ಉಪನ್ಯಾಸಕರ ಮೊಬೈಲ್ ಬಳಕೆ ಮತ್ತು ಚೂಡಿದಾರ್ ಗೆ ನಿಷೇಧ ಏರಿದ ಶಿಕ್ಷಣ ಇಲಾಖೆ

Posted By:

ಕಾಲೇಜು ತರಗತಿಗಳಲ್ಲಿ ಉಪನ್ಯಾಸಕರು ಮೊಬೈಲ್‌ ಬಳಸಬಾರದು ಹಾಗೂ ಮಹಿಳಾ ಉಪನ್ಯಾಸಕರು ಸೀರೆ ಧರಿಸಿ ಬರುವಂತೆ ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಪದವಿ ಕಾಲೇಜುಗಳ ಉಪನ್ಯಾಸಕರ ವಿರುದ್ಧ ಸಲ್ಲಿಸಲಾಗಿರುವ ದೂರಿನ ಮೇಲೆ ಕಾಲೇಜು ಶಿಕ್ಷಣ ಇಲಾಖೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಉಪನ್ಯಾಸಕರ ಮೊಬೈಲ್ ಬಳಕೆ ಮತ್ತು ಚೂಡಿದಾರ್ ಗೆ ನಿಷೇಧ

ಇಲಾಖೆಗೆ ದೂರು

'ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರು ತರಗತಿಗಳಲ್ಲಿ ಪಾಠ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಾರೆ, ವಾಟ್ಸ್‌ ಆ್ಯಪ್‌ ಮತ್ತು ಫೇಸ್‌ಬುಕ್‌ ನೋಡಿ ಕಾಲ ಕಳೆಯುತ್ತಾರೆ. ಮಹಿಳಾ ಉಪನ್ಯಾಸಕರು ಚೂಡಿದಾರ್‌ ಧರಿಸಿ ಕಾಲೇಜಿಗೆ ಬರುತ್ತಾರೆ' ಎಂದು ಉನ್ನತ ಶಿಕ್ಷಣ ಸಚಿವರಲ್ಲಿ ದೂರು ಸಲ್ಲಿಕೆಯಾಗಿತ್ತು .

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಾದ ಉಪನ್ಯಾಸಕರುಗಳು ಈ ರೀತಿ ತರಗತಿಗಳಲ್ಲಿ ನಡೆದುಕೊಂಡರೆ ಇನ್ನು ವಿದ್ಯಾರ್ಥಿಗಳಿಗೆ ಯಾವ ರೀತಿ ಮಾರ್ಗದರ್ಶಕರಾಗುತ್ತಾರೆ ಎಂದು ದೂರಿನಲ್ಲಿ ಆಪಾದನೆ ಮಾಡಲಾಗಿತ್ತು.

ಎಲ್ಲಾ ಕಾಲೇಜುಗಳಿಗೂ ಸುತ್ತೋಲೆ

ಕಾಲೇಜು ಆವರಣದಲ್ಲಿ ಮೊಬೈಲ್‌ ಬಳಸುವುದನ್ನು ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಇದೀಗ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಮೈಸೂರು ಇಲ್ಲಿಂದ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಸುತ್ತೋಲೆ ಮೂಲಕ ಸೂಚನೆ ನೀಡಲಾಗಿದೆ.

ಕಾಲೇಜುಗಳಲ್ಲಿ ಉಪನ್ಯಾಸಕರು ತರಗತಿಗಳಲ್ಲಿ ಮೊಬೈಲ್‌ ಬಳಸುವುದನ್ನು ತಡೆಯುವುದು ಹಾಗೂ ಮಹಿಳಾ ಉಪನ್ಯಾಸಕರು ಸೀರೆ ಧರಿಸಿ ಕಾಲೇಜಿಗೆ ಬರುವಂತೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡುವಂತೆಯೂ ತಿಳಿಸಿದೆ.

English summary
Department of collegiate education of Mysore has sent circular to all colleges about lecturers not to use mobile phones during class hours and lady lecturers not to come in chudidhar.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia