ಭಾರತೀಯ ಜೀವ ವಿಮಾ ನಿಗಮವು ಸಹಾಯಕ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಯ ಸಂದರ್ಶನ ಫಲಿತಾಂಶವನ್ನು ಪ್ರಕಟ ಮಾಡಿದೆ. ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳು ಇದೀಗ ಫಲಿತಾಂಶವನ್ನು ವೀಕ್ಷಿಸಬಹುದು.
ಎಲ್‌ಐಸಿ ಒಟ್ಟು 590 ಸಹಾಯಕ ಆಡಳಿತಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮಾರ್ಚ್ 22,2019ರೊಳಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪ್ರಿಲಿಮಿನರಿ,ಪ್ರಮುಖ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡುವುದಾಗಿ ತಿಳಿಸಿತ್ತು. ಅದರಂತೆಯೇ ಇದೀಗ ಸಂದರ್ಶನದ ಫಲಿತಾಂಶವನ್ನು ಪ್ರಕಟ ಮಾಡಿರುತ್ತದೆ. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.
ಅಭ್ಯರ್ಥಿಗಳು ಸಂದರ್ಶನ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ ? :
ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಭಾರತೀಯ ಜೀವ ವಿಮಾ ನಿಗಮದ ಅಧಿಕೃತ ವೆಬ್‌ಸೈಟ್ https://www.licindia.in/Bottom-Links/careers ಗೆ ಭೇಟಿ ನೀಡಿ.
ಸ್ಟೆಪ್ 2 : ಅಭ್ಯರ್ಥಿಗಳು "Recruitment Of Assistant Administrative Officer 2019" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3 : ನಂತರ "Result of short -listed candidates for pre-recruitment medical examination" ಕೆಳಗೆ ನೀಡಲಾಗಿರುವ ಆಯ್ಕೆಗಳನ್ನು ಸೆಲೆಕ್ಟ್ ಮಾಡಿಕೊಂಡು ನಿಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.