ವಿಜ್ಞಾನದ ವಿದ್ಯಾರ್ಥಿನಿಯರಿಗಾಗಿ ಎಲ್ ಓರಿಯಲ್ ಸ್ಕಾಲರ್ಷಿಪ್ 2017

ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಎಂಬ ಯೋಜನೆಯಡಿ ಸ್ಕಾಲರ್ಷಿಪ್ ನೀಡಲಾಗುತ್ತಿದ್ದು ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿನಿಯರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಎಲ್ ಓರಿಯಲ್ ವತಿಯಿಂದ 19ವರ್ಷದೊಳಗಿನ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರಿಗಾಗಿ ಸ್ಕಾಲರ್ಷಿಪ್ ನೀಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಎಲ್ ಓರಿಯಲ್ ಇಂಡಿಯಾ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಎಂಬ ಯೋಜನೆಯಡಿ ಸ್ಕಾಲರ್ಷಿಪ್ ನೀಡಲಾಗುತ್ತಿದ್ದು ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿನಿಯರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಎಲ್ ಓರಿಯಲ್ ಸ್ಕಾಲರ್ಷಿಪ್ ಯೋಜನೆ ಮಹಿಳೆಯರ ಶಿಕ್ಷಣಕ್ಕೆ ಉತ್ತೇಜನ ನೀಡುವ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳಬೇಕು ಎನ್ನುವುದೇ ಇದರ ಆಶಯವಾಗಿದೆ. 2003 ನೇ ಇಸವಿಯಿಂದ ಈ ಯೋಜನೆ ಜಾರಿಯಲ್ಲಿದ್ದು,ಇದುವರೆಗೂ 300 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರಯೋಜನ ಪಡೆದಿದ್ದಾರೆ.

ಎಲ್ ಓರಿಯಲ್ ಸ್ಕಾಲರ್ಷಿಪ್ 2017

ಎಲ್ ಓರಿಯಲ್ ಸ್ಕಾಲರ್ಷಿಪ್ ಯಾರಿಗಾಗಿ ?

2017 ಸಾಲಿನ ದ್ವಿತೀಯ ಪಿಯುಸಿ ಯ ವಿಜ್ಞಾನ ವಿಷಯದಲ್ಲಿ (ಪಿಸಿಎಂ,ಪಿಸಿಬಿ,ಪಿಸಿಎಂಬಿ) ಶೇ.85 ರಷ್ಟು ಪಡೆದಿರುವ ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ಆದಾಯ 4 ಲಕ್ಷ ರೂ. ಗಳಿಗಿಂತ ಮೀರಿರಬಾರದು.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಗಳನ್ನು ಎಲ್ ಓರಿಯಲ್ ಸ್ಕಾಲರ್ಷಿಪ್ ಫಾರ್ ಯಂಗ್ ವುಮೆನ್ ವೆಬ್ಸೈಟ್ ನಲ್ಲಿ ಆನ್ಲೈನ್ ಮೂಲಕ ಅಥವಾ ಆನ್-ಲೈನ್ ನಲ್ಲಿ ಸಿಗುವ ಅರ್ಜಿಗಯನ್ನು ಡೌನ್ಲೋಡ್ ಮಾಡಿಕೊಂಡು ಅಂಚೆ ಮೂಲಕವು ಸಲ್ಲಿಸಬಹುದಾಗಿದೆ.

ವೆಬ್ಸೈಟ್ನಲ್ಲಿ ಕೇಳಿರುವ ಎಲ್ಲಾ ದಾಖಲೆಗಳೊಂದಿಗೆ ಆನ್ಲೈನ್ ಅರ್ಜಿಯನ್ನು ಸಂಪೂರ್ಣವಾಗಿ ತಪ್ಪಿಲ್ಲದಂತೆ ತುಂಬಬೇಕು. ಅರ್ಜಿಯನ್ನು ತುಂಬಿದ ನಂತರ ಅದರ ಪ್ರತಿಯನ್ನು ಸೇವ್ ಮಾಡಿ ಇಟ್ಟುಕೊಳ್ಳಿ ಮುಂದಿನ ಆನ್ಲೈನ್ ವ್ಯವಹಾರಕ್ಕೆ ಸಹಾಯಕಾರಿಯಾಗುತ್ತದೆ.

ಒಟ್ಟು 2.50 ಲಕ್ಷದ ರೂಗಳನ್ನು ಸ್ಕಾಲರ್ಷಿಪ್ ಮೂಲಕ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದ ಅವಧಿ ಮುಗಿಯುವವರೆಗು ಹಂತ ಹಂತವಾಗಿ ವೇತನ ಪಡೆಯಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-07-2017

ಹೆಚ್ಚಿನ ಮಾಹಿತಿಗಾಗಿ www.foryoungwomeninscience.com ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
LOreal India For Young Women In Science Scholarship 2017.This Scholarship is only for girl students desirous of pursuing a degree course in Science/ Medical/ Engineering/ Biotechnology or any other scientific field, in a recognized institute in India
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X