ಶೆ.10ರಷ್ಟು ಹೆಚ್ಚಿದ ವೈದ್ಯಕೀಯ ಶಿಕ್ಷಣ ಶುಲ್ಕ

Posted By:

ವೈದ್ಯಕೀಯ (ಎಂಬಿಬಿಎಸ್‌) ಕೋರ್ಸ್‌ಗಳ ಶುಲ್ಕ ವಾರ್ಷಿಕ ಶೇ 10 ರಷ್ಟು ಹೆಚ್ಚಾಗಾಲಿದೆ. ಅಲ್ಲದೇ ಇದು ಮುಂದಿನ ಮೂರು ವರ್ಷಗಳವರೆಗೆ ಅನ್ವಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ.

ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ನಡೆಸಿದ ಸಭೆಯಲ್ಲಿ ರಾಜ್ಯ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಇದರಿಂದಾಗಿ 2017-18ನೇ ಸಾಲಿಗೆ ಎಂಬಿಬಿಎಸ್‌ ಕೋರ್ಸ್‌ ಶುಲ್ಕ ಸರ್ಕಾರಿ ಕಾಲೇಜುಗಳಲ್ಲಿ ₹ 70,000ದಿಂದ ₹ 77,000 ಮತ್ತು ಖಾಸಗಿ ಕಾಲೇಜುಗಳ ಶುಲ್ಕ ₹ 5.75 ಲಕ್ಷದಿಂದ ₹ 6.35 ಲಕ್ಷಕ್ಕೆ ಏರಿಕೆ ಆಗಲಿದೆ. ಆದರೆ, ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಮಧ್ಯೆ ಆಗಿರುವ ಸೀಟು ಒಪ್ಪಂದದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.

ವೈದ್ಯಕೀಯ ಶಿಕ್ಷಣ ಮತ್ತಷ್ಟು ದುಬಾರಿ

ರಾಜ್ಯದಲ್ಲಿಯೇ ಕಡಿಮೆ ಶುಲ್ಕ

ವೈದ್ಯಕೀಯ ಸೀಟುಗಳ ಶುಲ್ಕವು ಹೊರರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ ಎಂದು ಸಚಿವರು ಹೇಳಿದ್ದಾರೆ. ಹೊರರಾಜ್ಯಗಳಲ್ಲಿ ಎಂಬಿಬಿಎಸ್‌ ಶುಲ್ಕ ₹ 10 ಲಕ್ಷಕ್ಕಿಂತ ಹೆಚ್ಚಿದೆ. ಆ ರಾಜ್ಯಗಳನ್ನು ಗಮನಿಸಿ ಶುಲ್ಕ ನಿಗದಿ ಮಾಡಬೇಕು ಎಂದು ಖಾಸಗಿ ಕಾಲೇಜುಗಳು ಮನವಿ ಸಲ್ಲಿಸಿದ್ದವು. ಆದರೆ, ಕಳೆದ ವರ್ಷಕ್ಕಿಂತ ಶೇ 10ರಷ್ಟು ಮಾತ್ರ ಶುಲ್ಕ ಹೆಚ್ಚಿಸಲು ಅನುಮತಿ ನೀಡಲಾಗಿದೆ' ಎಂದು ಅವರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ವೈದ್ಯಕೀಯ ಕೋರ್ಸುಗಳ ಸೀಟು ಹಂಚಿಕೆಯನ್ನು ನೀಟ್‌ ಮೆರಿಟ್‌ ಪಟ್ಟಿ ಆಧರಿಸಿ ರಾಜ್ಯಕ್ಕೆ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಲಾಗುವುದು. ಜುಲೈ 5 ರಿಂದ ಎಂಬಿಬಿಎಸ್ ಕೌನ್ಸೆಲಿಂಗ್‌ ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.

350ಕ್ಕೆ ಏರಿದ ವೈದ್ಯಕೀಯ ಸೀಟು

ಈ ವರ್ಷ 350 ಎಂಬಿಬಿಎಸ್‌ ಸೀಟುಗಳು ಹೆಚ್ಚಳ ಆಗಿವೆ ಎಂದು ಶರಣ ಪ್ರಕಾಶ ಪಾಟೀಲ ಹೇಳಿದರು. ಮಂಡ್ಯ, ಹಾಸನ, ಶಿವಮೊಗ್ಗ, ರಾಯಚೂರು, ಬೆಳಗಾವಿ ಮತ್ತು ಬೀದರ್‌ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪ್ರವೇಶ ಮಿತಿಯನ್ನು 100ರಿಂದ 150 ಸೀಟುಗಳಿಗೆ ಮತ್ತು ಹುಬ್ಬಳ್ಳಿಯ ಕಿಮ್ಸ್‌ ಕಾಲೇಜಿನ ಪ್ರವೇಶ ಮಿತಿಯನ್ನು 150ರಿಂದ 200ಕ್ಕೆ ಹೆಚ್ಚಿಸಲು ಭಾರತೀಯ ವೈದ್ಯಕೀಯ ಮಂಡಳಿ ಅನುಮತಿ ನೀಡಿದೆ ಎಂದರು.

ದಂತ ವೈದ್ಯಕೀಯಕ್ಕೆ ಮತ್ತೊಂದು ಸಭೆ

ದಂತ ವೈದ್ಯಕೀಯ ಶಿಕ್ಷಣದ ಸಂಬಂಧ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ, ಶುಲ್ಕ ಮತ್ತು ಕೌನ್ಸಲಿಂಗ್ ಕುರಿತಾಗಿ ಇನ್ನೆರೆಡು ಮೂರು ದಿನಗಳಲ್ಲಿ ಆಡಳಿತ ಮಂಡಳಿಗಳ ಜೊತೆ ಮತ್ತೊಂದು ಸಭೆ ನಡೆಸುವುದಾಗಿ ಸಚಿವರು ತಿಳಿಸಿದ್ದಾರೆ.

ಸರ್ಕಾರಿ, ಖಾಸಗಿ ಮತ್ತು ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತ ಕಾಲೇಜಿನ ಎಲ್ಲ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ಕೌನ್ಸೆಲಿಂಗ್ ನಡೆಸಲಾಗುತ್ತದೆ.

ಡೀಮ್ಡ್‌ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರ್ಕಾರದ ಸಾರ್ವಜನಿಕ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್‌ಎಸ್‌) ಕೌನ್ಸೆಲಿಂಗ್‌ ನಡೆಸಲಿದೆ.

English summary
The Karnataka government has given in to the demands of private institutions and agreed to increase medical course fees by 10 percent a year.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia