2017 -18ನೇ ಸಾಲಿಗಾಗಿ ಲಲಿತ ಕಲಾ ಅಕಾಡೆಮಿ ಶಿಷ್ಯವೇತನ

Posted By:

ದೃಶ್ಯ ಕಲಾ ಕ್ಷೇತ್ರದಲ್ಲಿ 2017 -18 ನೇ ಸಾಲಿಗಾಗಿ ಲಲಿತ ಕಲಾ ಅಕಾಡೆಮಿ ಶಿಷ್ಯವೇತನ ಮಂಜೂರಿ ಮಾಡಲು ಕಲಾವಿದರು, ಕಲಾ ವಿಮರ್ಶಕರು ಮತ್ತು ಕಲಾ ಇತಿಹಾಸಕಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಲಲಿತ ಕಲಾ ಅಕಾಡೆಮಿ  ಶಿಷ್ಯವೇತನ

 
ಯುವ ಕಲಾವಿದರುಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷವು ಲಲಿತ ಕಲಾ ಅಕಾಡೆಮಿ ಶಿಷ್ಯವೇತನ ನೀಡಲಾಗುತ್ತಿದೆ. ಯುವಕರಿಗೆ ತಮ್ಮದೇ ಆದ ಕಲಾ ವೇದಿಕೆ ಸೃಷ್ಟಿ ಮಾಡಿಕೊಳ್ಳಲು ಮತ್ತು ಕಲಾ ಕ್ಷೇತ್ರದಲ್ಲಿ ಹೆಚ್ಚಿನದನ್ನು ಸಾಧಿಸಲು ಸಹಕಾರಿಯಾಗುವಂತೆ ಶಿಷ್ಯವೇತನ ನೀಡಲಾಗುತ್ತಿದೆ.

ಶಿಷ್ಯವೇತನದ ವಿವರ

ಅಭ್ಯರ್ಥಿಗಳು 1 ನೇ ಜನವರಿ, 2017 ರಂದು 35 ವರ್ಷ ವಯಸ್ಸಿನೊಳಗಿರಬೇಕು. 12 ತಿಂಗಳ ಅವಧಿಗಾಗಿ ಪ್ರತಿ ತಿಂಗಳು ರೂ.10 ,000 /- ಶಿಷ್ಯವೇತನ ನೀಡಲಾಗುವುದು.ವರ್ಷಕ್ಕೆ ಗರಿಷ್ಟ 40 ಮಂದಿಗೆ ಶಿಷ್ಯವೇತನ ನೀಡುತ್ತಿದ್ದು, ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಹನ್ನೆರಡು ತಿಂಗಳಿನ (ಒಂದು ವರ್ಷ) ವರೆಗೆ ವೇತನ ನೀಡಲಾಗುವುದು.
ಶಿಷ್ಯವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಕೆಳಕಂಡ ಯಾವುದಾದರೂ ಕೇಂದ್ರಗಳಲ್ಲಿ ಮಾತ್ರ ಕಾಯನಿರ್ವಹಿಸತಕ್ಕದ್ದು.
1 . ಲಲಿತ ಕಲಾ ಅಕಾಡೆಮಿ, ರವೀಂದ್ರ ಭವನ , 35 , ಫಿರೋಜ್ ಶಾಹ್ ರೋಡ್, ನವದೆಹಲಿ-110001
2 . ಲಲಿತ ಕಲಾ ಅಕಾಡೆಮಿ, ಪ್ರಾದೇಶಿಕ ಕೇಂದ್ರ, 3 /4 , ಖಾರವೇಲ ನಗರ, ಭುವನೇಶ್ವರ-751001
3 . ಲಲಿತ ಕಲಾ ಅಕಾಡೆಮಿ, ಪ್ರಾದೇಶಿಕ ಕೇಂದ್ರ, 361 , ಕಿಯಾತಲಾ ಲೇನ್, ಕೊಲ್ಕತ್ತಾ-700029
4 . ಲಲಿತ ಕಲಾ ಅಕಾಡೆಮಿ, ಪ್ರಾದೇಶಿಕ ಕೇಂದ್ರ, 4 , ಗ್ರೀಮ್ಸ್ ರೋಡ್, ಚೆನ್ನೈ-600006
5 . ಲಲಿತ ಕಲಾ ಅಕಾಡೆಮಿ, ಪ್ರಾದೇಶಿಕ ಕೇಂದ್ರ, 1 , ಏಕತಾ ವಿಹಾರ, ಅಲಿಗಂಜ್,ಲಕ್ನೋ -226024
6 .ಲಲಿತ ಕಲಾ ಅಕಾಡೆಮಿ, ಪ್ರಾದೇಶಿಕ ಕೇಂದ್ರ, ಷಂಕರದೇವ ಕಲಾಕ್ಷೇತ್ರ, ಗುವಾಹಟಿ.

ಅರ್ಜಿ ಫಾರಂ ಗಳನ್ನೂ ಮೇಲೆ ತಿಳಿಸಿರುವ ಕೇಂದ್ರಗಳಲ್ಲಿ ನೇರವಾಗಿ ಪಡೆಯಬಹುದು ಅಥವಾ ಅಕಾಡೆಮಿ ವೆಬ್ಸೈಟ್ www.lalitkala.gov.in ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.  ಭರ್ತಿ ಮಾಡಿದ ಅರ್ಜಿಗಳನ್ನು ಒಂದು ತಿಂಗಳಿನೊಳಗೆ ಲಲಿತ ಕಲಾ ಅಕಾಡೆಮಿ ಕಾರ್ಯಾಲಯಕ್ಕೆ ತಲುಪುವಂತೆ ಕಳಿಸಬೇಕು.


ಹೆಚ್ಚಿನ ಮಾಹಿತಿಗಾಗಿ ಲಲಿತ ಕಲಾ ಅಕಾಡೆಮಿ ಜಾಲತಾಣದ ರಿಸರ್ಚ್ ಮತ್ತು ಸ್ಕಾಲರ್ಷಿಪ್ ಸೆಕ್ಷನ್, ಫೋನ್ ನಂ. 011 -23009232 , 23009235 ಮೂಲಕ ಪಡೆಯಬಹುದು.


ಸೂಚನೆ

ಆಯ್ಕೆಯಾದ ಅಭ್ಯರ್ಥಿಗಳ ಕಾರ್ಯರೂಪ ಮತ್ತು ಕಾರ್ಯನಿರ್ವಹಿಸುವ ಸ್ಥಳವನ್ನು ಅಕ್ಯಾಡೆಮಿಯೇ ನಿರ್ಧರಿಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಒಂದು ತಿಂಗಳಿಗೆ ಕನಿಷ್ಠ ಎರಡು ಕೃತಿಗಳ ಛಾಯಾಚಿತ್ರವನ್ನು ಕೇಂದ್ರದ ಮುಖ್ಯಸ್ಥರಿಂದ ಪ್ರಮಾಣೀಕರಿಸಿ ಸಲ್ಲಿಸಬೇಕು. ಕೃತಿಗಳ ಹಕ್ಕನ್ನು ಅಕಾಡೆಮಿ ಹೊಂದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಲಲಿತಕಲಾ ಅಕಾಡೆಮಿಯ ವೆಬ್ಸೈಟ್ ವಿಳಾಸ www.lalitkala.gov.in ಕ್ಲಿಕ್ ಮಾಡಿ.

English summary
The Lalit Kala Akademi awards scholarship to young and budding artists for the academic year 2017-18

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia