ವೈದ್ಯಕೀಯ ಪರವಾನಗಿ ಪಡೆಯಲು 'ಎಕ್ಸಿಟ್' ಪರೀಕ್ಷೆ ಕಡ್ಡಾಯ

ಆಯುಷ್ ಸೇರಿದಂತೆ ಭಾರತೀಯ ವೈದ್ಯಕೀಯ ಪದ್ಧತಿ ಅನುಸರಿಸಲು ಪರವಾನಗಿ ಪಡೆಯಲು 'ಎಕ್ಸಿಟ್' ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.

ವೈದ್ಯಕೀಯ ಪದವೀಧರರು ಆಯುರ್ವೇದ ಸೇರಿದಂತೆ ಭಾರತೀಯ ವೈದ್ಯಕೀಯ ಪದ್ಧತಿ ಅನುಸರಿಸಲು ಪರವಾನಗಿ ಪಡೆಯಲು ಇನ್ನು ಹೊಸ ಪರೀಕ್ಷೆಯೊಂದರಲ್ಲಿ ಉತ್ತೀರ್ಣರಾಗಬೇಕಿದೆ.

ಆಯುಷ್ ಸಚಿವಾಲಯ ಹಾಗೂ ನೀತಿ ಆಯೋಗದ ಸಹಯೋಗದಲ್ಲಿ ಮಸೂದೆಯನ್ನು ಸಿದ್ಧಪಡಿಸಲಾಗಿದ್ದು ಈ ಅಂಶವನ್ನು ಪ್ರಸ್ತಾಪಿಸಲಾಗಿದೆ.

ವೈದ್ಯಕೀಯ ಪರವಾನಗಿ ಪರೀಕ್ಷೆ

 

ಮಸೂದೆ ಪ್ರಮುಖಾಂಶ

ಪಾರಂಪರಿಕ ವೈದ್ಯಕೀಯ ಪದ್ಧತಿ ಬೋಧನೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರ ಆಯ್ಕೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನಡೆಸುವ ಪ್ರಸ್ತಾವವೂ ಮಸೂದೆಯಲ್ಲಿದೆ.

ಪದವಿಪೂರ್ವ ಆಯುಷ್ ಕೋರ್ಸ್‌ಗೆ ಪ್ರವೇಶ ಬಯಸುವವರೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ತೇರ್ಗಡೆ ಹೊಂದುವುದು ಕಡ್ಡಾಯ ಎಂಬ ಅಂಶವೂ ಮಸೂದೆಯಲ್ಲಿದೆ.

ಹೊಸ ಪರೀಕ್ಷೆಯನ್ನು ಪಾಸು ಮಾಡುವ ಮೂಲಕ ಆಯುಷ್ ಪದ್ಧತಿಯಲ್ಲಿ ಚಿಕಿತ್ಸೆ ನೀಡುವವರು ಆಧುನಿಕ ವೈದ್ಯಕೀಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಚಿಕಿತ್ಸೆ ನೀಡುವವರು ಆಯುಷ್ ಪದ್ಧತಿಯಲ್ಲಿ ಚಿಕಿತ್ಸೆ ನೀಡಲು ಅವಕಾಶ ಸಿಗಲಿದೆ.

ಮಸೂದೆಯ ಉದ್ದೇಶ

ಭಾರತೀಯ ವೈದ್ಯಕೀಯ ಮತ್ತು ಹೋಮಿಯೊಪಥಿ ಪದ್ಧತಿಯ ರಾಷ್ಟ್ರೀಯ ಆಯೋಗ ಎಂಬ ಒಂದೇ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ.

ಸದ್ಯ ಭಾರತೀಯ ವೈದ್ಯಕೀಯ ಪದ್ಧತಿಯ ಕೇಂದ್ರೀಯ ಆಯೋಗ ಹಾಗೂ ಹೋಮಿಯೊಪಥಿ ಕೇಂದ್ರೀಯ ಆಯೋಗ ಎಂಬ ಎರಡು ಪ್ರತ್ಯೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

For Quick Alerts
ALLOW NOTIFICATIONS  
For Daily Alerts

English summary
A new bill has been proposed to clear the exit exam for medical graduates and to replace the two statutory bodies in Indian systems of medicine.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X