ಇಂದು ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬ. ಈ ದಿನವನ್ನು ಸಾಮಾಜಿಕ ಜಾಲತಾಣಿಗರು ʼರಾಷ್ಟ್ರೀಯ ನಿರುದ್ಯೋಗ ದಿನʼ ವೆಂದು ಆಚರಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ 'ಸೇವಾ ಸಪ್ತ' ಹೆಸರಿನಲ್ಲಿ ವಾರ ಪೂರ್ತಿ ಆಚರಣೆಯನ್ನ ಪ್ರಾರಂಭಿಸಿದೆ. ಆದರೆ ಇನ್ನೊಂದೆಡೆ ರಾಷ್ಟ್ರೀಯ ನಿರುದ್ಯೋಗ ದಿನ ಎಂಬ ಹ್ಯಾಶ್‌ಟ್ಯಾಗ್ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವನ್ನು ವಿರೋಧಿಸಿ ಹಾಗೂ ನಿರುದ್ಯೋಗ ಯುವಜನತೆಗೆ ಬೆಂಬಲವಾಗಿ ನಿಲ್ಲುವ ಸಲುವಾಗಿ ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ.
ಭಾರತದ ಯುವಕರು ಎಸ್‌ಎಸ್‌ಸಿ ಮತ್ತು ಇತರ ನೇಮಕಾತಿ ಪ್ರಕ್ರಿಯೆಗಳಲ್ಲಿ ಸುಧಾರಣೆಗಳನ್ನ ಕೋರಿದ್ದು, ಈ ವಾರದಾದ್ಯಂತ ಯುವಜನತೆ ಸಮಸ್ಯೆಗಳನ್ನ ಟ್ವಿಟ್ಟರ್‌ನಲ್ಲಿ ತಿಳಿಸಲು ಪ್ರಯತ್ನಿಸಿದ್ದಾರೆ. #NationalUnemploymentDay ಹ್ಯಾಶ್ ಟ್ಯಾಗ್ ನಡಿ 20 ಲಕ್ಷಕ್ಕೂ ಹೆಚ್ಚು ಟ್ವೀಟ್ ಗಳನ್ನು ಮಾಡಿದ್ದಾರೆ.
For Daily Alerts