ಸಂಖ್ಯಾ ಪ್ರೇಮಿ ನೆನಪಿನಲ್ಲಿ ರಾಷ್ಟ್ರೀಯ ಗಣಿತ ದಿನ

1887 ರ ಡಿಸೆಂಬರ್ 22ರಂದು ತಮಿಳುನಾಡಿನ ಈರೋಡಿನಲ್ಲಿ ಜನಿಸಿದ ಶ್ರೀನಿವಾಸ ರಾಮಾನುಜನ್ ಗಣಿತವಿಜ್ಞಾನ ಕ್ಷೇತ್ರದಲ್ಲಿ ನಡೆಸಿದ ಸಂಶೋಧನೆ ಅಗಣಿತ. ಅವರ ಸಾಧನೆ ಈ ಜಗತ್ತಿನಲ್ಲಿ ಮನುಕುಲವಿರುವವರೆಗೂ ಶಾಶ್ವತವಾಗಿರುತ್ತದೆ.

ವಿಶ್ವ ಗಣಿತಕ್ಕೆ ಭಾರತದ ಕೊಡುಗೆ ಅಪಾರ. ಸೊನ್ನೆ ಯನ್ನು ಪ್ರಪಂಚಕ್ಕೆ ನೀಡಿದ ಭಾರತ ಗಣಿತದ ಗಣಿ ಶ್ರೀನಿವಾಸ ರಾಮಾನುಜನ್ ರನ್ನು ಕೂಡ ಕೊಟ್ಟಿದೆ.

ವಿಶ್ವವಿಖ್ಯಾತ ಗಣಿತಜ್ಞ ದಿವಂಗತ ಶ್ರೀನಿವಾಸ ರಾಮಾನುಜನ್ ನೆನಪಿನಲ್ಲಿ ಡಿಸೆಂಬರ್ 22 'ರಾಷ್ಟ್ರೀಯ ಗಣಿತ ದಿನ'ವಾಗಿ ಆಚರಿಸಲಾಗುತ್ತದೆ. ಇಂದು ಅವರ 130 ನೇ ಹುಟ್ಟಿದ ವರ್ಷದ ಆಚರಣೆ ಮಾಡಲಾಗುತ್ತಿದೆ.

ಯುವಕರಿಗೆ ಭಾರತೀಯ ಸೇನೆಯಲ್ಲಿ ಉತ್ತಮ ಕೆರಿಯರ್ಯುವಕರಿಗೆ ಭಾರತೀಯ ಸೇನೆಯಲ್ಲಿ ಉತ್ತಮ ಕೆರಿಯರ್

1887 ರ ಡಿಸೆಂಬರ್ 22ರಂದು ತಮಿಳುನಾಡಿನ ಈರೋಡಿನಲ್ಲಿ ಜನಿಸಿದ ಶ್ರೀನಿವಾಸ ರಾಮಾನುಜನ್ ಗಣಿತವಿಜ್ಞಾನ ಕ್ಷೇತ್ರದಲ್ಲಿ ನಡೆಸಿದ ಸಂಶೋಧನೆ ಅಗಣಿತ.

ವಡೋದರಾದಲ್ಲಿ ದೇಶದ ಮೊದಲ 'ರಾಷ್ಟ್ರೀಯ ರೈಲು ಮತ್ತು ಸಾಗಣೆ ವಿಶ್ವವಿದ್ಯಾಲಯ'ವಡೋದರಾದಲ್ಲಿ ದೇಶದ ಮೊದಲ 'ರಾಷ್ಟ್ರೀಯ ರೈಲು ಮತ್ತು ಸಾಗಣೆ ವಿಶ್ವವಿದ್ಯಾಲಯ'

ರಾಷ್ಟ್ರೀಯ ಗಣಿತ ದಿನ

ರಾಮಾನುಜನ್ ಬದುಕಿದ್ದು ಕೇವಲ 32 ವಷ೯ಗಳು. ಆದರೆ ಅವರ ಸಾಧನೆ ಈ ಜಗತ್ತಿನಲ್ಲಿ ಮನುಕುಲವಿರುವವರೆಗೂ ಶಾಶ್ವತವಾಗಿರುತ್ತದೆ. ಇ೦ದು ನಾವು ಬದುಕುತ್ತಿರುವ ಡಿಜಿಟಲ್ ತ೦ತ್ರಜ್ಞಾನಕ್ಕೆ ಅವರ ಕೊಡುಗೆ ಅಪಾರ. ಇ೦ದಿನ ಎಷ್ಟೋವೈಜ್ಞಾನಿಕ ಆವಿಷ್ಕಾರಗಳಿಗೆ ಅವರು ರೂಪಿಸಿದ ಗಣಿತದ ಸೂತ್ರಗಳೇ ಕಾರಣ ಎ೦ದರೆ ಅತಿಶಯೋಕ್ತಿಯಲ್ಲ

ರಾಮಾನುಜನ್ ಅವರ ಸಂಶೋಧನೆಗಳಲ್ಲಿ ಮುಖ್ಯವಾಗಿ ಈ ಕ್ಷೇತ್ರಗಳನ್ನು ಹೆಸರಿಸಬಹುದು

  • ಅವಿಭಾಜ್ಯ ಸಂಖ್ಯೆಗಳ ಬಗ್ಗೆ ಸಂಶೋಧನೆ
  • ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ
  • ರಾಮಾನುಜನ್ ಊಹೆ
  • ರಾಮಾನುಜನ್-ಪೀಟರ್ಸನ್ ಊಹೆ

ಅವರು ಮಾಯಾಚೌಕಗಳು, ಸಂಖ್ಯಾಸಿದ್ಧಾಂತ, ಎಲಿಪ್ಟಿಕಲ್ ಇಂಟಿಗ್ರಲ್ಸ್ ಇತ್ಯಾದಿ ಗಣಿತದ ಸಮಸ್ಯೆಗಳನ್ನು ತಾವೇ ಸೃಷ್ಟಿಸಿಕೊಂಡು ಅದನ್ನು ಪರಿಹರಿಸುತ್ತಿದ್ದರು.

ಗಣಿತಾಸಕ್ತಿಯನ್ನು ಬಿಡದೆ ಸರ್ಕಾರದ ಸ್ಕಾಲರ್‌ಶಿಪ್‌ನಿಂದಾಗಿ ಲಂಡನ್‌ಗೆ ತೆರಳಿ ಜೆ.ಹೆಚ್.ಹಾರ್ಡಿಯವರೊಡನೆ ಸೇರಿ ವಿಭಾಗೀಕರಣ ಫಲನ, ಉಚ್ಛ ಅತ್ಯಂತ ಅವಿಭಾಜ್ಯ ಸಂಖ್ಯೆಗಳು, ವರ್ಗಗಳ ಮೊತ್ತಗಳಾಗಿ ಸಂಖ್ಯೆಗಳ ನಿರೂಪಣೆ, ಸಂತತ ಭಿನ್ನರಾಶಿಗಳು, ಟೋಫಲನದ ಬಗ್ಗೆ ಸಂಶೋಧನೆ ಕೈಗೊಂಡರು.

ತಮ್ಮ ಗುರು ಮತ್ತು ಮತ್ತೊಬ್ಬ ಗಣಿತಜ್ಞ ಜಿ ಎಚ್ ಹಾರ್ಡಿ ಅವರೊಂದಿಗೆ ಲಂಡನ್ ನಲ್ಲಿ ನಡೆಸಿದ ಸಂಶೋಧನೆ ಗಣಿತ ಶಾಸ್ತ್ರದ ಹಲವು ಕಗ್ಗಂಟುಗಳಿಗೆ ಉತ್ತರ ನೀಡಿತ್ತು.

ಲಂಡನ್ ಮ್ಯಾಥಮೆಟಿಕಲ್ ಸೊಸೈಟಿ, ಫೆಲೊ ಆಫ್ ರಾಯಲ್ ಸೊಸೈಟಿ ಮುಂತಾದ ಗೌರವಗಳನ್ನು ಪಡೆದಿದ್ದ ಶ್ರೀನಿವಾಸ ರಾಮಾನುಜನ್ ಅತಿ ಕಿರಿಯ ವಯಸ್ಸಿನಲ್ಲಿ ಅಂದರೆ ತಮ್ಮ 32ನೆ ವಯಸ್ಸಿನಲ್ಲಿ ಆರೋಗ್ಯದ ತೊಂದರೆಗಳಿಂದ ಮೃತಪಟ್ಟರು.

ರಾಮಾನುಜನ್ ಬಗ್ಗೆ ತಿಳಿಯಬೇಕೆಂದರೆ 2016 ರಲ್ಲಿ ತೆರೆಕಂಡ "The Man Who Knew Infinity' ಚಿತ್ರ ನೋಡುವುದು ಉತ್ತಮ. ರಾಮಾನುಜನ್ ಗಣಿತವನ್ನು ಅವರೇ ಕಲಿತರು. ಅದರಲ್ಲಿ ಹೊಸ ಆವಿಷ್ಕಾರ ಮಾಡಿದರು. ಜಗತ್ತಿನ ಗಣಿತಕ್ಕೆ ರಾಮಾನುಜನ್ ಅವರ ಕೊಡುಗೆ ಅಪಾರ. ಈ ಚಿತ್ರವು ರಾಮಾನುಜನ್ ಜೀವನ ಚರಿತ್ರೆಯನ್ನು ತೆರೆದಿಡುತ್ತದೆ.

ಕೆರಿಯರ್ ಟ್ರೆಂಡ್ಸ್ 2018: ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿಕೆರಿಯರ್ ಟ್ರೆಂಡ್ಸ್ 2018: ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

For Quick Alerts
ALLOW NOTIFICATIONS  
For Daily Alerts

English summary
The Indian mathematical genius Srinivasa Ramanujan was born on 22 December 1887 and died on 26 April 1920. It was in recognition of his contribution to mathematics the Government of India decided to celebrate Ramanujan's birthday as the National Mathematics Day every year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X