ಮಹೀಂದ್ರಾ ಆಲ್ ಇಂಡಿಯಾ ಟ್ಯಾಲೆಂಟ್ ಸ್ಕಾಲರ್ಶಿಪ್

Posted By:

ಮಹೀಂದ್ರಾ ಆಲ್ ಇಂಡಿಯಾ ಟ್ಯಾಲೆಂಟ್ ಸ್ಕಾಲರ್ ಶಿಪ್ (ಮಹೀಂದ್ರಾರವರ ಅಖಿಲ ಭಾರತ ಪ್ರತಿಭಾ ವಿದ್ಯಾರ್ಥಿ ವೇತನಗಳು)ಗಾಗಿ ಕೆ.ಸಿ ಮಹೀಂದ್ರಾ ಎಜುಕೇಷನ್ ಟ್ರಸ್ಟ್ ಅರ್ಜಿಗಳನ್ನು ಆಹ್ವಾನಿಸಿದೆ.

ಹತ್ತು ಅಥವಾ ಹನ್ನೆರಡನೇ ತರಗತಿಯಲ್ಲಿ ತೇರ್ಗಡೆಯಾಗಿ ಸರ್ಕಾರದಿಂದ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ ಗಳಲ್ಲಿ ಡಿಪ್ಲೊಮಾ ಕೋರ್ಸ್ ಗಳಿಗೆ ಪ್ರವೇಶ ಪಡೆದಿರಬೇಕು. 

ಸಹಾಯದ ಅವಶ್ಯಕತೆ ಇರುವ ಮತ್ತು ಅರ್ಹತರಾದ 550 ವಿದ್ಯಾರ್ಥಿಗಳಿಗೆ ಗರಿಷ್ಠ 3 ವರ್ಷ ಕಾಲಾವಧಿಯವರೆಗೆ ವರ್ಷ ಒಂದಕ್ಕೆ ರೂ.10000/- ದಂತೆ ವಿದ್ಯಾರ್ಥಿವೇತನವನ್ನು ಟ್ರಸ್ಟ್ ನೀಡಲಿದೆ.

ಮಹೀಂದ್ರಾ ಆಲ್ ಇಂಡಿಯಾ ಸ್ಕಾಲರ್ಶಿಪ್

ಅರ್ಹತಾ ಮಾನದಂಡಗಳು

  • ಮಾನ್ಯತೆ ಪಡೆದಿರುವ ಶಾಲೆ/ಕಾಲೇಜಿನಿಂದ ಹತ್ತನೇ/ಹನ್ನೆರಡನೇ ತರಗತಿ ಪೂರ್ಣಗೊಳಿಸಿರಬೇಕು.
  • ಹೆಣ್ಣುಮಕ್ಕಳಿಗೆ, ಕೆಳಸ್ತರದ ವರಮಾನವುಳ್ಳ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ, ಅಂಗವಿಕಲ ವಿದ್ಯಾರ್ಥಿಗಳಿಗೆ ಹಾಗೂ ಸೇನಾಪಡೆಯ ಯೋಧರ ಮಕ್ಕಳಿಗೆ ಆಧ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಕೆ

ಅರ್ಜಿಯನ್ನು www.kcmet.org ಮೂಲಕ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-08-2017

ಹೆಚ್ಚಿನ ಮಾಹಿತಿಗಾಗಿ www.kcmet.org ಗಮನಿಸಿ

ಕೆಸಿ ಮಹೀಂದ್ರಾ ಸ್ಕಾಲರ್ಶಿಪ್

ಆರ್ಥಿಕವಾಗಿ ಹಿಂದುಳಿದಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಉನ್ನತ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಲು ಮಹೀಂದ್ರಾ ಸಂಸ್ಥೆ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. 6 ದಶಕಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಸಹಾಯ ಹಸ್ತ ಚಾಚಿರುವ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಶಿಕ್ಷಕರ ತರಬೇತಿ ಕುರಿತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.

ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದಿರುವ ಸಂಸ್ಥೆಯು ವಿದೇಶದಲ್ಲಿ ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೂ ವೇತನದ ಸೌಲಭ್ಯವನ್ನು ನೀಡುತ್ತಿದೆ.

English summary
To be eligible for this scholarship, the students should have passed 10th / 12th Standard or equivalent examinations and have secured admission in a government or any other recognized Polytechnic Institute for Diploma Courses in India.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia