LKG, UKG And Anganawadi Offline Classes : ಎಲ್‌ಕೆಜಿ, ಯುಕೆಜಿ ಮತ್ತು ಅಂನವಾಡಿ ಭೌತಿಕ ತರಗತಿಗಳು ಇಂದಿನಿಂದ ಆರಂಭ

ರಾಜ್ಯದಲ್ಲಿ ಕೋವಿಡ್ ಬಂದಾಗಿನಿಂದ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಕಾಲ ಕ್ರಮೇಣ ಕೋವಿಡ್ ಪಾಸಿಟಿವ್ ದರವು ಕಡಿಮೆಯಾಗುತ್ತಾ ಹೋದಂತೆ ಸರ್ಕಾರವು ಹಂತ ಹಂತವಾಗಿ ಶಾಲಾ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಿತು. ಅದರ ಅನ್ವಯ ಇದೀಗ ಎಲ್‌ಕೆಜಿ, ಯುಕೆಜಿ ಮತ್ತು ಅಂಗನವಾಡಿ ಭೌತಿಕ ತರಗತಿಗಳು ಪುನರಾರಂಭಗೊಳ್ಳಲಿವೆ.

ಎಲ್‌ಕೆಜಿ, ಯುಕೆಜಿ ಮತ್ತು ಅಂಗನವಾಡಿ ಆಫ್‌ಲೈನ್ ತರಗತಿಗಳು ಇಂದಿನಿಂದ ಆರಂಭ

ಕರ್ನಾಟಕ ಸರ್ಕಾರವು ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಕೋವಿಡ್ ಸೋಂಕಿನ ಪ್ರಮಾಣವು ಶೆ.2ಕ್ಕಿಂತ ಕಡಿಮೆ ಇರುವ ಜಿಲ್ಲೆ, ತಾಲ್ಲೂಕು ವಲಯಗಳಲ್ಲಿ ಆ.23 ರಿಂದ 9ನೇ ತರಗತಿ, 10ನೇ ತರಗತಿ ಹಾಗೂ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಯಿತು. ಮೊದಲ ಹಂತದ ಶಾಲಾ ಆರಂಭ ಯಶಸ್ವಿಯಾದ ಬಳಿಕ ಸೆ.6ರಂದು 6 ರಿಂದ 8ನೇ ತರಗತಿಗಳ ಎರಡನೇ ಹಂತದ ಶಾಲೆಗಳನ್ನು ಆರಂಭಿಸಲಾಯಿತು. ತದನಂತರ ಅ.4 ರಂದು 6 ರಿಂದ 10ನೇ ತರಗತಿಗಳನ್ನು ಪೂರ್ಣ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಯಿತು.

ಎಲ್ಲೆಡೆ 1 ರಿಂದ 5ನೇ ತರಗತಿಗಳ ಶಾಲೆ ಆರಂಭ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರವಾಗಿ ಅ.25ರಿಂದ 1 ರಿಂದ 5ನೇ ತರಗತಿಗಳಿಗೆ ಅರ್ಧ ದಿನದ ಭೌತಿಕ ತರಗತಿಗಳಿಗೆ ಅನುಮತಿಸಲಾಯಿತು. ನ.2 ರಿಂದ 1 ರಿಂದ 5ನೇ ತರಗತಿಗಳಿಗೆ ಪೂರ್ಣ ಅವಧಿಗೆ ಭೌತಿಕ ತರಗತಿಗಳನ್ನು ನಡೆಸಲು ನಿರ್ಧರಿಸಲಾಯಿತು.

ಎಲ್‌ಕೆಜಿ, ಯುಕೆಜಿ ಮತ್ತು ಅಂಗನವಾಡಿ ಭೌತಿಕ ತರಗತಿಗಳು ಯಾವಾಗಿನಿಂದ ಪ್ರಾರಂಭವಾಗಲಿವೆ ಎಂಬದುಕ್ಕೆ ಸರ್ಕಾರ ನವೆಂಬರ್ 8 ರಿಂದ ಎಂದು ತಿಳಿಸಿದೆ. ಅದರಂತೆ ಇಂದಿನಿಂದ ಕೋವಿಡ್ ಸೋಂಕು ಪ್ರಮಾಣವು ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿನ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿನ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಮತ್ತು ಅಂಗನವಾಡಿಗಳನ್ನು ತೆರೆಯಲು ನಿರ್ದೇಶಿಸಲಾಗಿದೆ.

ಎಲ್‌ಕೆಜಿ, ಯುಕೆಜಿ ಮತ್ತು ಅಂಗನವಾಡಿ ಭೌತಿಕ ತರಗತಿಗಳ ಆರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿರುವ ಮಾರ್ಗಸೂಚಿಗಳು ಇಲ್ಲಿವೆ :

ಇಂದಿನಿದಂದ ಎಲ್‌ಕೆಜಿ, ಯುಕೆಜಿ ಮತ್ತು ಅಂಗನವಾಡಿ ಭೌತಿಕ ತರಗತಿಗಳು ಆರಂಭವವಾಗುತ್ತಿದ್ದು, ಶಾಲೆಗೆ ಆರಂಭವಾಗುವ ವಿದ್ಯಾರ್ಥಿಗಳಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ.

ಎಲ್‌ಕೆಜಿ, ಯುಕೆಜಿ ಮತ್ತು ಅಂಗನವಾಡಿ ಭೌತಿಕ ತರಗತಿಗಳು ಅರ್ಧ ದಿನ ಮಾತ್ರ ನಡೆಯಲಿವೆ

ಎಲ್‌ಕೆಜಿ, ಯುಕೆಜಿ ಮತ್ತು ಅಂಗನವಾಡಿ ಭೌತಿಕ ತರಗತಿಗಳು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ನಡೆಯಲಿದ್ದು, ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 3:30ರ ವರೆಗೆ ತರಗತಿಗಳು ನಡೆಯಲಿವೆ.

ಶಾಲೆಗಳಲ್ಲಿ ಪ್ರತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವುದು ಕಡ್ಡಾಯ.

ವಿದ್ಯಾರ್ಥಿಗಳ ಪೋಷಕರಿಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿ ಆಗಿರಬೇಕು.

ಕೊವಿಡ್ ಲಕ್ಷಣ ಇರುವ ಮಕ್ಕಳಿಗೆ ತರಗತಿಗಳಿಗೆ ಪ್ರವೇಶ ಇಲ್ಲ ಎಂದೂ ತಿಳಿಸಲಾಗಿದೆ.

ಶಿಕ್ಷಕರು ಮತ್ತು ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯ​ವಾಗಿದೆ.

ಶಿಕ್ಷಕರು ಕೂಡ 2 ಡೋಸ್​ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ.

50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಫೇಸ್​​ಶೀಲ್ಡ್​​​ ಕಡ್ಡಾಯವಾಗಿದೆ.

ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮತ್ತು ಸಹಾಯಕಿಯರು ಎರಡು ಡೋಸ್‌ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು.

ಅಂಗನವಾಡಿ ಕೇಂದ್ರದಲ್ಲಿನ ಪೀಠೋಪಕರಣ, ಮಕ್ಕಳು ಕುಳಿತುಕೊಳ್ಳಲು ಉಪಯೋಗಿಸಿದ ಜಮಖಾನ, ಡೆಸ್ಕ್‌, ಕುರ್ಚಿಗಳು ಅಂಗನವಾಡಿ ಪ್ರಾರಂಭಕ್ಕೂ ಮೊದಲೇ ಶುಚಿಗೊಳಿಸಿರಬೇಕು. ಅಂಗನವಾಡಿ ಕೇಂದ್ರದ ಕಿಟಕಿ ಬಾಗಿಲುಗಳನ್ನು ತೆರೆದಿಡಬೇಕು.

ಶೌಚಾಲಯ, ಶಿಶುವಿಹಾರಗಳ ಮತ್ತು ಆಟದ ಮನೆಯ ನೆಲ, ಗೋಡೆ, ಕಿಟಕಿ, ಬಾಗಿಲು ಮುಂತಾದವುಗಳನ್ನು ಸೋಪಿನ ದ್ರಾವಣದಲ್ಲಿ ಸ್ವಚ್ಛಗೊಳಿಸಬೇಕು.

For Quick Alerts
ALLOW NOTIFICATIONS  
For Daily Alerts

English summary
karnataka lkg, ukg and anganawadi offline classes restarts from today. Here is the guidelines in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X