ಕೆ-ಸೆಟ್ ಪರೀಕ್ಷೆ ಕಟ್ ಆಫ್ ಪರ್ಸೆಂಟೇಜ್ ಲಭ್ಯ

Posted By:

ಮೈಸೂರು ವಿಶ್ವವಿದ್ಯಾನಿಲಯದ ಈ ಬಾರಿಯ ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆ ಕೆ-ಸೆಟ್ ಪರೀಕ್ಷೆಯ ಕಟ್ ಆಫ್ ಶೇಕಡವಾರು ಪ್ರಕಟಗೊಂಡಿದೆ.

ಡಿಸೆಂಬರ್ 2016 ರಲ್ಲಿ ನಡೆಸಿದ್ದ ಅರ್ಹತಾ ಪರೀಕ್ಷೆಯ ಕಟ್ ಆಫ್ ಶೇಕಡವಾರು (ಪರ್ಸೆಂಟೇಜ್) ಅನ್ನು ಕೆ-ಸೆಟ್  ತನ್ನ ಅಧುಕೃತ ವೆಬ್ಸೈಟ್ ವಿಳಾಸದಲ್ಲಿ ಬಿಡುಗಡೆಗೊಳಿಸಿದೆ.

ವಿವಿಧ 39 ವಿಷಯಗಳಿಗೆ ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಸೇರಿ ಒಟ್ಟು ಹನ್ನೊಂದು ನೋಡಲ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 60 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಕೆ-ಸೆಟ್ ಪರೀಕ್ಷೆ

ಕೀ ಆನ್ಸರ್ಸ್

ಕೆ-ಸೆಟ್ ಪರೀಕ್ಷೆಗೆ ಸಂಬಂಧಿಸಿದಂತೆ ಫೆಬ್ರವರು 28 , 2017 ರಂದು ಕೆ-ಸೆಟ್ ಅಧಿಕೃತ ವೆಬ್ಸೈಟ್ ವಿಳಾಸದಲ್ಲಿ ಸಾಮಾನ್ಯ ಮತ್ತು ವಿಷಯವಾರು ಪತ್ರಿಕೆಗಳ ಕೀ ಆನ್ಸರ್ಸ್ ಗಳನ್ನು ಪ್ರಕಟಿಸಲಾಗಿತ್ತು. ಆದರೆ ಕಟ್ ಆಫ್ ಪರ್ಸೆಂಟೇಜ್ ಆಗಲಿ, ಪರೀಕ್ಷಾ ಫಲಿತಾಂಶವನ್ನು ಬಿಡುಗಡೆಗೊಳಿಸಿರಲಿಲ್ಲ.

ಕಟ್ ಆಫ್ ಪರ್ಸೆಂಟೇಜ್

39 ವಿಷಯಗಳಿಗೆ ಸಂಬಂಧಿಸಿದಂತೆ  ಯುಜಿಸಿ ನಿಯಮಾನುವಳಿಯಂತೆ ವಿಷಯವಾರು ಮತ್ತು ಪ್ರವರ್ಗವಾರು ಮೆರಿಟ್ ಪಟ್ಟಿಯನ್ನು ಪಿಡಿಎಫ್ ಮಾದರಿಯಲ್ಲಿ ಪ್ರಕಟಿಸಲಾಗಿದೆ.

ಕಟ್ ಆಫ್ ಪರ್ಸೆಂಟೇಜ್ ವೀಕ್ಷಿಸುವ ವಿಧಾನ

  • ಮೈಸೂರು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ ವಿಳಾಸ www.uni-mysore.ac.in ಅಥವಾ ಕೆ ಸೆಟ್ನ ಅಧಿಕೃತ ವೆಬ್ಸೈಟ್ ವಿಳಾಸ https://kset.uni-mysore.ac.in/ ಕ್ಕೆ ಭೇಟಿ ನೀಡಿ
  • ಬಲಭಾಗದಲ್ಲಿ ಕಾಣುವ "KSET-2016 EXAMINATION CUTOFF % ANNOUNCED " ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಪಿಡಿಎಫ್ ನಮೂನೆಯನ್ನು ಸೇವ್ ಮಾಡಿ ಅಥವಾ ಡೌನ್ಲೋಡ್ ಮಾಡಿಕೊಳ್ಳಿ

ಫಲಿತಾಂಶ

ಅಭ್ಯರ್ಥಿಗಳ ಪ್ರತ್ಯೇಕ ಫಲಿತಾಂಶವನ್ನು ಈ ತಿಂಗಳ ಅಂತ್ಯಕ್ಕೆ ಘೋಷಿಸುವ ಸಾಧ್ಯತೆ ಇದೆ. ಫಲಿತಾಂಶ ಪಡೆಯಲು ನೋಂದಣಿ ಸಂಖ್ಯೆ ಅಗತ್ಯ.

ಕೆ ಸೆಟ್ ಪರೀಕ್ಷೆ

ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ರಾಜ್ಯದ ವಿಶ್ವವಿದ್ಯಾಲಯಗಳಿಂದ ನಡೆಸಲ್ಪಡುವುದು. ಯುಜಿಸಿ ಅಥವಾ ಯುಜಿಸಿ-ಸಿಎಸ್ಐಆರ್ /ಸಿಬಿಎಸ್ಇ ನಡೆಸುವ ಈ ಅರ್ಹತಾ ಪರೀಕ್ಷೆಯ ಹೊರತಾಗಿ, ರಾಜ್ಯ ಮಟ್ಟದಲ್ಲಿ ನೆಟ್ ಪರೀಕ್ಷೆ ಮಾದರಿಯಲ್ಲಿ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯನ್ನು (SET) ನಡೆಸಲೂ ಸಹ ಯುಜಿಸಿ ಅವಕಾಶ ಮಾಡಿಕೊಟ್ಟಿದೆ.

ರಾಷ್ಟ್ರಮಟ್ಟದಲ್ಲಿ ಈ ಪರೀಕ್ಷೆಗಳು ವರ್ಷಕ್ಕೆರಡು ಬಾರಿ ಅತ್ಯಂತ ಸುವ್ಯವಸ್ಥಿತವಾಗಿ ಕ್ರಮ ತಪ್ಪದಂತೆ ನಡೆದುಕೊಂಡು ಬಂದಿವೆ. ವರ್ಷದಿಂದ ವರ್ಷಕ್ಕೆ ಪಾರದರ್ಶಕತೆಯನ್ನು ಹೆಚ್ಚಿಸಿಕೊಳ್ಳುತ್ತ, ಮೌಲ್ಯವರ್ಧಿಸಿಕೊಂಡು ಈ ಪರೀಕ್ಷೆಗಳು ಸಾಗುತ್ತಿವೆ. ಆದರೂ ರಾಷ್ಟ್ರಮಟ್ಟದ ಪರೀಕ್ಷೆಯಾಗಿರುವುದರಿಂದ ಉತ್ತೀರ್ಣತಾ ಪ್ರಮಾಣ ಕಡಿಮೆಯಾಗಿರುತ್ತದೆ. ಹಾಗಾಗಿ ರಾಜ್ಯಗಳಿಗೆ ತಮ್ಮದೇ ಆದ ರಾಜ್ಯಮಟ್ಟದ ಅರ್ಹತಾ ಪರೀಕ್ಷೆಗಳನ್ನು ನಡೆಸಲು ಯುಜಿಸಿ ಅನುವು ಮಾಡಿಕೊಟ್ಟಿದೆ.

2010 ನೇ ಇಸವಿಯಿಂದ ಮೈಸೂರು ವಿಶ್ವವಿದ್ಯಾಲಯವು ಪರೀಕ್ಷೆಯನ್ನು ಆಯೋಜಿಸುತ್ತಿದ್ದು ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳುತ್ತಾರೆ.

ಪರೀಕ್ಷಾ ಕ್ರಮ

ಸಿಬಿಎಸ್ಇ /ಯುಜಿಸಿ ನಡೆಸುವ ನೆಟ್ ಪರೀಕ್ಷೆಗಳಂತೆ ಕೆ-ಸೆಟ್ ಪರೀಕ್ಷೆ ಕೂಡ ಬಹು ಆಯ್ಕೆಯ ಪ್ರಶ್ನಾಪತ್ರಿಕೆಯಾಗಿದ್ದು ಮೂರು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ.
ಪ್ರಶ್ನೆಪತ್ರಿಕೆ-1 : ಸಾಮಾನ್ಯ ಪತ್ರಿಕೆ (100 ಅಂಕಗಳು)
ಪ್ರಶ್ನೆಪತ್ರಿಕೆ-2 : ವಿಷಯ ಪತ್ರಿಕೆ (100 ಅಂಕಗಳು)
ಪ್ರಶ್ನೆಪತ್ರಿಕೆ -3: ವಿಷಯ ಪತ್ರಿಕೆ (150 ಅಂಕಗಳು)

ತೇರ್ಗಡೆ ವಿಧಾನ

ಯುಜಿಸಿ ನಿಯಮಾವಳಿಯಂತೆ ಶೇಕಡವಾರಿನ (ಕಟ್ ಆಫ್ ಪರ್ಸೆಂಟೇಜ್) ಮೂಲಕ ಅಭ್ಯರ್ಥಿಗಳ ಫಲಿತಾಂಶ ಘೋಷಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ kset.uni-mysore.ac.in ಸಂಪರ್ಕಿಸಬಹುದು

English summary
KSET-2016 EXAMINATION CUTOFF PERCENTAGE ANNOUNCED

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia