ಹೆಚ್ಚು ಕೆಲಸ ಮಾಡಿದಕ್ಕೆ ನೌಕರಿಯೇ ಹೋಯ್ತು!

ಓ ಟಿ ಮಾಡಿದಕ್ಕೆ ಕೆಲಸದಿಂದ ತೆಗೆದು ಹಾಕಿದ ಕಂಪನಿ, ಹೆಚ್ಚು ದುಡಿಯುವುದು ಕೂಡ ನಿಯಮ ಉಲ್ಲಂಘನೆ. ಇದೊಂದು ವಿಚಿತ್ರ ಪ್ರಕರಣ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಬಹುತೇಕ ಕಂಪನಿಗಳು ನೌಕರರು ಹೆಚ್ಚು ದುಡಿಯಲಿ, ಸಂಸ್ಥೆಗಾಗಿ ಹೆಚ್ಚು ಸಮಯ ಮೀಸಲಿಡಲಿ ಎಂದು ಬಯಸುತ್ತವೆ ಆದರೆ ಇಲ್ಲೊಂದು ಸಂಸ್ಥೆ ಹೆಚ್ಚು ದುಡಿಯುವ ನೌಕರನನ್ನು ಕೆಲಸದಿಂದ ತೆಗೆದು ಹಾಕಿದೆ.

ಓ ಟಿ ಮಾಡಿದಕ್ಕೆ ಕೆಲಸ ಕಟ್

 

ನಿಗದಿತ ಅವಧಿಗಿಂತ ಹೆಚ್ಚು ದುಡಿದರೆ ಕಂಪನಿಯ ಕೃಪೆಗೆ ಪಾತ್ರರಾಗಿ ಹೆಚ್ಚು ಹಣ ಅಥವಾ ಉತ್ತಮ ಕೆಲಸಗಾರ ಎನ್ನುವ ಪ್ರಶಂಸೆ ಪಡೆಯುವುದು ಸಹಜ. ಆದರೆ ಜೆರ್ಮನಿಯ ಲಿಡ್ಲ್ ಸಂಸ್ಥೆ ಹೆಚ್ಚು ಕೆಲಸ ಮಾಡಿದಕ್ಕಾಗಿ ನೌಕರನನ್ನೇ ತೆಗೆದು ಹಾಕಿದೆ.

ಲಿಡ್ಲ್ ಸಂಸ್ಥೆಯ ಜೀನ್ ಪಿ ಎಂಬ ಕೆಲಸಗಾರ ಹೆಚ್ಚು ಕೆಲಸ ಮಾಡಿ ಸಂಸ್ಥೆಯ ನಿಯಮ ಉಲ್ಲಂಘಿಸಿದ್ದಾನೆ ಎಂದು ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಇದರಿಂದ ನೊಂದ ಜೀನ್ಸ್ ತನ್ನನ್ನು ಕೆಲಸದಿಂದ ತೆಗೆದ ಮಾಲೀಕನ ವಿರುದ್ಧ ಮೊಕದ್ದಮೆ ಹೂಡಿದ್ದಾನೆ.

ಲಿಡ್ಲ ಎಂಬ ಸೂಪರ್ ಮಾರುಕಟ್ಟೆಯ ಉದ್ಯೋಗಿಯಾದ ಜೀನ್ ಪಿ ಕಳೆದ 12 ವರ್ಷಗಳಿಂದ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಳಗ್ಗೆ 5 ಗಂಟೆಗೆ ಕೆಲಸಕ್ಕೆ ಬಂದು ಸಹೋದ್ಯೋಗಿಗಳು ಬರುವುದಕ್ಕೂ ಮುನ್ನವೇ ಅಂದಿನ ವಸ್ತುಗಳನ್ನೆಲ್ಲಾ ಸರಿಯಾಗಿ ಜೋಡಿಸಿಡುತ್ತಿದ್ದನಂತೆ.

ಜೀನ್ ಶ್ರದ್ದೆ ಮತ್ತು ಕಾರ್ಯವೈಖರಿ ಗಮನಿಸಿದವರು ಈ ವರ್ಷದ ಅತ್ಯುತ್ತಮ ಉದ್ಯೋಗಿ ಪ್ರಶಸ್ತಿ ಇವನಿಗೇ ಬರುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಗಿದ್ದೆ ಬೇರೆ. ಸಂಸ್ಥೆಯ ನಿಯಮ ಉಲ್ಲಂಘಿಸಿದ್ದಾನೆ ಎಂದು ಈತನನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಸಂಸ್ಥೆಯ ಈ ಕ್ರಮದಿಂದ ಅಚ್ಚರಿಗೊಂಡ ಜೀನ್ಸ್ ಅದರ ವಿರುದ್ಧ ಮೊಕದ್ದಮೆ ಹೂಡಿದ್ದಾನೆ. ಜೀನ್ 12 ವರ್ಷಗಳಿಂದ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಅವನಿಗೆ ಒಂದು ದಿನವೂ ಬೇಗ ಬರುವಂತೆ ಅಧಿಕಾರಿಗಳು ಸೂಚಿಸಿಲ್ಲ. ಮಾರಾಟ ಹಾಗೂ ಕಾರ್ಯಕ್ಷಮತೆಗೆ ಗುರಿ ನೀಡಲಾಗಿತ್ತು. ಅದಕ್ಕಾಗಿ ಜೀನ್ ಕೆಲಸಕ್ಕೆ ಬೇಗ ಬರುತ್ತಿದ್ದ ಎಂದು ಜೀನ್ ಪರ ವಕೀಲ ವಾದ ಮಂಡಿಸಿದ್ದಾರೆ.

ತನಿಖೆ ಶುರುವಾಗಿದ್ದು, ಲಿಡ್ಲ್ ಕಂಪನಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಲಾಗಿದೆ. ಜೀನ್ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬರುತ್ತಿದ್ದದ್ದು ತಿಳಿದುಬಂದಿದ್ದು , ತೀರ್ಪನ್ನು ಕಾಯ್ದಿರಿಸಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Jean p was dismissed for breaching Lidl’s rules on unpaid overtime, and for being in the store alone – a further breach of company rules.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X