಗಣಿಸಲಾಗಿರುತ್ತದೆ. ಈ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಹೆಸರುಗಳನ್ನು ಹಾಗೂ ಶೇಕಡವಾರು ಕಟ್‌ ಆಫ್‌ ಅಂಕಗಳನ್ನು ಕವಿಪ್ರನಿನಿ ಮತ್ತು ಎಸ್ಕಾಂಗಳ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಕವಿಪ್ರನಿನಿ ಹಾಗೂ ಎಸ್ಕಾಂಗಳ ವೆಬ್‌ಸೈಟ್‌ನಿಂದ ಸಹನಾ ಶಕ್ತಿ ಕರೆ ಪತ್ರಗಳನ್ನು ದಿನಾಂಕ ಅಕ್ಟೋಬರ್ 6,2019ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ. ಪ್ರವೇಶ ಪತ್ರದಲ್ಲಿ ನಿಗಧಿಪಡಿಸಿರುವ ದಿನಾಂಖ ಮತ್ತು ಕೇಂದ್ರದಲ್ಲಿ, ಸಂಬಂಧಪಟ್ಟ ಎಲ್ಲಾ ದಾಖಲಾತಿಗಳ ಮೂಲ ಹಾಗೂ ಝೆರಾಕ್ಸ್ ಪ್ರತಿಗಳೊಂದಿಗೆ ಅಭ್ಯರ್ಥಿಗಳು ಸಹನಾ ಶಕ್ತಿ ಪರೀಕ್ಷೆಗೆ ಹಾಜರಾಗತಕ್ಕದ್ದು.

ಅಭ್ಯರ್ಥಿಗಳು ಸಹನಾ ಶಕ್ತಿ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಈ ಸ್ಟೆಪ್ಸ್ ಫಾಲೋ ಮಾಡಿ :

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಅಧಿಕೃತ ವೆಬ್‌ಸೈಟ್‌ http://www.kptcl.com/ ಗೆ ಭೇಟಿ ನೀಡಿ

ಸ್ಟೆಪ್ 2: ಹೋಂ ಪೇಜ್‌ನಲ್ಲಿ "ಜೂನಿಯರ್ ಪವರ್ ಮ್ಯಾನ್ ಹಾಗೂ ಜೂನಿಯರ್ ಸ್ಟೆಷನ್‌ ಪರಿಚಾರಕ ಹುದ್ದೆಗಳ ನೇಮಕಾತಿಗಾಗಿ ಸಹನಾ ಶಕ್ತಿ ಪರೀಕ್ಷೆ ನಡೆಸುವ ಬಗ್ಗೆ" ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ "click here to download call letter for endurance test" ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4: ಅಭ್ಯರ್ಥಿಗಳು ನಿಮ್ಮ ಅಪ್ಲಿಕೇಶನ್‌ ಐಡಿ ಮತ್ತು ಜನ್ಮ ದಿನಾಂಕ ನೀಡಿ ಸಬ್‌ಮಿಟ್ ಮಾಡಿ

 

ಸ್ಟೆಪ್ 5: ಸ್ಕ್ರೀನ್ ಮೇಲೆ ಪ್ರವೇಶ ಪತ್ರ ಲಭ್ಯವಾಗುವುದು

ಸ್ಟೆಪ್ 6: ಅದನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಅಭ್ಯರ್ಥಿಗಳು ಸಹನಾ ಶಕ್ತಿ ಪರೀಕ್ಷೆಗೆ ಕುರಿತ ಇತರೆ ಸೂಚನೆಗಳನ್ನು ಅಭ್ಯರ್ಥಿ ಪ್ರವೇಶ ಪತ್ರದಲ್ಲಿ ಓದಿಕೊಳ್ಳಲು ಸೂಚಿಸಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೇಮಕಾತಿಯ ಸಹನಾ ಶಕ್ತಿ  ಪ್ರವೇಶ ಪತ್ರ ರಿಲೀಸ್

ಸೂಚನೆ: ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿ ಕೆಲವು ಅಂಕಗಳನ್ನು ತಪ್ಪಾಗಿ ನಮೂದಿಸಿದ್ದಲ್ಲಿ, ಅಂತಹ ಅಭ್ಯರ್ಥಿಯ ಮೂಲ ಅಂಕಪಟ್ಟಿಯನ್ನು ಸಹನಾ ಶಕ್ತಿ ಪರೀಕ್ಷೆಯ ದಿನದಂದು ಪರಿಶೀಲಿಸಿದ ನಂತರ, ಶೇಕಡವಾರು ಅಂಕವು ನಿಗಧಿಪಡಿಸಿದ ಕಟ್‌ ಆಫ್‌ ಅಂಕಗಳಿಗಿಂತ ಹೆಚ್ಚಿದ್ದಲ್ಲಿ ಮಾತ್ರ ಸಹನಾ ಶಕ್ತಿ ಪರೀಕ್ಷೆ ಪರಿಗಣಿಸಲಾಗುತ್ತದೆ. ಒಂದು ವೇಳೆ ಅಭ್ಯರ್ಥಿಯ ಶೇಕಡವಾರು ಅಂಕಗಳು ನಿಗಧಿಪಡಿಸಿದ ಕಟ್‌ ಆಫ್‌ ಅಂಕಗಳಿಗಿಂತ ಕಡಿಮೆ ಇದ್ದಂತಹ ಸಂದರ್ಭದಲ್ಲಿ ಅಂತಹವರನ್ನು ಸಹನಾ ಪರೀಕ್ಷೆಗೆ ಪರಿಗಣಿಸಲಾಗುವುದಿಲ್ಲ.

For Quick Alerts
ALLOW NOTIFICATIONS  
For Daily Alerts

English summary
Karnataka power transmission corportation limited 2019 released endurance test admit card for junior power man posts. Candidates can download now.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X