'ಐಐಎಂ'ಗಳಿಗೆ ಹೆಚ್ಚಿನ ಸ್ವಾಯತ್ತತೆ: ಪದವಿ ಪ್ರಮಾಣ ಪತ್ರ ನೀಡಲು ಅವಕಾಶ

Posted By:

ಇಂಡಿನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂ) ಇನ್ನು ಮುಂದೆ ಪದವಿ ಪ್ರಮಾಣ ಪತ್ರವನ್ನು ನೀಡಲಿವೆ.

ವಿದೇಶದಲ್ಲಿ ಐಐಎಂ ಶಿಕ್ಷಣ ನೀಡುವ ವಿದೇಯಕಕ್ಕೆ ಗ್ರೀನ್ ಸಿಗ್ನಲ್

ಐಐಎಂ ಗಳಿಗೆ ಹೆಚ್ಚಿನ ಸ್ವಾಯತ್ತತೆ ಕಲ್ಪಿಸುವ ಸರಕಾರದ ಉಪಕ್ರಮಕ್ಕೆ ಕೊನೆಗೂ ಶಾಸನಬದ್ಧವಾಗಿ ಗ್ರೀನ್‌ ಸಿಗ್ನಲ್‌ ದೊರೆತಿದ್ದು, ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಬದಲಾಗಿ ಪದವಿ ಪ್ರಮಾಣ ಪತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ.

ಸಂಗೀತ ನೃತ್ಯ ಅಕಾಡೆಮಿ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ

ಐಐಎಂ: ಡಿಪ್ಲೊಮಾ ಬದಲು ಪದವಿ

ಈ ಸಂಬಂಧ ಪರಿಷ್ಕೃತ ವಿಧೇಯಕಕ್ಕೆ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರು ಅಂಕಿತ ಹಾಕಿದ್ದು, ಇದೀಗ ಅದು ಕಾನೂನಾಗಿ ಬದಲಾಗಿದೆ. ಹೊಸ ಕಾನೂನಿನಂತೆ, ಐಐಎಂ ಆಡಳಿತ ವ್ಯವಸ್ಥೆಯಲ್ಲಿ ಸರಕಾರದ ಪಾತ್ರವನ್ನು ನಿರ್ಬಂಧಿಸಲಾಗಿದೆ.

ಈ ಕಾನೂನಿನ ಮೂಲಕ ಐಐಎಂ ಆಡಳಿತ ವ್ಯವಸ್ಥೆಯಲ್ಲಿ ಸರಕಾರದ ಎಲ್ಲ ಹಸ್ತಕ್ಷೇಪಗಳನ್ನು ನಿರ್ಬಂಧಿಸಿದ್ದೇವೆ. ಇವಿನ್ನು ಸ್ವಾಯತ್ತ ಸಂಸ್ಥೆಗಳಾಗಲಿದ್ದು, ತಮ್ಮ ಆಡಳಿತದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳಲಿವೆ ಎಂದು ಮಾನವ ಸಂಪನ್ಮೂಲ ಸಚಿವರಾದ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಫೆಬ್ರುವರಿ 9ರಂದು ಸಂಸತ್ತಿನಲ್ಲಿ 'ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳ ಮಸೂದೆ 2017'ನ್ನು ಮಂಡಿಸಿದರು. ಜುಲೈ 2017ರಲ್ಲಿ ಲೋಕಸಭೆಯಲ್ಲೂ, ಡಿ.19ರಂದು ರಾಜ್ಯಸಭೆಯಲ್ಲೂ ಅನುಮೋದನೆಗೊಂಡ ಹೊಸ ವಿಧೇಯಕ, ಐಐಎಂಗೆ ತನ್ನ ನಿರ್ದೇಶಕರು ಹಾಗೂ ಸಿಬ್ಬಂದಿ ನೇಮಕ ಸೇರಿದಂತೆ ಹಲವು ಅಧಿಕಾರಗಳನ್ನು ನೀಡಿದೆ. ಜತೆಗೆ ಇದುವರೆಗೆ ನೀಡುತ್ತಿದ್ದ 'ಪಿ.ಜಿ.ಡಿಪ್ಲೊಮಾ' ಬದಲಿಗೆ ಪದವಿ ನೀಡಲು ಕೂಡ ಹೊಸ ಕಾನೂನಿನಲ್ಲಿ ಐಐಎಂಗೆ ಅಧಿಕಾರವಿದೆ.

English summary
A new law has been accorded to the Indian Institutes of Management (IIM) to give more autonomy. Accordingly, IIMs may give their graduate a master's degree instead of diploma.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia