ಭಾರತೀಯ ವಿದ್ಯಾರ್ಥಿಗಳ ಮೇಲೆ ಮೈಕ್ರೋಸಾಫ್ಟ್ ಕಣ್ಣು: ಸಿಗಲಿದೆ 1.39 ಕೋಟಿ ರೂ. ಪ್ಯಾಕೆಜ್ !

Posted By:

ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್ ಭಾರತದ ಕಡೆಗೆ ಬಲೆ ಬೀಸಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಒಂದು ಕೋಟಿಗೂ ಹೆಚ್ಚಿನ ಪ್ಯಾಕೇಜ್ ನೀಡಲು ಮುಂದಾಗಿದ್ದು, ಅದಕ್ಕಾಗಿ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ)ಯಲ್ಲಿ ಸೂಕ್ತ ಪ್ರತಿಭೆಗಳ ಶೋಧ ಕಾರ್ಯ ಆರಂಭಿಸಿದೆ.

ಕ್ಯಾಂಪಸ್ ಪ್ಲೇಸ್ಮೆಂಟ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿರುವ ಮೈಕ್ರೋಸಾಫ್ಟ್ ಆಯ್ಕೆಯಾದವಾಗಿ ಬರೋಬ್ಬರಿ ರೂ.1.39 ಕೋಟಿ ಪ್ಯಾಕೆಜ್ ನೀಡುವುದಾಗಿ ಹೇಳಿದೆ.

ಭಾರತೀಯ ವಿದ್ಯಾರ್ಥಿಗಳ ಮೇಲೆ ಮೈಕ್ರೋಸಾಫ್ಟ್ ಕಣ್ಣು

ಅಮೆರಿಕಾದ ವಾಷಿಂಗ್ಟನ್‌ನಲ್ಲಿನ ಮೈಕ್ರೋಸಾಫ್ಟ್ ಹೆಡ್‌ಕ್ವಾರ್ಟರ್ಸ್‍ನಲ್ಲಿ ಕೆಲಸ ಮಾಡಲು ಮೈಕ್ರೋಸಾಫ್ಟ್ ನೇಮಕಾತಿ ನಡೆಸುತ್ತಿದ್ದು, ಆಯ್ಕೆಯಾದವರಿಗೆ ವಾರ್ಷಿಕವಾಗಿ 2,14,600 ಡಾಲರ್‌ಗಳಷ್ಟು ಪರ್‌ಫಾರ್ಮೆನ್ಸ್ ಬೋನಸ್, 15,000 ಡಾಲರ್ ಜಾಯಿನಿಂಗ್ ಬೋನಸ್ ದೊರೆಯಲಿದ್ದು. ಉಳಿದ 70,000 ಡಾಲರ್‌ಗಳು ಸ್ಟಾಕ್ ಯೂನಿಟ್ ರೂಪದಲ್ಲಿ ತ್ವರೆ ಮಾಡಲಿದೆ. ಇದು ಭಾರತೀಯ ರೂ ಗಳಲ್ಲಿ 1.39 ಕೋಟಿಯಾಗಲಿದೆ ಎನ್ನಲಾಗಿದೆ.

ದೇಶದಲ್ಲಿ ವಿವಿಧಡೆ ಇರುವ ಭಾರತೀಯ ತಾಂತ್ರಿಕ ಸಂಸ್ಥೆಗಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕಾನ್ಪುರ, ಬಾಂಬೆ, ಮದ್ರಾಸ್, ರೂರ್ಕಿ ಐಐಟಿ ಕ್ಯಾಂಪಸ್‌ ವಿದ್ಯಾರ್ಥಿಗಳು ಹಾಗೂ ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿನ ವಿದ್ಯಾರ್ಥಿಗಳಿಗೆ ಈ ಭಾರೀ ಪ್ರಮಾಣದ ಪ್ಯಾಕೇಜ್ ಆಫರ್ ಮಾಡುತ್ತಿದೆ ಎನ್ನುವ ವಿಷಯ ಬಹಿರಂಗಗೊಂಡಿದೆ.

ಭಾರತೀಯ ವಿದ್ಯಾರ್ಥಿಗಳ ಮೇಲೆ ಇತರೆ ಕಂಪನಿಗಳ ಪ್ಯಾಕೇಜ್

ಸ್ಯಾಮ್ ಸಂಗ್: 96.8 ಲಕ್ಷ ರೂ.
ರುಬ್ರಿಕ್: 74 ಲಕ್ಷ ರೂ.
ಟವರ್ ರಿಸರ್ಚ್: 40 ಲಕ್ಷ ರೂ.
ಒರಾಕಲ್ : 20 ಲಕ್ಷ ರೂ.

English summary
US technology giant Microsoft is likely to offer the highest pay package at the Indian Institutes of Technology (IITs).

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia