ಕೆಪಿಟಿಸಿಎಲ್ ಆಯ್ಕೆಗೊಂಡ ಅಭ್ಯರ್ಥಿಗಳ ಕರೆಪತ್ರ ಪ್ರಕಟ

Posted By:

ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಲೆಕ್ಕಾಧಿಕಾರಿ, ಕಿರಿಯ ಇಂಜಿನಿಯರ್ (ವಿದ್ಯುತ್/ಸಿವಿಲ್), ಸಹಾಯಕ ಮತ್ತು ಕಿರಿಯ ಸಹಾಯಕ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಕರೆಪತ್ರವನ್ನು ಪ್ರಕಟಿಸಲಾಗಿದೆ.

1:2 ಅನುಪಾತದಲ್ಲಿ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ವಿವಿಧ ಹುದ್ದೆಗಳಿಗೆ ವಿಕಲಚೇತನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಮೂಲ ದಾಖಲೆ ಪರಿಶೀಲನೆಗಾಗಿ ಕರೆಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

ಕೆಪಿಟಿಸಿಎಲ್ ಕರೆ ಪತ್ರ ಪ್ರಕಟ

ದಿನಾಂಕ 25-11-2017 ರಿಂದ 28-11-2017 ರವರೆಗೆ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘ, ನಂ.28, ಸಿಲ್ವರ್ ಜ್ಯೂಬಿಲಿ ಬಿಲ್ಡಿಂಗ್, ರೇಸ್ ಕೋರ್ಸ್ ಅಡ್ಡರಸ್ತೆ, ಆನಂದರಾವ್ ವೃತ್ತ, ಬೆಂಗಳೂರು-560009 ಇಲ್ಲಿ ನಿಗದಿಪಡಿಸಲಾಗಿರುತ್ತದೆ.

ಆಯ್ಕೆಯಾಗಿರುವ ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕದೊಂದಿಗೆ ಲಾಗ್ ಆನ್ ಮಾಡುವುದರೊಂದಿಗೆ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಕೆಪಿಟಿಸಿಎಲ್ ಮುಖ್ಯ ವೆಬ್ಸೈಟ್ ಸೇರಿದಂತೆ ಎಸ್ಕಾಂ ಗೆ ಸಂಬಂಧಿಸಿದ ಇತರೆ ವೆಬ್ಸೈಟ್ ಗಳ ಮೂಲಕವು ಕರೆಪತ್ರ ಪಡೆಯಬಹುದಾಗಿದೆ.

ಬೆಸ್ಕಾಂ, ಸೆಸ್ಕಾಂ, ಹೆಸ್ಕಾಂ ಮತ್ತು ಜೆಸ್ಕಾಂ ಗಳಲ್ಲಿ ವಿವಿಧ ಕೋಟಾದಡಿಯಲ್ಲಿ 1:2 ಅನುಪಾತದಲ್ಲಿ ಆಯ್ಕೆಯಾಗಿರುವ (ವಿಕಲಚೇತನ ಅಭ್ಯರ್ಥಿ ಕೋಟಾ ಹೊರತುಪಡಿಸಿ) ಅಭ್ಯರ್ಥಿಗಳು ದಾಖಲಾತಿ ಪರಿಶೀಲನಾ ದಿನಾಂಕವನ್ನು ಸಂಬಂಧಿಸಿದ ಎಸ್ಕಾಂಗಳಿಂದ ಶೀಘ್ರದಲ್ಲಿ ಪ್ರಕಟಿಸಲಾಗುವುದು.

ಅಭ್ಯರ್ಥಿಗಳು ದಾಖಲಾತಿ ಪರಿಶೀಲನಾ ಸಮಯದಲ್ಲಿ ಮೂಲ ದಾಖಲಾತಿಗಳು ಮತ್ತು ಅದರ ಛಾಯಾಪ್ರತಿಗಳನ್ನು ಹಾಜರುಪಡಿಸತಕ್ಕದ್ದು. ಅಭ್ಯರ್ಥಿಗಳಿಗೆ ಇನ್ಯಾವುದೇ ರೀತಿಯಲ್ಲೂ ಕರೆಪತ್ರಗಳನ್ನು ರವಾನಿಸಲಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ಕರೆಪತ್ರದಲ್ಲಿ ನೀಡಲಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Call letter available for download to the post of Asst.Engineer(Ele), Asst Accounts Officer, Junior Engineer (Ele/Civil), Assistant, Junior Assistant in KPTCL and ESCOMS.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia