ಎನ್‌ಸಿಇಆರ್‌ಟಿ ಪುಸ್ತಕ: ಆನ್-ಲೈನ್ ನಲ್ಲಿ ಹೆಚ್ಚಿದ ಬೇಡಿಕೆ

ದೇಶಾದ್ಯಂತ ಕಳೆದ ಒಂದು ತಿಂಗಳಲ್ಲೇ ವಿದ್ಯಾರ್ಥಿಗಳು, ಶಾಲೆಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದ್ದು, ಸುಮಾರು 2.4 ಕೋಟಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಮುಂಗಡ ಬುಕ್ಕಿಂಗ್‌ ಮಾಡಲಾಗಿದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಆನ್-ಲೈನ್ ಪುಸ್ತಕ ಬುಕಿಂಗ್ ಗೆ ಭಾರಿ ಬೇಡಿಕೆ ಉಂಟಾಗಿದೆ.

ದೇಶಾದ್ಯಂತ ಕಳೆದ ಒಂದು ತಿಂಗಳಲ್ಲೇ ವಿದ್ಯಾರ್ಥಿಗಳು, ಶಾಲೆಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದ್ದು, ಸುಮಾರು 2.4 ಕೋಟಿ ಎನ್‌ಸಿಆರ್‌ಟಿ ಪಠ್ಯಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಮುಂಗಡ ಬುಕ್ಕಿಂಗ್‌ ಮಾಡಲಾಗಿದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಈಗಾಗಲೇ 1ರಿಂದ 12ನೇ ತರಗತಿವರೆಗಿನ ಎಲ್ಲ ಪುಸ್ತಕಗಳನ್ನು ವೆಬ್‌ಸೈಟ್‌ನಲ್ಲಿ ಮುಕ್ತವಾಗಿರಿಸಿದೆ. ಪುಸ್ತಕಗಳ ಕೊರತೆಯಿಂದ ವಿದ್ಯಾರ್ಥಿಗಳು ದುಬಾರಿ ಬೆಲೆಯ ಖಾಸಗಿ ಪ್ರಕಾಶಕರ ಪಠ್ಯಪುಸ್ತಕಗಳನ್ನು ಕೊಳ್ಳುತ್ತಿದ್ದರು. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಎನ್‌ಸಿಇಆರ್‌ಟಿ ಆನ್‌ಲೈನ್‌ ಮಾರಾಟಕ್ಕೆ ಮುಂದಾಗಿತ್ತು.

ಎನ್‌ಸಿಇಆರ್‌ಟಿ ಪುಸ್ತಕಕ್ಕೆ ಹೆಚ್ಚಿದ ಬೇಡಿಕೆ

ಎನ್‌ಸಿಇಆರ್‌ಟಿ ಆನ್-ಲೈನ್ ಬುಕಿಂಗ್ ಪೊರ್ಟಲ್‌ ಸೆ.23ರ ವರೆಗೆ ತೆರದಿರಲಿದ್ದು, ಬೇಡಿಕೆಯ ಮೇರೆಗೆ ಪಠ್ಯಪುಸ್ತಕಗಳನ್ನು ಪ್ರಕಟಿಸುತ್ತೇವೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ಹೃಷಿಕೇಶ ಸೇನಾಪತಿ ಹೇಳಿದ್ದಾರೆ.

ಖಾಸಗಿ ಹಾಗೂ ಸರಕಾರಿ ಶಾಲೆಗಳಿಂದ ಬೇಡಿಕೆ ಬಂದಿದೆ. ಕರ್ನಾಟಕ ಶಿಕ್ಷಣ ಮಂಡಳಿ 37 ಲಕ್ಷ ಹಾಗೂ ಅರುಣಾಚಲ್‌ ಪ್ರದೇಶ 29 ಲಕ್ಷ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿವೆ, ಕಳೆದ ವರ್ಷ ಒಟ್ಟು 4.63 ಕೋಟಿ ಪುಸ್ತಕ ಪ್ರಿಂಟ್ ಮಾಡಲಾಗಿದೆ. ಈ ವರ್ಷ ಸುಮಾರು 6 ಕೋಟಿ ಪುಸ್ತಕಗಳಿಗೆ ಬೇಡಿಕೆ ಬರಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಸೇನಾಪತಿ ತಿಳಿಸಿದ್ದಾರೆ.

ಶಾಲೆಗಳು ತಮ್ಮ ಸಮೀಪದ ಎನ್‌ಸಿಇಆರ್‌ಟಿ ಪುಸ್ತಕ ಮಾರಾಟಗಾರರಿಂದ ಅಥವಾ ಪ್ರಾದೇಶಿಕ ಉತ್ಪಾದನೆ ಮತ್ತು ಪೂರೈಕೆ ಕೇಂದ್ರಗಳಿಂದ (ಅಹ್ಮದಾಬಾದ್, ಕೋಲ್ಕತ, ಗುವಾಹಟಿ ಮತ್ತು ಬೆಂಗಳೂರು) ಪಡೆಯಬಹುದಾಗಿದೆ. ಕಳೆದ ವರ್ಷ ಪಠ್ಯಪುಸ್ತಕದ ಕೊರತೆ ಇರಲಿಲ್ಲ. ಪುಸ್ತಕ ಮಾರಾಟಗಾರರು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಸ್ಟಾಕ್ ಮಾಡಿಟ್ಟುಕೊಂಡು, ಖಾಸಗಿ ಪ್ರಕಾಶಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆದರೆ ಈಗ ಎಲ್ಲರಿಗೂ ಸುಲಭವಾಗಿ ಪುಸ್ತಕಗಳ ಬಗ್ಗೆ ವಿವರ ಪಡೆಯಲು ಸಾಧ್ಯವಾಗುತ್ತದೆ ಎಂದವರು ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Over 2.4 crore NCERT textbooks have been pre-booked by schools and students from across the country within a month after the council launched an online portal.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X