ಶಿಕ್ಷಕರ ಬೋಧನಾ ಮತ್ತು ಶೈಕ್ಷಣಿಕ ಗುಣಮಟ್ಟ ವೃದ್ಧಿಸಲು 'ಮೇಘಶಾಲಾ' ಆ್ಯಪ್

ಮೇಘಶಾಲಾ ಆ್ಯಪ್‌ನಲ್ಲಿ 2,500ಕ್ಕೂ ಹೆಚ್ಚಿನ ಬೋಧನಾಕಿಟ್‌ಗಳನ್ನು ಅಳವಡಿಸಲಾಗಿದೆ. ಇದು ಎರಡು ಬಗೆಯ ಮಲ್ಟಿಮೀಡಿಯಾ ಭಾಗಗಳನ್ನು ಹೊಂದಿರುತ್ತ‌ದೆ. ಒಂದರಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ, ಮತ್ತೊಂದರಲ್ಲಿ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು.

ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಶಿಕ್ಷಕರ ಬೋಧನಾ ಕೌಶಲ ವೃದ್ಧಿಸಲು 'ಮೇಘಶಾಲಾ' ಆ್ಯಪ್‌ ಅನ್ನು ಮೇಘಶಾಲಾ ಟ್ರಸ್ಟ್ ಸಿದ್ಧಪಡಿಸಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಇಂಟರ್ನೆಟ್ ಮತ್ತು ಸ್ಮಾರ್ಟ್ ಫೋನ್ ಗಳ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಸುಲಭವಾಗಿ ಶಿಕ್ಷಣ ಕ್ಷೇತ್ರದಲ್ಲಿನ ತೊಡಕುಗಳನ್ನು ನಿವಾರಿಸಲು ಈ ಆ್ಯಪ್ ಬಿಡುಗಡೆ ಮಾಡಲಾಗಿದೆ. ಇದನ್ನು ಗೂಗಲ್‌ ಪ್ಲೇ ಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು, ಇದು ಆಫ್‌ಲೈನ್‌ನಲ್ಲೂ ಕಾರ್ಯನಿರ್ವಹಿಸಲಿದೆ.

ಗುಣಮಟ್ಟದ ಶಿಕ್ಷಣಕ್ಕಾಗಿ ಮೇಘಶಾಲಾ ಆ್ಯಪ್

ಮೇಘಶಾಲಾ ಆ್ಯಪ್‌ನಲ್ಲಿ 2,500ಕ್ಕೂ ಹೆಚ್ಚಿನ ಬೋಧನಾಕಿಟ್‌ಗಳನ್ನು ಅಳವಡಿಸಲಾಗಿದೆ. ಇದು ಎರಡು ಬಗೆಯ ಮಲ್ಟಿಮೀಡಿಯಾ ಭಾಗಗಳನ್ನು ಹೊಂದಿರುತ್ತ‌ದೆ. ಒಂದರಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು. ಮತ್ತೊಂದರಲ್ಲಿ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು. ವಿದ್ಯಾರ್ಥಿಗಳ ಸ್ಲೈಡ್‍ನಲ್ಲಿ ಪಠ್ಯಗಳಿಗೆ ಸಂಬಂಧಿಸಿದ ಚಿತ್ರ, ವಿಡಿಯೊ ಮತ್ತು ಪ್ರಶ್ನಾವಳಿಗಳು ಇರುತ್ತವೆ. ಇವುಗಳ ಆಧಾರದ ಮೇಲೆ ವಿದ್ಯಾರ್ಥಿಗಳು ಸುಲಭವಾಗಿ ಪಠ್ಯವನ್ನು ಓದಬಹುದಾಗಿದೆ.

'ಅನುಭವವುಳ್ಳ ಶಿಕ್ಷಕರು ಮತ್ತು ಶಿಕ್ಷಣ ತಜ್ಞರ ತಂಡವು ಮೂರು ವರ್ಷಗಳಿಂದ ಅವಿರತವಾಗಿ ಶ್ರಮಿಸಿ ಈ ಆ್ಯಪ್ ಸಿದ್ಧಪಡಿಸಿದೆ. ಇದು ಅತ್ಯಂತ ವಿಶ್ವಾಸಾರ್ಹ ಮತ್ತು ಭರವಸೆಯ ಆ್ಯಪ್ ಆಗಿದೆ. ಡಿಸೆಂಬರ್‌ ವೇಳೆಗೆ ರಾಜ್ಯದ 50 ಸಾವಿರ ಶಿಕ್ಷಕರಿಗೆ ಈ ಆ್ಯಪ್ ಅನ್ನು ತಲುಪಿಸುವ ಉದ್ದೇಶವಿದೆ' ಎಂದು ಮೇಘಶಾಲಾ ಟ್ರಸ್ಟ್‌ನ ಸಹ ಸಂಸ್ಥಾಪಕಿ ಜ್ಯೋತಿ ತ್ಯಾಗರಾಜನ್ ತಿಳಿಸಿದ್ದಾರೆ.

'ಶಿಕ್ಷಕರ ಮಾರ್ಗದರ್ಶನ ಸ್ಲೈಡ್‍ಗಳನ್ನು ಶಿಕ್ಷಕರು ಮಾತ್ರ ನೋಡಬಹುದು. ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡುವುದು ಹೇಗೆ, ಅದರ ಕಾರ್ಯಶೈಲಿ ಹೇಗಿರಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ'

ಗ್ರಾಮೀಣ ಭಾಗದ ಶಿಕ್ಷಕರಿಗೆ ಸರಿಯಾದ ಬೋಧನಾ ಸಾಮಗ್ರಿಗಳು ಇರುವುದಿಲ್ಲ. ಪಠ್ಯಕ್ಕೆ ಸಂಬಂಧಿಸಿದಂತೆ ಕೆಲ ಗೊಂದಲಗಳು ಇರುವುದು ಸಾಮಾನ್ಯ. ಇದರ ನಿವಾರಣೆಗಾಗಿ ಬೇರೆ ಶಿಕ್ಷಕರೊಂದಿಗೆ ಸಂವಾದ ನಡೆಸಲೂ ಅವಕಾಶ ಕಲ್ಪಿಸಲಾಗಿದೆ. ಆ್ಯಪ್‌ನಲ್ಲಿ ಹೆಸರು ನೋಂದಾಯಿಸಿದ ಶಿಕ್ಷಕರು ಪರಸ್ಪರ ಸಂವಾದ ನಡೆಸಬಹುದು ಎಂದು ಅವರು ಹೇಳಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Meghashala trust has launched the Meghashala app for Government Schools 'educational standards and teachers' teaching skills. It can be downloaded at the Google Play Store. It will work offline too.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X