ಕೆಪಿಟಿಸಿಎಲ್ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

Posted By:

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.

ಎನ್‌ಟಿಪಿಸಿ: ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ ನೇಮಕಾತಿ

ಸಹಾಯಕ ಇಂಜಿನಿಯರ್, ಸಹಾಯಕ ಲೆಕ್ಕಾಧಿಕಾರಿ, ಕಿರಿಯ ಇಂಜಿನಿಯರ್, ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ನೋಡಬಹುದಾಗಿದೆ.
ಐಒಸಿಎಲ್: ಜೂನಿಯರ್‌ ಆಪರೇಟರ್ ಹುದ್ದೆಗಳ ನೇಮಕಾತಿ

ಕೆಪಿಟಿಸಿಎಲ್ ಆಯ್ಕೆಪಟ್ಟಿ

ನೇಮಕಾತಿಗೆ ಸಂಬಂಧಿಸಿದಂತೆ ನಿಗಮವು ಕಳೆದ ಜುಲೈ ತಿಂಗಳಿನಲ್ಲಿ ಆನ್-ಲೈನ್ ಆಪ್ಟಿಟ್ಯೂಡ್ ಪರೀಕ್ಷೆ ನಡೆಸಿತ್ತು, ಈ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಜೇಷ್ಟತೆ (ಮೆರಿಟ್) ಆಧಾರದ ಮೇರೆಗೆ ಹಾಗೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ನಡೆದ ದಾಖಲಾತಿ ಪರಿಶೀಲನೆ ನಂತರ ಕಟ್ ಆಫ್ ಅಂಕಗಳೊಂದಿಗೆ ವೆಬ್ಸೈಟ್ ನಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಮಂಜಸವಾದ ಆಕ್ಷೇಪಣೆಗಳಿದ್ದಲ್ಲಿ 1:2 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಮಾತ್ರ ಸೂಕ್ತ ವಿವರ ಹಾಗೂ ದಾಖಲಾತಿಗಳೊಂದಿಗೆ ತಮ್ಮ ಹೆಸರು ಅರ್ಜಿ ಸಂಖ್ಯೆ ಹಾಗು ಅರ್ಜಿ ಸಲ್ಲಿಸಿದ್ದ ಹುದ್ದೆಯ ಹೆಸರಿನೊಂದಿಗೆ ಆನ್-ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

ಅಂಗವಿಕಲ ಕೋಟಾದಡಿಯಲ್ಲಿ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೊಳಪಡಿಸಿ ಆಯ್ಕೆ ಮಾಡಲಾಗಿದೆ. ಹಲವಾರು ಅಭ್ಯರ್ತಿಗಳು ಬಹು ವಿಧವಾದ ಅಂಗವೈಕಲ್ಯತೆಯನ್ನು ಶೇ.40 ಕ್ಕಿಂತ ಕಡಿಮೆ ಅಂಗವೈಕಲ್ಯತೆಯನ್ನು ಮತ್ತು ಅಂಗವಿಕಲ ಕೋಟಾದಡಿಗೆ ನಿಗಧಿಪಡಿಸಿದ ಅಂಗವೈಕಲ್ಯತೆಯನ್ನು ಹೊರತುಪಡಿಸಿ ಬೇರೆ ಅಂಗವೈಕಲ್ಯತೆಯನ್ನು ಹೊಂದಿರುವುದಕ್ಕಾಗಿ ಅಭ್ಯರ್ಥಿಗಳನ್ನು ಅಂಗವಿಕಲ ಕೋಟಾದಡಿ ಅನರ್ಹಗೊಳಿಸಲಾಗಿದೆ. ಆದಾಗ್ಯೂ ಶೇ.40 ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿರುವ ಅಭ್ಯರ್ಥಿಗಳನ್ನುನ ಸಂಬಂಧಿಸಿದ ಪ್ರವರ್ಗ/ಕೋಟಾದಡಿಯಲ್ಲಿ ಅರ್ಹತೆಗನುಗುಣವಾಗಿ ಪರಿಗಣಿಸಲಾಗಿರುತ್ತದೆ.

1:2 ಅನುಪಾತದಲ್ಲಿ ವಿವಿಧ ಪ್ರವರ್ಗಗಳ ಅಂಗವಿಕಲ ಕೋಟಾದಡಿಯಲ್ಲಿ ಅಭ್ಯರ್ಥಿಗಳ ಕೊರತೆ ಉಂಟಾಗಿದ್ದು, ವಿವರಗಳನ್ನು ವೆಬ್ಸೈಟ್‌ನಲ್ಲಿ ಸೂಚಿಸಲಾಗಿದೆ. ಆದಾಗ್ಯೂ ಮೆರಿಟ್ ಲಿಸ್ಟ್‌ನಲ್ಲಿ ಕೆಳಗಿರುವ ಅರ್ಹ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆ ಹಾಗೂ ದೈಹಿಕ ಪರೀಕ್ಷೆ ದಿನಾಂಕವನ್ನು ನಿಗಮದ ವೆಬ್ಸೈಟ್‌ನಲ್ಲಿ ಲಭ್ಯಪಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
KPTCL published the provisional list of the candidates selected for recruitment to various posts along with cut-off marks /Equi-percentile.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia