ಭೂಮಿ ರಕ್ಷಿಸಲು 'ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್' ನೇಮಕಕ್ಕೆ ನಾಸಾದಿಂದ ಅರ್ಜಿ ಆಹ್ವಾನ

ಹಾಲಿವುಡ್ ಸಿನಿಮಾಗಳಲ್ಲಿನ ಸೂಪರ್ ಹೀರೋಗಳ ರೀತಿ ಭೂಮಿಯನ್ನು ರಕ್ಷಣೆ ಮಾಡಲು 'ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್' ಹುದ್ದೆಯನ್ನು ರೂಪಿಸಿದ್ದು, ಈ ಹೊಸ ಕೆಲಸಕ್ಕಾಗಿ ನಾಸಾ ಅರ್ಜಿಗಳನ್ನು ಆಹ್ವಾನಿಸಿದೆ.

ಭೂಮಿಗೆ ಅನ್ಯಗ್ರಹದ ಉಪಟಳದಿಂದ ಭೂಮಿಯನ್ನು ಕಾಪಾಡಲು ಅಮೆರಿಕ 'ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್' ಹುಡುಕಾಟದಲ್ಲಿದೆ.

ಹಾಲಿವುಡ್ ಸಿನಿಮಾಗಳಲ್ಲಿನ ಸೂಪರ್ ಹೀರೋಗಳ ರೀತಿ ಭೂಮಿಯನ್ನು ರಕ್ಷಣೆ ಮಾಡಲು 'ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್' ಹುದ್ದೆಯನ್ನು ರೂಪಿಸಿದ್ದು, ಈ ಹೊಸ ಕೆಲಸಕ್ಕಾಗಿ ನಾಸಾ ಅರ್ಜಿಗಳನ್ನು ಆಹ್ವಾನಿಸಿದೆ.

ಕೆಲಸದ ವಿಶೇಷತೆ

'ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್' ಹುದ್ದೆಗೆ ನೇಮಕವಾಗುವವರು, ಗ್ರಹದ ರಕ್ಷಣೆ ಅಂದರೆ ಜೈವಿಕ ಮತ್ತಿತರ ಕಲ್ಮಶಗಳಿಂದ ಭೂಮಿಗೆ ಯಾವುದೇ ತೊಂದರೆ ಆಗದಂತೆ ತಡೆಯುವುದು. ಅನ್ಯಗ್ರಹ ಕಲ್ಮಶದಿಂದ ಭೂಮಿಯನ್ನು ರಕ್ಷಣೆ ಮಾಡುವುದು, ಜತೆಗೆ ಬೇರೆ ಗ್ರಹಗಳನ್ನು ಭೂಮಿಯಲ್ಲಿ ವಾಸಿಸುವವರಿಂದ ರಕ್ಷಿಸುವುದು ಆ ಅಧಿಕಾರಿಯ ಜವಾಬ್ದಾರಿಯಾಗುತ್ತದೆ.

'ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್' ನೇಮಕಕ್ಕೆ ನಾಸಾದಿಂದ ಅರ್ಜಿ ಆಹ್ವಾನ

ಅಮೆರಿಕ ಸರಕಾರದ ಅಧಿಕೃತ ಉದ್ಯೋಗ ವೆಬ್ ಸೈಟ್ ನಲ್ಲಿ ಈ ಬಗ್ಗೆ ಜಾಹೀರಾತು ಕೂಡ ಪ್ರಕಟವಾಗಿದೆ. ಅಮೆರಿಕದ ವಾಸಿಗಳು ಇದಕ್ಕೆ ಅರ್ಜಿ ಹಾಕಿಕೊಳ್ಳಬಹುದು. ಆಗಸ್ಟ್ ಹದಿನಾಲ್ಕನೇ ತಾರೀಕು ಅರ್ಜಿ ಸಲ್ಲಿಸುವುದಕ್ಕೆ ಕೊನೆ ದಿನವಾಗಿದೆ.

ಅಂದಹಾಗೆ ಈ ಕೆಲಸಕ್ಕೆ ಆರಂಕಿಯ ಸಂಬಳ ನಿಗದಿ ಮಾಡಲಾಗಿದೆ. ವಾರ್ಷಿಕ 124,406 ರಿಂದ 187,000 ಅಮೆರಿಕನ್ ಡಾಲರ್ ನಷ್ಟು ಸಂಬಳ ನಿಗದಿ ಮಾಡಲಾಗಿದೆ.

ಭೂಮಿಯ ಹೊರ ಜಗತ್ತಿನಿಂದ ಎದುರಾಗಬಹುದಾದ ಕಲ್ಮಶ ತಡೆಯುವುದು ಅಥವಾ ಭೂಮಿಯನ್ನು ರಕ್ಷಿಸಿಕೊಳ್ಳುವುದು ಖಂಡಿತಾ ಸವಾಲಿನ ಕೆಲಸ. ಮೂರರಿಂದ ಐದು ವರ್ಷದ ಅವಧಿಗೆ ಈ ಕೆಲಸ ಮಾಡಬೇಕಾಗುತ್ತದೆ. ಅತಿ ಬುದ್ಧಿವಂತರ ಜತೆಗೆ ಸೇರಿ ಕೆಲಸ ನಿರ್ವಹಿಸಬೇಕಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Nasa is hiring someone who can defend Earth from alien contamination. The full-time role of "planetary protection officer" will involve ensuring that humans in space do not contaminate planets and moons, as well as ensuring that alien matter does not infect Earth.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X