ಎನ್ ಐ ಆರ್ ಎಫ್ ರ್ಯಾಂಕಿಂಗ್ : ಬೆಂಗಳೂರಿನ ಐ ಐ ಎಸ್ ಸಿ ನಂಬರ್ ಒನ್

ನ್ಯಾಷನಲ್ ಇನ್ಸ್ಟಿಟ್ಯೂಶನಲ್ ರ್ಯಾಂಕಿಂಗ್ ಫ್ರೇಂವರ್ಕ್ (ಎನ್ ಐ ಆರ್ ಫ್) ಮೂಲಕ ದೇಶದಲ್ಲಿನ ಶಿಕ್ಷಣ ಸಂಖ್ಯೆಗಳು ಮತ್ತು ವಿಶ್ವವಿದ್ಯಾಲಯಗಳ ಅಧ್ಯಯನ ನಡೆಸಿ ಎರಡನೇ ಬಾರಿಗೆ ರ್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಿದೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ 2017 ನೇ ಸಾಲಿನ ಶೈಕ್ಷಣಿಕ ಸಂಸ್ಥೆಗಳ ರ್ಯಾಕಿಂಗ್ ಪಟ್ಟಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜವಡೇಕರ್ ಬಿಡುಗಡೆ ಮಾಡಿದ್ದಾರೆ.

ನ್ಯಾಷನಲ್ ಇನ್ಸ್ಟಿಟ್ಯೂಶನಲ್ ರ್ಯಾಂಕಿಂಗ್ ಫ್ರೇಂವರ್ಕ್ (ಎನ್ ಐ ಆರ್ ಫ್) ಮೂಲಕ ದೇಶದಲ್ಲಿನ ಶಿಕ್ಷಣ ಸಂಖ್ಯೆಗಳು ಮತ್ತು ವಿಶ್ವವಿದ್ಯಾಲಯಗಳ ಅಧ್ಯಯನ ನಡೆಸಿ ಎರಡನೇ ಬಾರಿಗೆ ರ್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಿದೆ.

ಬೆಂಗಳೂರಿನ ಐ ಐ ಎಸ್ ಸಿ ನಂಬರ್ ಒನ್

ಈ ಬಾರಿಯು ಬೆಂಗಳೂರಿನ ಐ ಐ ಎಸ್ ಸಿ ನಂಬರ್ ಒನ್

ದೇಶದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಪ್ರಥಮ ಸ್ಥಾನ ಪಡೆದಿದೆ. ಕಳೆದ ಬಾರಿಯು ಐ ಐ ಎಸ್ ಸಿ ಪ್ರಥಮ ಸ್ಥಾನಗಳಿಸಿ ದೇಶದ ಗಮನ ಸೆಳೆದಿತ್ತು ಈಗ ಎರಡನೇ ಬಾರಿ ಪ್ರಥಮ ಸ್ಥಾನ ಪಡೆಯುವ ಮೂಲಕ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೆಹಲಿಯ ಜೆ ಎನ್ ಯು, ಉತ್ತರ ಪ್ರದೇಶದ ಬನಾರಸ್ ವಿವಿ, ಬೆಂಗಳೂರಿನ ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ಸೈಂಟಿಫಿಕ್ ರಿಸರ್ಚ್ ಮತ್ತು ಕೋಲ್ಕತ್ತದ ಜಾದವ್ಪುರ್ ವಿವಿಗಳು ಕ್ರಮವಾಗಿ 2, 3, 4 ಮತ್ತು 5 ನೇ ಸ್ಥಾನ ಅಲಂಕರಿಸಿವೆ.

ಮ್ಯಾನೇಜ್ಮೆಂಟ್ ಸಂಸ್ಥೆಗಳು

ಮ್ಯಾನೇಜ್ಮೆಂಟ್ ಶಿಕ್ಷಣದಲ್ಲಿ ಗುಜರಾತ್ ನ ಅಹಮದಾಬಾದ್ ಐಐಎಂ ಪ್ರಥಮ ಸ್ಥಾನ ಪಡೆದರೆ, ಕಳೆದ ಬಾರಿ ನಿರ್ವಹಣ ಸಂಸ್ಥೆಗಳ ಪೈಕಿ ಪ್ರಥಮ ಸ್ಥಾನದಲ್ಲಿದ್ದ ಬೆಂಗಳೂರಿನ ಐಐಎಂ ಈ ಬಾರಿ ಎರಡನೇ ಸ್ಥಾನ ಅಲಂಕರಿಸಿದೆ. ಕೋಲ್ಕತ್ತ ಮೂರನೇ ಸ್ಥಾನದಲ್ಲಿದ್ದರೆ ಲಕ್ನೌ ಮತ್ತು ಕೇರಳದ ಐಐಎಂ ಕ್ರಮವಾಗಿ ನಾಲಕ್ಕು ಮತ್ತು ಐದನೇ ರ್ಯಾಂಕ್ ಪಡೆದಿವೆ.

ಏಳನೇ ಸ್ಥಾನಕ್ಕೆ ಕುಸಿದ ಮಣಿಪಾಲ್ ಕಾಲೇಜ್

ದೇಶದ ಔಷಧಿ ವಿದ್ಯಾಲಯಗಳ ಪೈಕಿ ಕರ್ನಾಟಕದ ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಫಾರ್ಮಸಿ ಏಳನೇ ಸ್ಥಾನ ಗಳಿಸಿದೆ. ಕಳೆದ ವರ್ಷದ ಪಟ್ಟಿಯಲ್ಲಿ ಮಣಿಪಾಲದ ಫಾರ್ಮಸಿ ಕಾಲೇಜು ಬಾರಿ ಅಗ್ರಸ್ಥಾನ ಪಡೆದುಕೊಂಡಿತ್ತು, ಆದರೆ ಈ ಬಾರಿ ದೆಹಲಿಯ ಜಮಿಯ ಹಮ್ದರ್ದ್ ಪ್ರಥಮ ಸ್ಥಾನ ಪಡೆದಿದೆ. ಮೈಸೂರಿನ ಜೆಎಸ್ಎಸ್ ಫಾರ್ಮಸಿ ಕಾಲೇಜು 10ನೇ ಸ್ಥಾನ ಪಡೆದುಕೊಂಡಿದ್ದು, ತನ್ನ ಹಿಂದಿನ ಸ್ಥಾನವನ್ನು ಹಾಗೆ ಉಳಿಸಿಕೊಂಡಿದೆ. 50 ಫಾರ್ಮಾ ಕಾಲೇಜುಗಳಲ್ಲಿ ರಾಜ್ಯದ 4 ಫಾರ್ಮಾ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿದೆ. ಮಂಗಳೂರಿನ ಎನ್ ಜಿ ಎಸ್ ಎಂ ಸಂಸ್ಥೆ 27 ಸ್ಥಾನ ಪಡೆದಿದ್ದರೆ, ಬೆಳಗಾವಿಯ ಕೆ.ಎಲ್.ಇ ಶಿಕ್ಷಣ ಸಂಸ್ಥೆಯು 37 ನೇ ಸ್ಥಾನ ಅಲಂಕರಿಸಿದೆ.

ಇಂಜಿನಿಯರಿಂಗ್ ಚೆನ್ನೈ ಟಾಪ್

ಇಂಜಿನಿಯರಿಂಗ್ ವಿಭಾಗದಲ್ಲಿ ಚೆನ್ನೈನ ಐಐಟಿ ಮದ್ರಾಸ್ ಸಂಸ್ಥೆಯು ಪ್ರಥಮ ಸ್ಥಾನ ಪಡೆದಿದೆ. ಎರಡನೇ ಸ್ಥಾನದಲ್ಲಿ ಮುಂಬೈನ ಐಐಟಿ ಬಾಂಬೆ, ಮೂರನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ಐಐಟಿ ಖರಗ್ಪುರ್ ಇದ್ದರೆ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ದೆಹಲಿಯ ಐಐಟಿ ಮತ್ತು ಉತ್ತರ ಪ್ರದೇಶದ ಕಾನ್ಪುರ ಐಐಟಿ ಇವೆ.

ರ್ಯಾಂಕಿಂಗ್ ಪ್ರಕ್ರಿಯೆ

ವಿದ್ಯಾರ್ಥಿಗಳು, ಮಾಜಿ ವಿದ್ಯಾರ್ಥಿಗಳು, ಪೋಷಕರು, ನೌಕರರು ಹಾಗೂ ಸಾರ್ವಜನಿಕರಲ್ಲಿ ಒಂದು ಶಿಕ್ಷಣ ಸಂಸ್ಥೆ ಬಗ್ಗೆ ಇರುವ ಅರಿವನ್ನು ಪ್ರಮುಖ ಮಾನದಂಡಗಳ ಪೈಕಿ ಒಂದಾಗಿಸಿ ಈ ರ‍್ಯಾಂಕ್‌ ಪಟ್ಟಿಯನ್ನು ತಜ್ಞರು ಸಿದ್ಧಪಡಿಸಿದ್ದಾರೆ. ಬೋಧನೆ, ಕಲಿಕಾ ಸಂಪನ್ಮೂಲ, ಪದವಿ, ಸಂಶೋಧನೆಗಳು ಇನ್ನಿತರೆ ಅಂಶಗಳು ಅಂಕ ನೀಡಲು ಮಾನದಂಡವಾಗಿವೆ.

ಎನ್ ಐ ಆರ್ ಎಫ್

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು 2015 ರಿಂದ ನ್ಯಾಷನಲ್ ಇನ್ಸ್ಟಿಟ್ಯೂಶನಲ್ ರ್ಯಾಂಕಿಂಗ್ ಫ್ರೇಂವರ್ಕ್ (ಎನ್ ಐ ಆರ್ ಫ್) ಮೂಲಕ ದೇಶದ ವಿವಿಗಳ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಅಧ್ಯಯಿಸುತ್ತ ಬಂದಿದೆ. ಕಳೆದ ವರ್ಷ ಮೊದಲನೇ ಪಟ್ಟಿ ಬಿಡುಗಡೆ ಮಾಡಿದ್ದು ಈ ವರ್ಷ ಎರಡನೇ ಪಟ್ಟಿ ಬಿಡುಗಡೆಗೊಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ ಗಮನಿಸಿ www.nirfindia.org

For Quick Alerts
ALLOW NOTIFICATIONS  
For Daily Alerts

English summary
The Union Human Resource Development Minister Prakash Javadekar released the India Rankings 2017 of National Institutional Ranking Framework - NIRF today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X