ಮೈಕ್ರೋಸಾಫ್ಟ್ ವತಿಯಿಂದ ಭಾರತದಲ್ಲಿ ಶಿಕ್ಷಕರಿಗೆ ತರಬೇತಿ

ವಿಶ್ವ ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಭಾರತದಲ್ಲಿ ಸ್ಟಾರ್ಟಪ್ ಗಳ ಬೆಳವಣಿಗೆ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳಿಂದ ಪ್ರಾರಂಭಿಸಿದ್ದ ಯೋಜನೆಯ ವರದಿಯನ್ನು ಬಿಡುಗಡೆಗೊಳಿಸಿದೆ.

ಈ ವರದಿಯ ಪ್ರಕಾರ ಭಾರತದ 4000 ಸ್ಟಾರ್ಟಪ್ ಗಳಿಗೆ ಬೆಂಬಲ ನೀಡುತ್ತಿರುವ ಮೈಕ್ರೋಸಾಫ್ಟ್ ಕಂಪನಿಯು 30 ಸಾವಿರ ಯುವಕ/ಯುವತಿಯರಿಗೆ ತರಬೇತಿ ನೀಡಿದೆ.

ನಾನಾ ರಾಜ್ಯ ಸರಕಾರಗಳು ಮತ್ತು ಲಾಭರಹಿತ ಸಂಘಟನೆಗಳಿಗೆ ನೆರವಾಗುವ ನಿಟ್ಟಿನಲ್ಲಿ 26 ಸಾವಿರ ಶಿಕ್ಷಕರಿಗೆ ತರಬೇತಿ ಒದಗಿಸಿದೆ.

ಮೈಕ್ರೋಸಾಫ್ಟ್ ತರಬೇತಿ

 

2016 ಏಪ್ರಿಲ್ ನಿಂದ 2017 ರ ಮಾರ್ಚ್ ನ ಒಂದು ವರ್ಷದ ಅವಧಿಯಲ್ಲಿ ಈ ತರಬೇತಿ ಪ್ರಕ್ರಿಯೆ ನಡೆದಿದೆ ಎಂದು ಮೈಕ್ರೋಸಾಫ್ಟ್ ಇಂಡಿಯಾ ಸಿಟಿಜನ್ ಶಿಪ್ ವರದಿಯಲ್ಲಿ ಹೇಳಲಾಗಿದೆ.

ವಿವಿಧ ಯೋಜನೆಗಳು

ಶಿಕ್ಷಾ ಯೋಜನೆಯಡಿಯಲ್ಲಿ ತಮಿಳುನಾಡಿನಲ್ಲಿ 8 ಸಾವಿರ ಶಿಕ್ಷಕರಿಗೆ, ರಾಜಸ್ಥಾನ ಮತ್ತು ಮಧ್ಯಪ್ರದೇಶ 36100 ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕುರಿತಾಗಿ ತರಬೇತಿ ನೀಡಿರುವುದಾಗಿ ಮೈಕ್ರೋಸಾಫ್ಟ್ ತಿಳಿಸಿದೆ. ಅಲ್ಲದೆ ಸಾಕ್ಷಾ ಯೋಜನೆಯಡಿಯಲ್ಲಿ 123 ವಿಶ್ವವಿದ್ಯಾಲಯಗಳಲ್ಲಿ 3307 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಇದರಿಂದ ತರಬೇತಿ ಪಡೆದವರು 21 ವಿವಿಗಳ 1126 ಮಂದಿಗೆ ತರಬೇತಿ ನೀಡಿದ್ದಾರೆ.

ಬಿಝ್ ಸ್ಪಾರ್ಕ್ ಮತ್ತು ಮೈಕ್ರೋಸಾಫ್ಟ್ ಆಕ್ಸಲರೇಟರ್ ಎಂಬ ಯೋಜನೆಗಳೊಂದಿಗೆ ಮುಂಬರುವ ದಿನಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಮತ್ತು ಹೆಚ್ಚಿನ ಸ್ಟಾರ್ಟಪ್ ಗಳ ಬೆಳವಣಿಗೆಗೆ ಸಹಕಾರಿಯಾಗುವಂತೆ ಕೊಡುಗೆಗಳನ್ನು ನೀಡುವುದಾಗಿ ಮೈಕ್ರೋಸಾಫ್ಟ್ ತಿಳಿಸಿದೆ.

ಭಾರತದ ಸ್ಟಾರ್ಟಪ್ ಗಳ ಯಶಸ್ಸಿನ ಕಥನಕ್ಕೆ ಕೊಡುಗೆ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಮೈಕ್ರೋಸಾಫ್ಟ್ ಎಜುಕೇಟರ್ ಕಮ್ಯುನಿಟಿ ಪ್ರೊಗ್ರಾಂನ ವತಿಯಿಂದ ಈಗಾಗಲೇ ಮಹಾರಾಷ್ಟ್ರ ಸರ್ಕಾರ ಕ್ಯೂ ಆರ್ ಕೋಡ್ ಟೆಕ್ಸ್ಟ್ ಬುಕ್ ಯೋಜನೆ ಅಳವಡಿಸಿಕೊಳ್ಳಲಾಗಿದ್ದು, ಶಿಕ್ಷಕರಿಗೆ ಪುಸ್ತಕಗಳಲ್ಲಿ ಇರುವುದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುತ್ತಿದೆ.

ಇನ್ನು ಮೈಕ್ರೋಸಾಫ್ಟ್ ಮೂಲಕ ಹತ್ತು ಮಿಲಿಯನ್ ಡಾಲರ್ ಮೌಲ್ಯದ ತಂತ್ರಜ್ಞಾನ ಮತ್ತು ನಗದನ್ನು ಭಾರತದಲ್ಲಿನ ಶಿಕ್ಷಣಕ್ಕೆ ಮೇಲೆ ಹೂಡಲು ನಿರ್ಧರಿಸಲಾಗಿದೆ. ಭಾರತ ಸರ್ಕಾರದ ಕೌಶಲ್ಯ ಭಾರತದ ಪರಿಕಲ್ಪನೆಗೆ ಪೂರಕವಾಗಿ ಶಿಕ್ಷಣ, ಆರೋಗ್ಯ, ಕೃಷಿ ವಲಯಗಳಲ್ಲಿ ಸಹಕಾರಿಯಾಗುವುದಾಗಿ ಮೈಕ್ರೋಸಾಫ್ಟ್ ಹೇಳಿದೆ.

For Quick Alerts
ALLOW NOTIFICATIONS  
For Daily Alerts

English summary
Microsoft has supported over 4,000 Indian start-ups, skill training for 30,000 youth and helped train 26,000 teachers while working with several state governments and not-for-profit organisations between April 2016 and March 2017 in India.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more