ಮೆಸ್ಕಾಂ ಪರೀಕ್ಷೆ: ಇ-ಹಾಲ್ ಟಿಕೆಟ್ ಡೌನ್ಲೋಡ್ ಗೆ ಲಭ್ಯ

Posted By:

ಮೆಸ್ಕಾಂನಲ್ಲಿ  (ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ) ಸಹಾಯಕ ಲೆಕ್ಕಾಧಿಕಾರಿ ಮತ್ತು ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಸಂಬಂಧಿಸಿದಂತೆ ನಡೆಯಲಿರುವ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ ನಲ್ಲಿ ಬಿಡುಗಡೆಮಾಡಲಾಗಿದೆ.

ಸಹಾಯಕ ಲೆಕ್ಕಾಧಿಕಾರಿ ಮತ್ತು ಸಹಾಯಕ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಆಪ್ಟಿಟ್ಯೂಡ್ ಟೆಸ್ಟ್ ಅನ್ನು ದಿನಾಂಕ 08-04-2017 ಮತ್ತು 09-04-2017 ರಂದು ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಸಲಾಗುವುದು.

ಇ-ಹಾಲ್ ಟಿಕೆಟ್ ಡೌನ್ಲೋಡ್ ಗೆ ಲಭ್ಯ

ಮೆಸ್ಮಾಂ ವೆಬ್ಸೈಟ್ ನಲ್ಲಿ ಇ-ಹಾಲ್ ಟಿಕೆಟ್ ಲಭ್ಯವಾಗುತ್ತಿದ್ದು ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಡೌನ್ಲೋಡ್ ಮಾಡುವ ವಿಧಾನ

  • ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
  • ಹಾಲ್ ಟಿಕೆಟ್ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಜನ್ಮ ದಿನಾಂಕ, ಮತ್ತು ಅರ್ಜಿ ಸಂಖ್ಯೆಯೊಂದಿಗೆ ಲಾಗಿನ್ ಆಗಿ
  • ಇ-ಹಾಲ್ ಟಿಕೆಟ್ನ ಮುದ್ರಿತ ಪ್ರತಿಯನ್ನು ಪಡೆಯಿರಿ.

ವೆಬ್ಸೈಟ್ ವಿಳಾಸ: www.mesco.in

ಪ್ರಮುಖ ದಿನಾಂಕಗಳು

ಆಪ್ಟಿಟ್ಯೂಡ್ ಟೆಸ್ಟ್ ನಡೆಯುವ ದಿನಾಂಕ: 08-04-2017 ಮತ್ತು 09-04-2017

ಸೂಚನೆ

  • ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳಲ್ಲಿ ಆಪ್ಟಿಟ್ಯೂಡ್ ಟೆಸ್ಟ್ ಗೆ ಹಾಜರಾಗುವ ಅಭ್ಯರ್ಥಿಗಳು ಇ-ಹಾಲ್ ಟಿಕೆಟ್ ನ ಮುದ್ರಿತ ಪ್ರತಿಯನ್ನು (ಎರಡು ಪ್ರತಿಗಳನ್ನು) ಹಾಜರುಪಡಿಸತಕ್ಕದ್ದು.
  • ಅಭ್ಯರ್ಥಿಗಳು ಪರೀಕ್ಷಾ ಸ್ಥಳ/ಕೇಂದ್ರಗಳ ಬದಲಾವಣೆ ಬಯಸಿ ಸಲ್ಲಿಸುವ ಯಾವುದೇ ಮನವಿ ಅಥವಾ ಕೋರಿಕೆಗಳನ್ನು ಪರಿಗಣಿಸಲಾಗುವುದಿಲ್ಲ.
  • ಆಪ್ಟಿಟ್ಯೂಡ್ ಟೆಸ್ಟ್ ಗೆ ಯಾವುದೇ ಮುದ್ರಿತ ಇ-ಹಾಲ್ ಟಿಕೆಟ್ ಗಳನ್ನು ಮೆಸ್ಕಾಂ ವತಿಯಿಂದ ಪ್ರತ್ಯೇಕವಾಗಿ ಅಂಚೆ ಮೂಲಕ ರವಾನಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ಇ-ಹಾಲ್ ಟಿಕೆಟ್ ನಲ್ಲಿ ನಮೂದಿಸಿರುವ ಸೂಚನೆಗಳನ್ನು ಸರಿಯಾಗಿ ಅನುಕರಿಸುವುದು. ಅಭ್ಯರ್ಥಿಗಳು ಇ-ಹಾಲ್ ಟಿಕೆಟ್ ನಲ್ಲಿ ನಮೂದಿಸಿರುವ ಯಾವುದಾದರು ಒಂದು ಗುರುತಿನ ಚೀಟಿಯನ್ನು ಪರೀಕ್ಷಾ ವೇಳೆಯಲ್ಲಿ ಹಾಜರುಪಡಿಸತಕ್ಕದ್ದು.

ಸಹಾಯವಾಣಿ

ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವ ಸಂದರ್ಭದಲ್ಲಿ ತೊಂದರೆ ಉಂಟಾದಲ್ಲಿ ದಿನಾಂಕ: 07 -04 -2017 ರ ಒಳಗೆ ಕಚೇರಿಯ ಕೆಲಸದ ವೇಳೆಯಲ್ಲಿ ಸಹಾಯವಾಣಿಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.
ಸಹಾಯವಾಣಿ ಸಂಖ್ಯೆ: 0824 -2885759, 2885160

ಸಹಾಯಕ ಮತ್ತು ಕಿರಿಯ ಸಹಾಯಕ ಹುದ್ದೆಗಳಿಗೆ ನಡೆಸಲಾಗುವು ಆನ್ಲೈನ್ ಆಪ್ಟಿಟ್ಯೂಡ್ ಪರೀಕ್ಷೆಯ ದಿನಾಂಕವನ್ನು ನಂತರದ ದಿನಗಳಲ್ಲಿ ತಿಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ www.mesco.in ಗಮನಿಸಿ

English summary
candidates can download the e-hall tickets at MESCOM official website

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia