ಸರ್ಕಾರಿ ಶಾಲೆಗೆ ತೆರಳಿ ಪಾಠ ಮಾಡಿದ ಮೈಸೂರಿನ ಒಡೆಯರ್!

Posted By:

ರಾಜಮನೆತನದವರು ಸೇನೆಗೆ ಸೇರಿದ್ದಾರೆ, ವಿಮಾನ ಚಲಾಯಿಸುತ್ತಾರೆ, ಹೋಟೆಲ್ ನಲ್ಲಿ ಕೆಲಸ ಮಾಡುತ್ತಾರೆ, ಶಾಲೆಗಳಲ್ಲಿ ಪಾಠ ಮಾಡುತ್ತಾರೆ ಎನ್ನುವ ಸುದ್ದಿಗಳನ್ನು ನಾವು ಯೂರೋಪಿನ ದೇಶಗಳಲ್ಲಿ ಮಾತ್ರ ಕೇಳಿದ್ದೆವು ಆದರೆ ನಮ್ಮ ದೇಶದಲ್ಲೂ ಈ ರೀತಿಯ ರಾಜರು ಇದ್ದಾರೆ ಎನ್ನುವುದನ್ನು ಮೈಸೂರು ಸಂಸ್ಥಾನದ ಉತ್ತಾರಧಿಕಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಿರೂಪಿಸಿದ್ದಾರೆ.

ಸರ್ಕಾರಿ ಶಾಲೆಗಳ ಉಳಿವಿಗಾಗಿ ಕಲಿಸು ಫೌಂಡೇಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯದುವೀರ್ ಅವರು ಮೈಸೂರಿನ ಸರ್ಕಾರಿ ಶಾಲೆಯೊಂದರಲ್ಲಿ ಒಂದು ಗಂಟೆಗಳ ಕಾಲ ಮಕ್ಕಳಿಗೆ ಪಾಠ ಮಾಡಿದ್ದಾರೆ.

ಸರ್ಕಾರಿ ಶಾಲೆ ಮಕ್ಕಳಿಗೆ ಮಹಾರಾಜರಿಂದ ಪಾಠ

ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿನೀಡಿದ್ದ ಅವರು, ಮಕ್ಕಳೊಂದಿಗೆ ಸಂವಾದ ನಡೆಸುವುದರ ಜೊತೆಗೆ ಪ್ರಕೃತಿ ಜೊತೆಗೆ ಬದುಕುವಂತೆ ಬುದ್ದಿಮಾತು ಕೂಡ ಹೇಳಿದ್ದಾರೆ. ಶಾಲೆಯಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ಕಳೆದ ಅವರು, ಪರಿಸರ ಕಾಳಜಿ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು.

ಪರಿಸರ ಸಂರಕ್ಷಣೆ ದಿನನಿತ್ಯದ ಕೆಲಸ. ಸುತ್ತಮುತ್ತಲಿದ ಪರಿಸರವನ್ನು ಸುಚಿತ್ವದಿಂದ ಇಟ್ಟುಕೊಳ್ಲುವುದು, ಪ್ಲಾಸ್ಟಿಕ್​ನಿಂದ ಆಗುವ ಹಾನಿಯನ್ನು ಮನಗಂಡು, ಪರಿಸರವನ್ನು ಪ್ಲಾಸ್ಟಿಕ್​ ಮುಕ್ತ ಗೊಳಿಸುವ ಬಗ್ಗೆ ಮಕ್ಕಳಿಗೆ ಹೇಳಿಕೊಟ್ಟರು. ಇದರ ಜೊತೆಗೆ ಮಕ್ಕಳಿಗೆ ಗಣಿತ ಪಾಠವನ್ನು ಯದಿವೀರ್​ ಹೇಳಿಕೊಟ್ಟರು.

ಕೇವಲ ಕಾರ್ಯಕ್ರಮಗಳ ಉದ್ಘಾಟನೆಗಳಿಗೆ ಮಾತ್ರ ಭೇಟಿ ನೀಡುವ ಗಣ್ಯವ್ಯಕ್ತಿಗಳ ನಡುವೆ ಯದುವೀರ್ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಇದೇ ರೀತಿ ಪ್ರತಿಯೊಬ್ಬ ಗಣ್ಯವ್ಯಕ್ತಿಗಳು ಸರ್ಕಾರಿ ಶಾಲೆಗಳತ್ತ ನಿರಂತರವಾಗಿ ಗಮನ ಹರಿಸುತ್ತಿದ್ದರೆ ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳಾಗುವುದರಲ್ಲಿ ಎರಡು ಮಾತಿಲ್ಲ.

English summary
Mysore prince Yaduveer Krishnadatta Chamaraja Wadiyar participated in kalisu foundation's save government school project and he took one hour class for the students of government school about environment.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia