ಎಸ್ ಎಸ್ ಎಲ್ ಸಿ 2018: ನೋಂದಣಿ ಅವಧಿ ವಿಸ್ತರಣೆ

Posted By:

2018 ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ (10ನೇ ತರಗತಿ) ವಾರ್ಷಿಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ನೋಂದಣಿ, ಶುಲ್ಕ ಪಾವತಿಸುವ ದಿನಾಂಕವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವಿಸ್ತರಿಸಿ ಆದೇಶ ಹೊರಡಿಸಿದೆ.

ಖಾಸಗಿ ಅಭ್ಯರ್ಥಿಗಳು ಜಿಲ್ಲಾ ಉಪ ನಿರ್ದೇಶಕರ ಕಚೇರಿ (ಡಿಡಿಪಿಐ)ಯಲ್ಲಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕವನ್ನು ಅಕ್ಟೋಬರ್ 9, 2017ರವರೆಗೆ ವಿಸ್ತರಿಸಲಾಗಿದೆ

ಎಸ್ ಎಸ್ ಎಲ್ ಸಿ ನೋಂದಣಿ ಅವಧಿ ವಿಸ್ತರಣೆ

ಪ್ರಸಕ್ತ ಸಾಲಿನ ಅಭ್ಯರ್ಥಿಗಳು, ಖಾಸಗಿ ಹಾಗೂ ಪುರಾವರ್ತಿತ ಅಭ್ಯರ್ಥಿಗಳು ಶಾಲೆಗಳಲ್ಲಿ ಪರೀಕ್ಷಾ ಶುಲ್ಕವನ್ನು ಪಾವತಿಸಲು 2017 ಅಕ್ಟೋಬರ್ 10ರವರೆಗೆ ವಿಸ್ತರಿಸಲಾಗಿದೆ.

ಎಸ್ ಎಸ್ ಎಲ್ ಸಿ ನೋಂದಣಿ ಅವಧಿ ವಿಸ್ತರಣೆ

ರೈಲ್ವೆ ಇಲಾಖೆ 19,952 ಹುದ್ದೆಗಳ ನೇಮಕಾತಿ ಸುಳ್ಳು!

ಹಾಗೂ ಪರೀಕ್ಷಾ ಶುಲ್ಕವನ್ನು NEFT ಮೂಲಕ ಬ್ಯಾಂಕಿಗೆ ತುಂಬಲು ಅ ಕ್ಟೋಬರ್ 11, ಮತ್ತು ನಾಮಿನಲ್ ರೋಲ್ ಪ್ರಸ್ತಾವನೆ ಹಾಗೂ ಬ್ಯಾಂಕ್ ಚಲನ್ ನ ಮೂಲ ಪ್ರತಿ ಶಾಲೆಗಳು ಪರೀಕ್ಷಾ ಮಂಡಳಿಗೆ ತಲುಪಿಸಲು ಅಕ್ಟೋಬರ್ 12,2017 ಕೊನೆ ದಿನವಾಗಿದೆ ಎಂದು ರಾಜ್ಯದ ಜಿಲ್ಲಾ ಉಪನಿರ್ಧೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚನೆ ನೀಡಿದೆ

English summary
Karnataka Secondary Exam Board has extended its deadline for the pay the fee of the students who will be taking SSLC-2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia