ಪೊಲೀಸ್ ಇಲಾಖೆ ನೇಮಕಾತಿ: ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಕೀ ಉತ್ತರ ಪ್ರಕಟ

Posted By:

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 227 ಸಬ್ ಇನ್ಸ್ ಪೆಕ್ಟರ್ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಲಾಗಿದ್ದ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.

ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ (ರಾಜ್ಯಗುಪ್ತವಾರ್ತೆ) (ಪುರುಷ ಮತ್ತು ಮಹಿಳಾ) ನೇಮಕಾತಿಗಾಗಿ ಜೂನ್ ತಿಂಗಳಿನಲ್ಲಿ ಅಧಿಸೂಚನೆ ಹೊರಡಿಸಿ ಸೆಪ್ಟೆಂಬರ್ 17 ರಂದು ಲಿಖಿತ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಕೀ ಉತ್ತರ ಪ್ರಕಟ

ಕೀ ಉತ್ತರ ಪಡೆಯುವ ವಿಧಾನ

  • ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ನೇಮಕಾತಿ ವಿಭಾಗದಲ್ಲಿ APPLICATION FOR THE POST OF PSI(CIVIL) & PSI(INT) (MEN & WOMEN) - 2017 ಲಿಂಕ್ ಕ್ಲಿಕ್ ಮಾಡಿ.
  • ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆ ವಿವರ ತೆಗೆದುಕೊಳ್ಳತ್ತದೆ.
  • ಕೀ ಉತ್ತರಗಳ ಬಟನ್ ಕ್ಲಿಕ್ ಮಾಡಿ
  • ನಿಮ್ಮ ಪ್ರಶ್ನೆಪತ್ರಿಕೆ ಸೀರೀಸ್ ಆಯ್ಕೆ ಮಾಡಿ
  • ಕೀ ಉತ್ತರಗಳನ್ನು ಪಡೆಯಿರಿ

ಆಕ್ಷೇಪಣೆ ಸಲ್ಲಿಸಲು ಅವಕಾಶ

ಪ್ರಕಟವಾಗಿರುವ ಕೀ ಉತ್ತರಗಳಲ್ಲಿ ಗೊಂದಲವಿದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಿಗದಿತ ನಮೂನೆಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳು ಉತ್ತರಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳೊಡನೆ ನಿಗದಿತ ದಿನಾಂಕದೊಳಗೆ ಆಕ್ಷೇಪಣೆಗಳನ್ನು ಸಲ್ಲಿಸತಕ್ಕದ್ದು.

ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ: 03-10-2017

ಆಕ್ಷೇಪಣೆ ಸಲ್ಲಿಸುವ ವಿಳಾಸ

ನೇಮಕಾತಿ ಮತ್ತು ತರಬೇತಿ ಹಾಗೂ ಅಧ್ಯಕ್ಷರು,
ಪೊಲೀಸ್ ಸಬ್ ಇನ್ಸ್ಪಕ್ಟರ್ (ಸಿವಿಲ್ ಮತ್ತು ರಾಜ್ಯಗುಪ್ತವಾರ್ತೆ) ನೇಮಕಾತಿ ಸಮಿತಿ
ಕಾರ್ಲಟನ್ ಭವನ, ಅರಮನೆ ರಸ್ತೆ,
ಬೆಂಗಳೂರು-560001

English summary
KSP POLICE SUB-INSPECTOR(CIVIL)(MEN & WOMEN) & POLICE SUB-INPECTOR (INTELLEGENCE) (MEN & WOMEN) - 2017. written exam key answers released.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia